BIGGBOSS : ದಿವ್ಯಾ ವಿರುದ್ಧ ಸಿಟ್ಟನ್ನ ಹೀಗೆ ತೀರಿಸಿಕೊಳ್ಳಬೇಕೆಂದಿದ್ದರಂತೆ ಶಮಂತ್..!
ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಆರಂಭದಲ್ಲಿ ಟ್ರಯಾಂಗಲ್ ಲವ್ ಸ್ಟೋರಿಯದ್ದೇ ಸದ್ದಾಗಿಬಿಟ್ಟಿತ್ತು. ದಿವ್ಯಾ ಜೊತೆ ಮಾತನಾಡಲು ಮಂಜು ಬಂಡೆ ಅನ್ನೋದನ್ನೂ ಕೂಡ ಹೇಳಿಬಿಟ್ಟಿದ್ದರು. ಶಮಂತ್ ದಿವ್ಯಾ ಜೊತೆ ಮಾತನಾಡಲು ಎಷ್ಟೇ ಪ್ರಯತ್ನಿಸಿದರೂ ದಿವ್ಯಾ ಮಾತ್ರ ಶಮಂತ್ ಅನ್ನೋ ಕ್ಯಾರೆಕ್ಟರೇ ಇಲ್ಲ ಅನ್ನೋ ರೀತಿ ವರ್ತಿಸುತ್ತಾರೆ. ಇದರ ಬಗ್ಗೆ ಶಮಂತ್ ಮನೆ ಸದಸ್ಯರ ಬಳಿ ಹಲವು ಬಾರಿ ಹೇಳಿಕೊಂಡಿದ್ದೂ ಇದೆ.
ಇದ್ರಿಂದ ಶಮಂತ್ ಸಿಕ್ಕಾಪಟ್ಟೆ ಫ್ರಸ್ಟ್ರೇಟ್ ಆಗ್ಬಿಟ್ಟಿದ್ದಾರೆ. ಹೀಗಾಗಿಯೇ ಈ ವಾರ ಕಳಪೆ ಬೋರ್ಡ್ ಯಾರಿಗೆ ಕೊಡಬೇಕೆಂದಿದ್ದೀರಿ ಎಂದು ರಘು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ್ದ ಶಮಂತ್ ಪರೋಕ್ಷವಾಗಿ ದಿವ್ಯಾ ಹೆಸರನ್ನ ಎತ್ತಿದ್ದರು. ಒಂದೊಂದು ಬಾರಿ ಸುಮ್ ಸುಮ್ನೆ ಏನೇನೋ ಕ್ಯಾರಿ ಮಾಡುವುದು, ಒಂದೇ ಕಡೆ ಇರುವುದು, ದಿಕ್ಕು ತಪ್ಪಿಸುವುದು, ಎಲ್ಲರ ಅಭಿಪ್ರಾಯ ಒಂದೇ ಇರುವಾಗ, ಅವಳದ್ದೇ ಬೇರೆ ಎಂಬುವಂತೆ ಹೇಳುವುದು. ಅದರಲ್ಲೂ ಈ ಬಾರಿ ಕಳಪೆಗೆ ಹುಡುಗಿ ಹೋಗಬೇಕೆಂಬುವುದು ನನ್ನ ಅಭಿಪ್ರಾಯ ಎಂದು ಪರೋಕ್ಷವಾಗಿ ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ್ದಾರೆ.
ನನಗೂ ಕೆಲವೊಂದು ಸಿಟ್ಟಿದೆ ಅದನನ್ನೆಲ್ಲಾವನ್ನು ತೀರಿಸಿಕೊಂಡು ಬಿಡಬೇಕು. ಅಲ್ಲಿಯವರೆಗೂ ನನಗೆ ಸಮಾಧಾನ ಇಲ್ಲ. ಯಾಕೆಂದರೆ ಅವರು ನನಗೆ ಏನು ನೀಡುತ್ತಾರೋ ಅದನ್ನೇ ನಾನು ವಾಪಸ್ ಅವರಿಗೆ ನೀಡುತ್ತೇನೆ. ಇಲ್ಲಿ ಲವ್ ಮಾಡುವುದಕ್ಕೆ ಬಂದಿದ್ದಾರೋ ಇಲ್ಲ ಗೇಮ್ ಆಡಲು ಬಂದಿದ್ದಾರೋ ಗೊತ್ತಿಲ್ಲ ಬಿಗ್ಬಾಸ್ ಎಂದು ಹೇಳಿದ್ದರು. ಆ ಫ್ರಸ್ಟ್ರೆಷನ್ ಅನ್ನು ನಾನು ಇಂದು ತೀರಿಸಿಕೊಳ್ಳಬೇಕು. ಇಂದು ಸಂಜೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೇನೆ. ನಾನು ಹೇಳೆ ಹೇಳುತ್ತೀನೆ ಎಂದಿದ್ದರು. ಆದ್ರೆ ಈ ವಾರ ಮನೆಯವರೆಲ್ಲಾ ಸೇರಿ ಕಳಪೆ ಬೋರ್ಡ್ ಅನ್ನ ಆಗ್ಲೇ ಚಕ್ರವರ್ತಿಗೆ ನೀಡಲಾಗಿದ್ದು, ಜೈಲಿಗೂ ಕಳುಹಿಸಲಾಗಿದೆ.