BIGGBOSS 8 – ಸಂಬರಗಿಗೆ ಮಾತಿನ ಗುನ್ನಾ ಕೊಟ್ಟ ವೈಷ್ಣವಿ – ಇಬ್ಬರು ಜೊತೆಯಲ್ಲಿದ್ದಾಕ್ಷಣ ಸಂಬಂಧ ಅಂತನಾ..?
ಬೆಂಗಳೂರು : ಬಿಗ್ ಬಾಸ್ ಸೀಸನ್ 8 ರಲ್ಲಿ ವಿಭಿನ್ನ ವ್ಯಕ್ತಿತ್ವದೊಂದಿಗೆ ಗುರುತಿಸಿಕೊಂಡಿರುವ ವೈಷ್ಣವಿ ಆರಂಭದಲ್ಲಿ ಸೈಲೆಂಟ್ ಆಗಿದ್ದರು. ಈಗ ಅತಿ ಹೆಚ್ಚು ಲೈಮ್ ಲೈಟ್ ನಲ್ಲಿದ್ದಾರೆ. ಗಂಭೀರ ನಡವಳಿಕೆಯಿಂದಲೇ ವೈಷ್ವಿ ತುಂಬ ಜನರ ಫೇವರೇಟ್. ಆದ್ರೆ ಅವರು ಹೆಚ್ಚಾಗಿ ರಘು ಜೊತೆ ಕಾಣಿಸಿಕೊಳ್ತಿರುವುದಕ್ಕೆ ಮನೆ ಮಂದಿ ಆಗಾಗ ರೇಗಿಸಿರೋದು ಉಂಟು.. ಅಲ್ದೇ ಬಿಗ್ ಬಾಸ್ ಮನೆಯಲ್ಲಿ ಗುಂಪುಗಾರಿಕೆಯೂ ಕಾಣಿಸುತ್ತಿದೆ.
ಆದ್ರೆ ಇತ್ತೀಚೆಗೆ ಗುಂಪುಗಾರಿಕೆ ವಿಚಾರವಾಗಿ ನಡೆದ ಚರ್ಚೆ ವೇಳೆ ಗುಂಪುಗಾರಿಕೆ ಇಲ್ಲ ಎಂದು ವೈಷ್ಣವಿ ಅಭಿಪ್ರಾಯ ಹೊರಹಾಕಿದ್ದಾರೆ. ಪ್ರಶಾಂತ್ ಸಂಬರಗಿ ಗುಂಪುಗಾರಿಕೆ ವಿಚಾರವಾಗಿ ಮಾತನಾಡಿದ್ದಾರೆ. ಇದು ನೇರವಾಗಿ ವೈಷ್ಣವಿ, ಅರವಿಂದ್ ಹಾಗೂ ಚಕ್ರವರ್ತಿಗೆ ಟಾಂಟ್ ಮಾಡಿದ ರೀತಿಯಲ್ಲಿತ್ತು. ಹೀಗಾಗಿ ಕಿಚನ್ ನಲ್ಲಿ ವೈಷ್ಣವಿ ನೇರವಾಗಿ ಸಂಬರಗಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದು, ಆ ಆ ಮೆಂಟಾಲಿಟಿಯಿಂದ ಹೊರಗೆ ಬನ್ನಿ ಎಂದಿದ್ದಾರೆ.
ಕಿಚನ್ ನಲ್ಲಿ ಅರವಿಂದ್ ಚಕ್ರವರ್ತಿ ವೈಷ್ಣವಿ ಮಾತನಾಡಿಕೊಳ್ಳುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಸಂಬರಗಿ ಅಧರ್ಮ, ಗುಂಪುಗಾರಿಕೆ ಹೆಚ್ಚಾಗುತ್ತಿದೆ ಎನ್ನುತ್ತಾರೆ. ಆಗ ವೈಷ್ಣವಿ ನಾನು ಈಗಲೇ ತೋರಿಸುತ್ತೇನೆ ನಿಮಗೆ ಗುಂಪುಗಾರಿಕೆ ಇಲ್ಲ ಅಂತ ಎನ್ನುತ್ತಾರೆ. ಆಗ ಚಕ್ರವರ್ತಿ ಯಾವುದರಲ್ಲಿ ಎಂದು ಹೇಳಿ ತಮಾಷೆ ಮಾಡ್ತಾರೆ.
ಇದೇ ಸಂಭಾಷಣೆ ವೇಳೆ ರಿಯಾಕ್ಟ್ ಮಾಡುವ ವೈಷ್ಣವಿ , ಇಬ್ಬರು ಮಾತನಾಡುತ್ತಿದ್ದರೆ ಅದು ಗುಂಪು ಅಲ್ಲ, ಇಬ್ಬರು ಮಾತನಾಡುತ್ತಿದ್ದರೆ ಅವರಲ್ಲಿ ಸಂಬಂಧ ಇದೆ ಅಂತಲ್ಲ. ಮನೆ ಎಲ್ಲ ಬಿಟ್ಟು ಬಂದಿದ್ದೇವೆ, ಒಂದು ಕಂಫರ್ಟ್ ಝೋನ್ ಕಂಡುಕೊಳ್ಳುವುದು ತಪ್ಪಲ್ಲ ಎಂದಿದ್ದಾರೆ. ಆಗ ಚಕ್ರವರ್ತಿಯವರು ಮಧ್ಯ ಪ್ರವೇಶಿಸಿ ನನಗೆ ಹೇಳೋ ಅದೇನು ಎಂದು ಸಂಬರಗಿಗೆ ಕೇಳುತ್ತಾರೆ, ಆಗ ಹೇಳುತ್ತೇನೆ ಬಾ ವೇದಿಕೆ ಇದಕ್ಕಲ್ಲ. ಅದಕ್ಕೊಂದು ಪ್ರೈವೇಟ್ ವೇದಿಕೆ ಇದೆ ಬಾ ಎಂದು ಕರೆದುಕೊಂಡು ಹೊರಗೆ ಹೋಗುತ್ತಾರೆ.
ಒಟ್ಟಾರೆ ಪ್ರಶಾಂತ್ ಸಂಬರಗಿ ಸುಖಾ ಸುಮ್ಮನೆ ಎಲ್ಲರ ಜಗಳದಲ್ಲಿ ಮೂಗು ತೂರಿಒಸುತ್ತಾರೆ. ಬೇರೆಯವರ ವಿಚಾರದಲ್ಲಿ ತಲೆ ತೂಗಿಸುತ್ತಾರೆ. ತಮಗೆ ಸಂಬಂಧವೇ ಪಡದ ವಿಚಾರದಲ್ಲೂ ಮನೆ ಸದಸ್ಯರ ವಿರುದ್ಧ ವಯಕ್ತಿಕವಾಗಿ ಮಾತನಾಡುತ್ತಾ ಬಹುತಕ ಮನೆಯ ಎಲ್ಲಾ ಸದಸ್ಯರ ಜೊತೆಗೆ ನಿಷ್ಠೂರರಾಗಿದ್ದಾರೆ. ಆದ್ರೆ ವೈಷ್ಣವಿ ಮಾತ್ರ ಸಂಬರಗಿಗೆ ತಕ್ಕ ಉತ್ತರವನ್ನೇ ನೀಡಿದ್ದಾರೆ.