BIG BOSS ಸೀಸನ್ 9 : ಪ್ರಮುಖ ಮಾಹಿತಿ ಇಲ್ಲಿದೆ
ಬಿಗ್ ಬಾಸ್ ಸೀಸನ್ 9 ರ ಶುರುವಿನ ಬಗ್ಗೆ ಈಗಾಗಲೇ ಚರ್ಚೆಗಳು ಶುರುವಾಗಿವೆ. ಈ ಬಾರಿ ದೊಡ್ಡ ಮನೆಗೆ ಯಾರೆಲ್ಲಾ ಎಂಟ್ರಿ ಕೊಡ್ತಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ನಡುವೆ ಕಾರ್ಯಕ್ರಮದ ಕುರಿತು ಕಲರ್ಸ್ ಕನ್ನಡ ವಾಹಿನಿ ಮುಖ್ಯ ಮಾಹಿತಿಯೊಂದನ್ನ ನೀಡಿದೆ.
ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನೀವು ಯಾರಿಗೂ ಹಣ ಕೊಡಬೇಕಾಗಿಲ್ಲ. ಸ್ಪರ್ಧಿಗಳನ್ನು ಆರಿಸುವ ಹೊಣೆಯನ್ನು ಕಲರ್ಸ್ ಕನ್ನಡ ಯಾವುದೇ ಸಂಸ್ಥೆ ಅಥವಾ ವ್ಯಕ್ತಿಗೆ ವಹಿಸಿಲ್ಲ. ಕಲರ್ಸ್ ಕನ್ನಡ ತಂಡವೇ ನೇರವಾಗಿ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತದೆ. ಹಾಗಾಗಿ ಈ ಸಂಬಂಧ ಯಾವುದೇ ಆಡಿಶನ್ ನಡೆಸಲಾಗುತ್ತಿಲ್ಲ. ಬಿಗ್ ಬಾಸ್ ಮನೆಗೆ ಕಳಿಸುವ ಭರವಸೆ ನೀಡಿ ಯಾರಾದ್ರೂ ನಿಮ್ಮಿಂದ ಹಣ ಕೇಳಿದರೆ ತಕ್ಷಣ ಅಂಥವರ ವಿರುದ್ಧ ಪೊಲೀಸರಿಗೆ ದೂರು ಕೊಡಿ, ಪ್ರವೇಶ ಶುಲ್ಕ ದೇವಣಿ ತರಬೇತಿ ಇಂಥ ಯಾವುದೇ ಹೆಸರಿನಲ್ಲಿ ನಾವು ಸ್ಪರ್ಧಿಗಳಿಂದ ಹಣ ಪಡೆಯುವುದಿಲ್ಲ ಎಂಬುದು ನೆನಪಿರಲಿ.
ಬಿಗ್ ಬಾಸ್ ಕುರಿತ ಸರಿಯಾದ ಮಾಹಿತಿಗೆ ಕಲರ್ಸ್ ಕನ್ನಡ ವಾಹಿನಿ ಅಥವಾ ವೂಟ್ ನ ಅಧಿಕೃತ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಗಳನ್ನು ಮಾತ್ರ ಪರಿಗಣಿಸಿ ಎಂದು ತಿಳಿಸಿದೆ.
ಅಂದಹಾಗೆ ಮೂಲಗಳ ಪ್ರಕಾರ ಬಿಗ್ ಬಾಸ್ ಓಟಿಟಿ ಇದೇ ಆಗಸ್ಟ್ ನಲ್ಲಿ ಆರಂಭವಾಗಲಿದೆ. ಕಿಚ್ಚ ಸುದೀಪ್ ಈ ಬಾರಿ ಎರಡು ಬಿಗ್ ಬಾಸ್ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಲಿದ್ದಾರೆ. ಈಗಾಗಲೇ ಬಿಗ್ ಬಾಸ್ ಗೆ ಸ್ಪರ್ಧಿಗಳ ಹುಡುಕಾಟ ಆರಂಭವಾಗಿದೆ. ಮಿನಿ ಬಿಗ್ ಬಾಸ್ ಗೆ ಬಹಳ ವಿಶೇಷ ಅತಿಥಿಗಳು ಇರುತ್ತಾರೆ ಎನ್ನಲಾಗುತ್ತಿದೆ.