ರೆಡಿ ಆಯ್ತು ಬಿಗ್ ಬಾಸ್ ದೊಡ್ಮನೆ – 9 ಸೀಸನ್ ನಲ್ಲಿ ಏನೇನ್ ಬದಲಾವಣೆ ?
ಕನ್ನಡದ ಮೊದಲ ಬಿಗ್ ಬಾಸ್ OTT ಬಿಡುಗಡೆಯಾದ ನಂತರ ಎಂದಿನಂತೆ ಕಿರುತೆರೆಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಸೀಸನ್ 9’ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ಶನಿವಾರದಿಂದ (ಸೆಪ್ಟೆಂಬರ್ 24) ಬಿಗ್ ಬಾಸ್ ಟಿವಿ ಸೀಸನ್ಗೆ ಕಿಚ್ಚ ಸುದೀಪ್ ಚಾಲನೆ ನೀಡಿದ್ದಾರೆ.
ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಪ್ರದರ್ಶನಕ್ಕೆ ಎಲ್ಲಾ ರೀತಿಯಲ್ಲೂ ಮನೆ ಸೆಟ್ ಆಗಿದೆ. ಈ ಬಾರಿ ಟಿವಿ ಸೀಸನ್ನಲ್ಲಿ ಹಲವು ವಿಶೇಷತೆ ಇರಲಿವೆಯಾದರೂ ಬಿಗ್ ಬಾಸ್ ಮನೆಗೆ ಹೆಚ್ಚಿನ ಬದಲಾವಣೆಗಳೇನನ್ನೂ ಮಾಡುತ್ತಿಲ್ಲ ಎನ್ನಲಾಗಿದೆ.
ಕಿರುತೆರೆಗೂ ಮೊದಲು OTT ಯಲ್ಲಿ ಬಂದಿದ್ದ ಬಿಗ್ ಬಾಸ್ 16 ಸ್ಪರ್ಧಿಗಳ ಪೈಕಿ 4 ಸ್ಪರ್ಧಿಗಳು ಒಟಿಟಿಯಿಂದ ಟಿವಿ ಸೀಸನ್ಗೆ ಎಂಟ್ರಿ ಕೊಟ್ಟಿದ್ದಾರೆ. ರಾಕೇಶ್ ಅಡಿಗ, ಸಾನ್ಯಾ ಅಯ್ಯರ್, ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ ಅವರು ಟಿವಿ ಸೀಸನ್ಗೆ ಆಗಮಿಸುತ್ತಿದ್ದಾರೆ. ಹಳೆಯ ಸೀಸನ್ನ ಸ್ಪರ್ಧಿಗಳಾದ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್ ಸೇರಿ ಐವರು ಎಂಟ್ರಿ ಕೊಡುತ್ತಿದ್ದಾರೆ. ಈ 9 ಸ್ಪರ್ಧಿಗಳ ಜತೆ ಮತ್ತೆ 9 ಸ್ಪರ್ಧಿಗಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ.