BIGGBOSS 8 : ಮತ್ತೆ ಸ್ಪರ್ಧಿಗಳ ಬಗ್ಗೆ ವಯಕ್ತಿಕವಾಗಿ ಮಾತನಾಡಿದ ಸಂಬರಗಿ..!
ಬಿಗ್ ಬಾಸ್ ನಲ್ಲಿ ಸದಾ ಒಂದ್ಲ್ಲಾ ಒಂದು ಹೈಡ್ರಾಮಾಗಳಿಗೆ ಕಾರಣವಾಗಿ ಸುದ್ದಿಯಲ್ಲೇ ಇರೋ ಪ್ರಶಾಂತ್ ಸಂಬರಗಿ ಕಂಡ್ರೆಬಹುತೇಕ ಮನೆಯ ಸದಸ್ಯರು ಉರಿದು ಬೀಳ್ತಾರೆ. ಅದ್ರಲ್ಲೂ ಪ್ರಶಾಂತ್ ಸದಾ ವಯಕ್ತಿಕ ವಿಚಾರಗಳನ್ನ ಮಾತನಾಡಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗ್ತಾರೆ.

ಈ ನಡುವೆ ಕ್ಯಾಪಟ್ನನ್ಸಿ ಟಾಸ್ಕ್ ವೇಳೆ ಸೋತ ನಂತರ ಗುಂಪುಗಾರಿಕೆ ಆರೋಪ ಮಾಡಿ ತನಗೆ ಅನ್ಯಾಯವಾಗಿದೇ ಎಂದು 36 ಗಂಟೆಗಳ ಕಾಲ ಊಟ ಮಾಡುವುದಿಲ್ಲ ಎಂದು ಪ್ರತಿಭಟನೆ ಮಾಡ್ತಿದ್ದಾರೆ. ಇದೀಗ ಚಕ್ರವರ್ತಿ ಪ್ರಶಾಂತ್ ಸಂಬರಗಿ ಮನೆಯ ಎಲ್ಲಾ ಸದಸ್ಯರ ಬಗ್ಗೆಯೂ ಗಾಸಿಫ್ ಮಾಡಿದ್ದಾರೆ. ಅವರನ್ನ ಮನೆಯ ಸ್ಪರ್ಧಿಗಳ ಹೆಸರನ್ನು ಒಂದೊಂದಾಗಿ ಹೇಳಿಕೊಂಡು ಹೋಗುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಶಾಂತ್ ಸಂಬರಗಿ ಉತ್ತರಿಸುತ್ತಾ ಹೋಗಿದ್ದಾರೆ.
ಮೊದಲಿಗೆ ದಿವ್ಯಾ ಸುರೇಶ್ ಎಂದು ಚಕ್ರವರ್ತಿ ಹೇಳಿದಾಗ, ಗ್ಯಾಲರಿಯಲ್ಲಿ ಆಡುತ್ತಿದ್ದಾಳೆ ಮಂಜು ಶಿಷ್ಯೆ, ನಾನು ಡಿಫರೆಂಟ್, ನಾನು ಕಾನ್ಫಿಡೆಂಟ್ ಅಂತ ತೋರಿಸುವ ಭರದಲ್ಲಿ ನೀಚ ಸ್ವಭಾವ ಎಕ್ಸ್‍ಪೋಸ್ ಆಗುತ್ತಿದೆ. ಗೆಲ್ಲವುದೊಂದೇ ಗುರಿ, ಮಾರ್ಗ ಯಾವುದು ಬೇಕಾದರೂ ಆಗಬಹುದು ಎಂದು ಆಟ ಆಡುತ್ತಿದ್ದಾಳೆ ಅಂತ ಹೇಳಿದ್ದಾರೆ.
ದಿವ್ಯಾ ಉರುಡುಗ ವಿಚಾರವಾಗಿ ಮಾತನಾಡಿ, ಪ್ರಶಾಂತ್ ಅರವಿಂದನ ಮಡಿಲಿನಲ್ಲಿ ಅವನ ಜೊತೆಗೆ ನಾನು ಸಾಗುವೆ ಎನ್ನುತ್ತಾರೆ. ಮಂಜು ಪಾವಗಡ ಹೆಸರು ಬಂದಾಗ, ದುಷ್ಟ, ಅಹಂಕಾರಿ, ಹಾಸ್ಯ ಬಿಟ್ಟು ಎಲ್ಲ ಮಾಡುತ್ತಿದ್ದಾನೆ. ಇನ್ನೂ ರಘು ಉಸರವಳ್ಳಿ. ಪ್ರಿಯಾಂಕ, ಸುಂದರವಾಗಿದ್ದಿನಿ ಎಂಬ ಜಂಬ, ನಾನು ಡಿಫರೆಂಟ್ ಆಗಿದ್ದೇನೆ ಎಂದು ತೋರಿಸಿಕೊಳ್ಳಲು ಹೊರಟಿದ್ದಾರೆ. ಲೋ ಬುದ್ಧಿ, ಲೋ ಹೈಕ್ಯೂ ಇರುವುದರಿಂದ ನಿರ್ಧಾರಗಳು ಕರೆಕ್ಟ್ ಅಂದುಕೊಂಡು ಫೆಲ್ ಆಗುತ್ತಿರುವ ಹುಡುಗಿ ಎನ್ನುತ್ತಾರೆ.
ಇದೇ ವೇಳೆ ಶಮಂತ್ ಬಗ್ಗೆ ಮಾತನಾಡಿ ಟ್ಯಾಲೆಂಟೆಂಡ್, ಕಂಪೆಷನೆಟ್, ಎಕ್ಸ್ ಪ್ರೆಸ್ ಮಾಡದೇ ಇರುವಂತಹ ಹುಡುಗ ಎಂದಿದ್ದಾರೆ. ಇನ್ನೂ ಚಕ್ರವರ್ತಿಯವರು ಅವರ ಹೆಸರನ್ನೇ ಸೂಚಿಸಿದಾಗ ಅತೀ ಬುದ್ಧಿವಂತಿಕೆ ಮಾತಿನ ಚಾತುರ್ಯದಿಂದ ಗೆಲ್ಲಬಹುದು ಎಂದು ತಿಳಿದು ಎಲ್ಲರನ್ನು ದುಷ್ಮನ್ ಮಾಡಿಕೊಳ್ಳುತ್ತಿರುವ ವ್ಯಕ್ತಿ ಎಂದಿದ್ದಾರೆ. ಇಷ್ಟೇ ಅಲ್ಲ ಖುದ್ದು ತಮ್ಮ ಹೆಸರು ಹೇಳಿದಾಗಲೂ ಪ್ರತಿಕ್ರಿಯಿಸಿದ ಪ್ರಶಾಂತ್ ಸಂಬರ್ಗಿ ಶಕ್ತಿ, ಯುಕ್ತಿಗಿಂತ ಮನುಷ್ಯತ್ವ ಮೇಲೂ ಅಂತ ಆಡುತ್ತಿರುವ ಎಮೋಷನಲ್ ಫೂಲ್ ಎಂದು ತಮಗೆ ತಾವೇ ಹೇಳಿದ್ದಾರೆ.








