BIGGBOSS 8 : ಮತ್ತೆ ಪುನರಾರಂಭವಾಗಲಿದ್ಯಾ ಬಿಗ್ ಬಾಸ್ – ಕಿಚ್ಚ ಸುದೀಫ್ ಹೇಳಿದ್ದೇನು..?
ಕೊರೊನಾಲಾಕ್ ಡೌನ್ ನಿಂದಾಗಿ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತುಹೋಗಿದೆ. ವಿನ್ನರ್ ಯಾರೆಂಬುದು ಯಾರಿಗೂ ಗೊತ್ತಾಗದೇ ಪ್ರೇಕ್ಷಕರು ಗೊಂದಲಕ್ಕೀಡಾಗಿದ್ದಾರೆ. ಈ ನಡುವೆ ಮತ್ತೆ ಶೋ ಆರಂಭವಾಗಬಹುದಾ ಎಂಬ ಚರ್ಚೆಗಳು ಇವೆ.. ಇದೀಗ ಕಿಚ್ಚ ಸುದೀಪ್ ಅವರು ಸಹ ಈ ಬಗ್ಗೆ ಒಂದು ಸುಳಿವು ಕೊಟ್ಟಿದ್ದು, ಕೊರೊನಾ ಸಂಕಷ್ಟ ಲಾಕ್ ಡೌನ್ ಮುಗಿದ ನಂತರ ಮತ್ತೆ ಶೋ ಆರಂಭವಾಗುವ ಸಾಧ್ಯೆತಿದೆ ಎನ್ನಿಸುತ್ತಿದೆ..
ಬಿಗ್ ಕೊನೆಯ ಎಪಿಸೋಡ್‍ನಲ್ಲಿ ಬಟೆಗಳನ್ನು ಪ್ಯಾಕ್ ಮಾಡಿಕೊಂಡು ತಮ್ಮ ಮನೆಗೆ ಹೊರಡಬೇಕು ಎನ್ನುವಷ್ಟರಲ್ಲಿ ಕಿಚ್ಚ ಸುದೀಪ್ ಮನೆ ಮಂದಿಗೆಲ್ಲ ವೀಡಿಯೋ ಮೂಲಕ ಸಂದೇಶ ಕಳುಹಿಸಿದ್ದಾರೆ. ನಿಮಗಾಗಲೇ ವಿಷಯ ತಲುಪಿದೆ, ಸದ್ಯಕ್ಕೆ ಶೋ ಸ್ಟಾಪ್ ಆಗುತ್ತಿದೆ. ನೀವೆಲ್ಲರೂ ನಿಮ್ಮ ಮನೆಗಳಿಗೆ ವಾಪಸ್ ಹೋಗುತ್ತಿದ್ದೀರಿ, ಇದು ತುಂಬಾ ಕಷ್ಟದ ವಿಚಾರ ಎಂಬುದು ತಿಳಿದಿದೆ. ಇಷ್ಟು ವಾರಗಳ ಬಳಿಕ, ಇಷ್ಟೊಂದು ಶ್ರಮ, ಭರವಸೆ, ನಂಬಿಕೆ ಇದೆಲ್ಲದ ಮಧ್ಯೆ ಈ ರೀತಿ ಒಂದು ವಿಚಾರ ನಿಮ್ಮ ಕಿವಿಗೆ ಬಿದ್ದಾಗ ಹೇಗೆ ಸ್ವೀಕರಿಸಿದ್ದೀರಿ ಎಂಬುದು ಗೊತ್ತಿಲ್ಲ. ಆದರೆ ಹೊರಗಡೆಯ ಪರಿಸ್ಥಿತಿಯನ್ನು ಪರಿಗಣಿಸಿ ಈ ನಿರ್ಧಾರವನ್ನು ತಂಡ ತೆಗೆದುಕೊಳ್ಳಬೇಕಿದೆ. ಆದರೆ ಇದೇ ಅಂತ್ಯ ಅಲ್ಲ ಎಂದು ಹೇಳಿದ್ದಾರೆ.
ನಿಮಗೆ ಸಿಕ್ಕಿರುವ ಜನಪ್ರಿಯತೆಯನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ಹಾಗೂ ಎಲ್ಲ ಟೆಕ್ನಿಶಿಯನ್ಸ್ ಗಳ ಸುರಕ್ಷತೆ ದೃಷ್ಟಿಯಿಂದ ಈ ರೀತಿಯ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು. ಇಲ್ಲಿಂದ ನೀವು ಮನೆಗೆ ಹೊರಡಿ, ಇದರ ಭವಿಷ್ಯ ಏನು, ಬಿಗ್ ಬಾಸ್ ಮುಂದೆ ಏನು ಗೊತ್ತಿಲ್ಲ. ಈ ಬಗ್ಗೆ ಮುಂದೆ ನಿರ್ಧಾರ ಆಗುತ್ತದೆ, ಬಳಿಕ ನಿಮಗೂ ಹಾಗೂ ವೀಕ್ಷಕರಿಗೆ ತಲುಪುತ್ತದೆ. ಇದು ಮುಗಿಯುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ವೀಕ್ಷಕರು ತುಂಬಾ ನೊಂದಿದ್ದಾರೆ. ಬಹಳಷ್ಟು ಮೇಲ್, ಮೆಸೇಜ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಹ ಚರ್ಚೆ ನಡೆಯುತ್ತಿದೆ. ಹೀಗಾಗಿ ನೀವು ಆಗಲೇ ಜನರ ಮನಸ್ಸು ಗೆದ್ದಿದ್ದೀರಿ ಎಂದಿದ್ದಾರೆ.
ವಿನ್ನರ್ ಯಾರೆಂದು ತಿಳಿಯದೆ ಬಿಗ್ ಬಾಸ್ ಗೆ ಅಂತ್ಯ ಎನ್ನುವುದು ಇರುವುದಿಲ್ಲ. ಹೀಗಾಗಿ ಮತ್ತೆ ಏನಾದರೂ ಬಂದೇ ಬರುತ್ತೆ ಎಂಬ ನಂಬಿಕೆ ಖಂಡಿತ ನನಗಿದೆ. ಆದರೆ ಇಂತಹ ಸಂದರ್ಭದಲ್ಲಿ ನನಗೂ ತುಂಬಾ ದುಃಖವಾಗುತ್ತಿದೆ. ಎರಡ್ಮೂರು ವಾರಗಳ ಕಾಲ ನಾನು ಬರಲು ಆಗಲಿಲ್ಲ, ಬಳಿಕ ಮಾರ್ಗಸೂಚಿಗಳ ಕಾರಣ ವೀಕೆಂಡ್ ಶೋ ನಡೆಸಲು ಆಗುತ್ತಿರಲಿಲ್ಲ. ಹೀಗಾಗಿ ಈಗ ನಿಮಗೆ ಆಲ್ ದಿ ಬೆಸ್ಟ್ ಹೇಳುತ್ತಿದ್ದೇನೆ. ಇಷ್ಟು ದಿನ ನೀವು ಆಡಿದ್ದು, ಟಾಸ್ಕ್‍ಗಳಲ್ಲಿ ಪಾಲ್ಗೊಂಡಿದ್ದು, ಇದೆಲ್ಲದರ ಮಧ್ಯೆ ಮನುಷ್ಯ ಎಂದಮೇಲೆ ಗಲಾಟೆ, ಜಗಳಗಳು ಸಹಜ. ಇವನ್ನೆಲ್ಲ ಹೊರತುಪಡಿಸಿ ನೀವೆಲ್ಲ ತುಂಬಾ ಅದ್ಭುತವಾಗಿ ಮನೆಯಲ್ಲಿದ್ದಿರಿ. ನೀವೆಲ್ಲರೂ ವಿನ್ನರ್ಸ್ ಎಂದು ಸ್ಪರ್ಧಿಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.








