BIGGBOSS 8 : ಮನೆಯಿಂದ ಹೊರ ನಡೆದ ಶಮಂತ್ – 2ನೇ ಬಾರಿಗೆ ಅದೃಷ್ಟ ಒಲಿಯಲಿಲ್ಲ..!
2ನೇ ಇನ್ನಿಂಗ್ಸ್ ಗೂ ಮೊದಲೇ ಎಲಿಮಿನೇಟ್ ಆಗಿ ವೈಜಯಂತಿ ಆಡಿಗ ಅವರ ದೆಸಯಿಂದ ಲಕ್ಕಲ್ಲಿ ಮತ್ತೆ ಬಿಗ್ ಮನೆ ಪ್ರವೇಶಿಸಿದ್ದ ಶಮಂತ್ ಗೆ ಈ ಬಾರಿ ಯಾವುದೇ ಲಕ್ ಕೈ ಹಿಡಿಯಲಿಲ್ಲ.. ಫಿನಾಲೆಗೆ ಇನ್ನೊಂದು ವಾರವಷ್ಟೇ ಬಾಕಿಯಿರೋವಾಗ್ಲೇ ಶಮಂತ್ ದೊಡ್ಮನೆಗೆ ವಿದಾಯ ಹೇಳಿ ತಮ್ಮ ಜರ್ನಿ ಇಲ್ಲಿಗೆ ಮುಗಿಸಿ ಹೊರಟಿಯೇ ಬಿಟ್ಟರು..
ಇದರಿಂದಾಗಿ ಅಭಿಮಾನಿಗಳು ಕೊಂಚ ಬೇಸರಗೊಂಡಿದ್ದಾರೆ. ಶಮಂತ್ ಬ್ರೋ ಗೌಡ ಅವರ ಬರಹ, ಕವನ ರಚನೆ, ತಾವು ಬರೆದ ಕವನವನ್ನು ಉಲ್ಟಾ ಓದುವುದು ಹೀಗೆ ತಮ್ಮ ವಿಭಿನ್ನ ಟ್ಯಾಲೆಂಟ್ ಮೂಲಕ ವೀಕ್ಷಕರನ್ನು ರಂಜಿಸುತ್ತಿದ್ದರು. ಆದರೆ ಇದೀಗ ಎಲಿಮಿನೇಟ್ ಆಗಿದ್ದಾರೆ. ಈ ಮೂಲಕ ಮನೆಯಲ್ಲಿ ಸದಸ್ಯರ ಸಂಖ್ಯೆ 6ಕ್ಕೆ ಇಳಿಕೆಯಾಗಿದೆ.
ಇನ್ನು ನಿನ್ನೆಯಷ್ಟೇ ಶುಭಾ ಪೂಂಜಾ ಎಲಿಮಿನೇಟ್ ಆಗಿದ್ದರು. ಇಂದು ಶಮಂತ್ ಬ್ರೋ ಗೌಡ ಮನೆಯಿಂದ ಹೊರ ನಡೆದಿದ್ದಾರೆ. ಈಗ ಸದ್ಯ ಮನೆಯಲ್ಲಿ ಕೆ.ಪಿ.ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಮಂಜು ಪಾವಗಡ, ಪ್ರಶಾಂತ್ ಸಂಬರಗಿ ಉಳಿದುಕೊಂಡಿದ್ದಾರೆ.
ತಮ್ಮ ವಿಭಿನ್ನ ಕವನಗಳ ಮೂಲಕವೇ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಶಮಂತ್ ಬ್ರೋ ಗೌಡ, ಸಖತ್ ಆ್ಯಕ್ಟಿವ್ ಆಗಿದ್ದರು. ಟಾಸ್ಕ್ ಗಳನ್ನು ಸಹ ಅಷ್ಟೇ ಆ್ಯಕ್ಟಿವ್ ಆಗಿ ಮಾಡುತ್ತಿದ್ದರು. ಬಿಗ್ ಬಾಸ್ ಮನೆಯಲ್ಲಿ ಶಮಂತ್ ರಚಿಸಿದ ಹಾಡುಗಳನ್ನು ಮೆಚ್ಚಿ ಬಿಗ್ ಬಾಸ್ ಬೆಳಗ್ಗೆ ಇವರ ಹಾಡುಗಳನ್ನು ಪ್ರಸಾರ ಮಾಡಿರುವುದೂ ಇದೆ.








