BIGGBOSS 8 : ದಿವ್ಯಾಗೆ ಅರವಿಂದ್ ನ ಪ್ರೀತಿಯ ಪತ್ರಗಳು..!
ಬೆಂಗಳೂರು : ಬಿಗ್ ಬಾಸ್ ಜೋಡಿ ಟಾಸ್ಕ್ ನಂತರ ಕೊಡುತ್ತಿರುವ ಟಾಸ್ಕ್ ಗಳೆಲ್ಲವೂ ದಿವ್ಯಾ – ಅರವಿಂದ್ ಜೋಡಿಯನ್ನ ಮತ್ತಷ್ಟು ಹತ್ತಿರವಾಗಿಸುತ್ತಿದೆ. ಇತ್ತೀಚೆಗೆ ಹಾಸ್ಟೆಲ್ ಟಾಸ್ಕ್ ಕೂಡ ಇವರಿಬ್ಬರನ್ಬನ ಮತ್ತಷ್ಟು ಹತ್ಇರ ಮಾಡಿದ್ದು, ಮನೆ ಮಂದಿ ಹೊರಗಡೆ ಪ್ರೇಕ್ಷಕರ ಕಂಪ್ಲೀಟ್ ಗಮನ ಈ ಕ್ಯೂಟ್ ಜೋಡಿಯತ್ತ ನೆಟ್ಟಿದೆ.
ಅಂದ್ಹಾಗೆ ಬಿಗ್ ಬಾಸ್ ಬಾಯ್ಸ್ ಹಾಸ್ಟೆಲ್ನ ಹುಡುಗರು, ಗರ್ಲ್ ಹಾಸ್ಟೆಲ್ ಹುಡುಗಿಯರಿಗೆ ಪತ್ರಗಳನ್ನು ಬರೆದು ನೀಡಬೇಕು ಹಾಗೂ ಹುಡುಗಿಯರು ಅದನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಟಾಸ್ಕ್ ನೀಡಿದ್ದರು. ಅದರಂತೆ ಬಿಗ್ ಬಾಸ್ ಮನೆಯ ಎಲ್ಲ ಹುಡುಗರು ಕದ್ದುಮುಚ್ಚಿ ಹುಡುಗಿಯರಿಗೆಲ್ಲಾ ಲೆಟರ್ ಪಾಸ್ ಮಾಡುತ್ತಿದ್ದಾರೆ. ಆದರೆ ಅರವಿಂದ್ ಮಾತ್ರ ತಮ್ಮೆಲ್ಲಾ ಪತ್ರಗಳನ್ನ ಕೇವಲ ದಿವ್ಯಾ ಉರುಡುಗಗೆ ಮಾತ್ರ ಬರೆದಿದ್ದಾರೆ. ಇದು ಈ ಜೋಡಿ ನಡುವೆ ಸಮ್ ಥಿಂಗ್ ಸಮ್ ಥಿಂಗ್ ನಡೆಯುತ್ತಿದೆ ಅನ್ನೋದಕ್ಕೆ ಸಾಕ್ಷಿಯಾಗಿದೆ.
ನಿನ್ನೆ ಅರವಿಂದ್ ಲೆಟರ್ ಬರೆದು, ರಂಗೋಲಿ ಹಾಕುತ್ತಿದ್ದ ದಿವ್ಯಾ ಉರುಡುಗಗೆ ನೀಡುತ್ತಾರೆ. ಬಳಿಕ ಅದನ್ನು ಕ್ಯಾಮೆರಾ ಮುಂದೆ ದಿವ್ಯಾ ಓದುತ್ತಾರೆ. ಪ್ರೀತಿಯ ಕೆ, ಮೊದಲನೇ ದಿನ ನನ್ನ ನಿನ್ನ ಚಿಕ್ಕ ಇಂಟ್ರಡಕ್ಷನ್ ನಲ್ಲಿ ನೀನು ಏನೋ ಹೇಳಲು ಬಂದು, ಹೇಳದೇ ಹೋದ ರೀತಿ, ಈಗ ನಾವು ಇರುವ ಕ್ಲೋಸ್ನೆಸ್ ಗೆ ತುಂಬಾನೇ ವ್ಯತ್ಯಾಸ ಇದೆ. ಈ ಮನೆಯಲ್ಲಿ ನನ್ನ ಮೊದಲನೆಯ ಸಪೋರ್ಟರ್, ಶುಭ ಹಾರೈಸುವ ಒಳ್ಳೆಯ ಗೆಳತಿ ನೀನು ಪ್ರೀತಿ ಇರಲಿ ಅರವಿಂದ್ ಕೆಪಿ ಎಂದು ಮೊದಲನೇ ಲೆಟರ್ ಓದುತ್ತಾರೆ.
ಬಳಿಕ ಮತ್ತೊಂದು ಲೆಟರ್ ನಲ್ಲಿ ಪ್ರೀತಿಯ ಕೆ, ಈ ಬಿಗ್ಬಾಸ್ ಮನೆಯ ಪಯಣ ನಿನ್ನ ಗೆಳೆತನದಿಂದ ಇನ್ನಷ್ಟು ಮಜಾ ಹಾಗೂ ಸಂತೋಷಕರವಾಗಿದೆ. ನಿನ್ನ ಪ್ರೆಸೆನ್ಸ್ ಇರುವುದರಿಂದ ಟಾಸ್ಕ್ಗಳಲ್ಲಿ, ದೈನಂದಿನ ಚಟುವಟಿಕೆಗಳಲ್ಲಿ ಲವಲವಿಕೆಯಿಂದ ಸಾಗುತ್ತಿದೆ. ನಿನ್ನ ಎಲ್ಲ ವಿಚಾರಗಳು ನನಗೆ ಇಷ್ಟ, ನೀನು ನಗುವಾಗ ತುಂಬಾನೇ ಇಷ್ಟ. ಪ್ರೀತಿ ಇರಲಿ ಅರವಿಂದ್ ಕೆ.ಪಿ. ಎಂದು ಬರೆದಿದ್ದಾರೆ. ಇದನ್ನು ಓದಿದ ದಿವ್ಯಾ ಸೋ ಕ್ಯೂಟ್ ಎಂದು ಪ್ರತಿಕ್ರಿಯಿಸುತ್ತಾರೆ.
ಇದಾದ ನಂತರ ಮತ್ತೊಂದು ಲೆಟರ್ ನಲ್ಲಿ ಪ್ರೀತಿಯ ಕೆ ನನ್ನ ಲೋವೆಸ್ಟ್ ಪಾಯಿಂಟ್ ನಲ್ಲಿ ನನ್ನೊಂದಿಗೆ ನಿಂತು ನಡೆಸುವ ಸಪೋರ್ಟ್ ತುಂಬಾನೇ ಶ್ರೇಷ್ಠವಾದದ್ದು, ಬೇರೆ ಯಾವ ಸಂದರ್ಭದಲ್ಲಿಯೂ ಅಷ್ಟು ಬೇಜಾರು ಮಾಡಿಕೊಂಡಿಲ್ಲ. ನನ್ನ ಫ್ರೆಂಡ್ಸ್ ನನ್ನ ನಿರ್ಣಯವನ್ನು ತಪ್ಪು ಎಂದು ಭಾವಿಸಿದ್ದರು. ಆಗ ನನಗೆ ನೀನು, ನಿನಗೆ ನಾನು ಸಮಾಧಾನ ಹೇಳಿಕೊಂಡು ಕಳೆದಿರುವ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಪ್ರೀತಿ ಇರಲಿ ಅರವಿಂದ್ ಕೆ.ಪಿ ಎಂದು ಓದುತ್ತಾರೆ.
ಮತ್ತೊಂದು ಲೆಟರ್ ನಲ್ಲಿ , ಪ್ರೀತಿಯ ಕೆ ನೀನು ನಗುತ್ತೀಯಾ ಹೃದಯದಿಂದ ನನಗೆ ಕೇಳುತ್ತದೆ. ಬಹಳ ದೂರದಿಂದ ನಿನ್ನ ಕಣ್ಣುಗಳು ಹೇಳುತ್ತಿದೆ ಮಾತೊಂದ.. ಬೇಗ ಓದು ಗಾರ್ಡನ್ ಏರಿಯಾಗೆ ವಾರ್ಡನ್ ಬರುವ ಮುನ್ನ. ಪ್ರೀತಿ ಇರಲಿ ಅರವಿಂದ್ ಕೆ ಪಿ ಎಂದು ಹಾಸ್ಯವಾಗಿ ಬರೆದಿರುವುದನ್ನ ನೋಡಿ ದಿವ್ಯಾ ಜೊತೆಗೆ ಮನೆ ಮಂದಿಯೂ ನಗುತ್ತಾರೆ..