ರಾಜೀವ್ ಸಿಕ್ಕಿದೆ ಗೋಲ್ಡನ್ ಪಾಸ್ …. ನಾಮಿನೇಶನ್ ನಿಂದ ಬಚಾವಾಗೋಕೆ ಸುವರ್ಣಾವಕಾಶ..!
ಬೆಂಗಳೂರು : ಈ ವಾರದ ಎಲಿಮಿನೇಷನ್ ರೌಂಡ್ ಪ್ರತಿವಾರಕ್ಕಿಂತ ತುಂಬಾನೆ ವಿಭಿನ್ನ. ಯಾಕಂದ್ರೆ ಕಿಚ್ಚ ಸುದೀಪ್ ಈ ವಾರ ಎಲಿಮಿನೇಟ್ ಆಗೋರನ್ನ ಟೇಜ್ ಮೇಲೆ ಅನೌನ್ಸ್ ಮಾಡಲ್ಲ. ಇನ್ ಫ್ಯಾಕ್ಟ್ ಈ ವಾರ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ನಡೆದಿಲ್ಲ. ಕಾರಣ ಕಿಚ್ಚ ಅವರು ಕೊಂಚ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಬಿಗ್ ಬಾಸ್ ಬೇರೆಯದ್ದೇ ಪ್ಲಾನ್ ಮಾಡಿ ಸದಸ್ಯರಿಗೆ ವಿಸೇಷ ಚಟುವಟಿಕೆ ನೀಡಿದ್ದಾರೆ.
7ನೇ ವಾರದ ವೀಕೆಂಡ್ ಎಪಿಸೋಡ್ ನಲ್ಲಿ ಮನೆಯ ಸದಸ್ಯರಿಗೆ ಗೋಲ್ಡ್ ಪಾಸ್ ಗೆಲ್ಲುವ ಅವಕಾಶ ಕೊಡಲಾಗಿತ್ತು. ಟಾಸ್ಕ್ ನಲ್ಲಿ ಜಟಾಪಟಿ ನಡುವೆ ರಾಜೀವ್ ಪಾಸ್ ಪಡೆದುಕೊಂಡು ನಾಮಿನೇಷನ್ ನಿಂದ ಬಚಾವಾಗುವ ಸುವರ್ಣಾವಕಾಶವನ್ನ ಗಿಟ್ಟಿಸಿಕೊಂಡಿದ್ದಾರೆ.
ಅಂದ್ಹಾಗೆ ಇದು ಇಮ್ಯುನಿಟಿ ಪಾಸ್… ಈ ಪಾಸ್ ಇರುವವರು ಮನೆಯಿಂದ ಹೊರ ಹೋಗುವಂತಹ ಸಂದರ್ಭ ಬಂದರೆ ಇದನ್ನ ಉಪಯೋಗಿಸಿ ಬಚಾವಾಗಬಹುದು.. ಹೀಗಾಗಿ ಈ ಪಾಸ್ ಗಾಗಿ ಟಫ್ ಕಾಂಪಿಟೇಶನ್ ಇತ್ತು. ಆದ್ರೆ ಕಡೆಯದಾಗಿ ಗೆದ್ದಿದ್ದು ಮಾತ್ರ ರಾಜೀವ್.. ಆದ್ರೆ ರಾಜೀವ್ ಬಳಿಯೂ ಕೂಡ ಆ ಪಾಸ್ ಸೇಫ್ ಆಗಿಲ್ಲ.
ಹೌದು ಟಾಸ್ಕ್ ನ ಅನ್ವಯ ರಾಜೀವ್ ಒಂದು ವೇಳೆ ಆ ಪಾಸ್ ಅನ್ನ ಎಲ್ಲಾದರೂ ಮರೆತು ಇಟ್ಟು ಅದು ಬೇರೆ ಅವರ ಕೈಗೆ ಸಿಕ್ಕರೆ ಆ ಸುವರ್ಣಾವಕಾಶ ರಾಜೀವ್ ಕೈತಪ್ಪಿ ಬೇರೆ ಸದಸ್ಯರ ಕೈಸೇರುತ್ತೆ. ಹೀಗಾಗಿ ರಾಜೀವ್ ತುಂಬಾನೆ ಜೋಪಾನವಾಗಿ ತಮ್ಮ ಪಾಸ್ ಅನ್ನ ಕಾಯಬೇಕಾಗಿದೆ.