BIGGBOSS 8 : ‘ಆಟೋಗ್ರಾಫ್’ – ನನ್ನ ಸೇವ್ ಮಾಡಿದವ್ರೇ ಕಳಪೆ ಅಂದ್ರು – ಶಮಂತ್
ಕೋವಿಡ್ 2ನೇ ಅಲೆ ಲಾಕ್ ಡೌನ್ ನಿಂದಾಗಿ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತುಹೋಗಿದೆ.. ಸೇಫ್ ಆಗಿ ಉಳಿದಿದ್ದ ಸ್ಪರ್ಧಿಗಳು ಮನೆಯಿಂದ ಆಚೆ ಬಂದಿದ್ದಾರೆ.. ಹೀಗೆ ಬಂದಿರುವ ಸ್ಪರ್ಧಿಗಳನ್ನ ಆಟೋಗ್ರಾಫ್ ಎಪಿಸೋಡ್ನಲ್ಲಿ ಮಾತನಾಡಿಸಿ ಕೆಲ ಪ್ರಶ್ನೆಗಳನ್ನ ಕೆಳಲಾಗಿದೆ. ಅದಕ್ಕೆ ಸ್ಪರ್ಧಿಗಳು ನಾನಾ ರೀತಿಯ ಉತ್ತರನ್ನ ನೀಡಿ ಬಿಗ್ ಬಾಸ್ ಮನೆಯಲ್ಲಿನ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ.
ಅದೇ ರೀತಿ ಶಮಂತ್ ಆಟೋಗ್ರಾಫ್ ಎಪಿಸೋಡ್ ನಲ್ಲಿ ಕೆಲ ವಿಚಾರಗಳನ್ನ ಹಂಚಿಕೊಂಡಿದ್ಧಾರೆ. ನನಗೆ ಬಿಗ್ ಬಾಸ್ ಆರಂಭದಲ್ಲೇ ಕ್ಯಾಪ್ಟನ್ ಪಟ್ಟ ಕೊಟ್ಟು ಹೆಚ್ಚು ಜವಾಬ್ದಾರಿಯನ್ನು ಕೊಟ್ಟು ಬಿಟ್ಟರು. ನನಗೆ ತುಂಬಾ ಭಯ ಆಗಿತ್ತು. ಹೀಗೆ 2 ವಾರ ಕ್ಯಾಪ್ಟನ್ ಆಗಿದ್ದೆ. ಕ್ಯಾಪ್ಟನ್ ಮಾಡಿದವರೆ ನನಗೆ ಕಳಪೆ, ಆಟ ಆಡಿಲ್ಲ ಹಿಗೆ ಕೆಲವು ಕಾರಣಗಳನ್ನು ಕೊಟ್ಟು ನನ್ನ ಕಳಪೆಗೆ ಕಳುಹಿಸಿಬಿಟ್ಟರು. ಆಗ ಬಹಳ ಬೇಜಾರು ಆಯಿತು. ಜೀವನದಲ್ಲಿ ಏರು ಪೇರು ಅಂತಾ ಇರುತ್ತೆ ಅಲ್ಲವಾ ಹಾಗೆ ಆಯಿತ್ತು. ಬಿಗ್ಬಾಸ್ ಮನೆಯಲ್ಲಿ ನಾವು ಅಂದುಕೊಂಡತೆ ಆಗುವುದಿಲ್ಲ.
ನಾನು ನಾಮಿನೇಟ್ ಆದಾಗ ಸೇವ್ ಮಾಡಿದವರೆ ನಿನಗೋಸ್ಕರ ನಮಗೆ ಬೆಡ್ ರೂಮ್ ಇಲ್ಲದ ಹಾಗೆ ಆಯ್ತು ಎಂದು ಹೇಳಿ ನನಗೆ ಆಗಾಗ ಬೇಸರವನ್ನುಂಟು ಮಾಡುತ್ತಿದ್ದರು ಎಂದು ಸ್ಪರ್ಧಿಗಳ ವಿರುದ್ಧ ಬೇಸರ ಹೊರಹಾಕಿದ್ದಾರೆ.
ಇದೇ ವೇಳೆ ದಿವ್ಯಾ ಸುರೇಶ್ ವಿಚಾರವಾಗಿಯೂ ಶಮಂತ್ ಮಾತಾನಡಿದ್ದು, ಶಮಂತ್ ಲವ್ ಮಾಡೋಕೆ ಬಂದಿದ್ದಾರಾ. ಅಥವಾ ಪ್ರೀತಿ ಮಾಡೋಕೆ ಬಂದಿದ್ದಾರಾ. ಎನ್ನುವುದು ಗೊತ್ತಿಲ್ಲ ಎಂದು ದಿವ್ಯಾ ಸುರೇಶ್ ಹೀಯಾಳಿದ್ರು ಎಂದಿದ್ದಾರೆ.
ಇದೇ ವೇಳೆ ನಾನು ಹಲವು ಬಾರಿ ನಾಮಿನೇಟ್ ಆಗಿದ್ದೇನು. ಆದರೆ ಸೇವ್ ಮಾಡಿ ವೈಜಯಂತಿ ಮನೆಯಿಂದ ಆಚೆ ಹೋದಾಗ ನನಗೆ ಆಶ್ಚರ್ಯ ಆಯ್ತು. ಅಂದಿನಿಂದ ನನ್ನ ಆಟವೇ ಬದಲಾಯ್ತು. ಆಮೇಲೆ ಕಣ್ಮಣಿಗಾಗಿ ಹಾಡು ಮಾಡಿದೆ. ಬಿಗ್ಬಾಸ್ ಮನೆ, ಸ್ಪರ್ಧಿಗಳು ಹೀಗೆ ಹಲವು ವಿಚಾರಗಳನ್ನು ಇಟ್ಟುಕೊಂಡು ನಾನು ಸಾಂಗ್ ಮಾಡಿದೆ. ಗೇಮ್ ಆಡುವಾಗ ಕೆಲವೊಮ್ಮೆ ಬೇಜಾರು ಆಗಿದೆ. ಹೊರಗೆ ಇದ್ದು ಕಲಿಯಲಾಗದೆ ಇರುವ ಪಾಠವನ್ನು ಬಿಗ್ಬಾಸ್ ಮನೆಯಲ್ಲಿ ಕಲಿತ್ತಿದ್ದೇನೆ ಎಂದಿದ್ಧಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








