ನಡೆ , ನುಡಿಯಿಂದ ಅಭಿಮಾನಿಗಳ ಹೃದಯ ಗೆದ್ದು, ಟಾಸ್ಕ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ್ದ ಅರವಿಂದ್ ಟ್ರೋಫಿ ಕನಸು ಭಗ್ನ..!
ನಡೆ , ನುಡಿಯಿಂದ ಅಭಿಮಾನಿಗಳ ಹೃದಯ ಗೆದ್ದು, ಪ್ರತಿ ಟಾಸ್ಕ್ ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡ್ತಿದ್ದ ಅರವಿಂದ್ ಮಂಜು ಪಾವಗಡ ಜೊತೆಗೆ ಫೈನಲ್ ವರೆಗೂ ಬಂದಿದ್ದರು.. ಫೈನಲ್ಸ್ ನಲ್ಲಿ ಮಂಜು ಪಾವಗಡ ಅರವಿಂದ್ ನಡುವೆ ಯಾರು ಗೆಲ್ತಾರೆ ಅನ್ನೋ ಟೆನ್ಷನ್ ಅವರಿಗೂ ಇತ್ತು.. ಆಡಿಯನ್ಸ್ ಗೂ ಇತ್ತು.. ಆದ್ರೆ ಫೈನಲ್ಸ್ ವರೆಗೂ ಬಂದ ಅರವಿಂದ್ ಅವರ ಟ್ರೋಫಿ ಕನಸು ಭಗ್ನವಾಗಿದ್ದು, ಮೊದಲನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ..
ಆರಂಭದಿಂದಲೂ ಒಂದೇ ವ್ಯಕ್ತಿತ್ವದಿಂದ ಗುರುತಿಸಿಕೊಂಡು ಬಂದಿದ್ದ ಅರವಿಂದ್ ಪ್ರೇಕ್ಷಕರ ಜೊತೆಗೆ ಮನೆ ಸದಸ್ಯರು ಹಾಗೂ ಕಿಚ್ಚನ ಹೃದಯವನ್ನೂ ಗೆದ್ದಿದ್ದರು. ಟಾಸ್ಕ್ಟ್ ಅಂತ ಬಂದ್ರೆ ಅರವಿಂದ್ ಗೆ ಅರವಿಂದ್ ಅವರೇ ಸಾಟಿ ಅನ್ನೋ ಹಾಗೆ ಟಫ್ ಕಾಂಪಿಟೇಷನ್ ನೀಡ್ತಿದ್ದ ಅರವಿಂದ್ ಆರಂಭದಲ್ಲಿ ಸಿಕ್ಕಾಪಟ್ಟೆ ಸೈಲೆಂಟ್ ಆಗಿದ್ದರು. ಆದ್ರೆ ದಿವ್ಯಾ ಉರುಡುಗ ಜೊತೆಗೆ ಸ್ವಲ್ಪ ಹತ್ತಿರವಾದ ನಂತರ ಅವರು ಲೈಮ್ ಲೈಟ್ ನಲ್ಲಿಯೇ ಇದ್ರು.. ಡಿಯು ಜೊತೆಗಿನ ಕೆಮಿಸ್ಟ್ರಿತಯಿಂದಾಗಿ ಅರವಿಂದ್ ಗೆ ಮತ್ತಷ್ಟು ಹೈಪ್ ಸಿಕ್ಕಿತ್ತು.. ಈ ಕ್ಯೂಟ್ ಜೋಡಿ ಹೆಸರಲ್ಲಿ ಆರ್ವಿಯಾ ಫ್ಯಾನ್ ಪೇಜ್ ಕೂಡ ಕ್ರಿಯೇಟ್ ಆಗಿತ್ತು..
ಒಬ್ಬರಿಗೆ ಗೆಲುವು ಅಗತ್ಯ, ಮತ್ತೊಬ್ಬರಿಗೆ ಗೆಲುವು ಅನಿವಾರ್ಯ – ವಿನ್ನರ್ ಘೋಷಣೆಗೂ ಮುನ್ನ ಚಕ್ರವರ್ತಿ ಅವರಾಡಿದ ಮಾತುಗಳಿವು..!
ಅರವಿಂದ್ ಅವರ ಗುಣ, ಕ್ರೀಡಾ ಸ್ಪೂರ್ತಿ ಟಾಸ್ಕ್ ನಲ್ಲಿ ಅವರ ಆಟದ ವಿಧಾನ ಜನರಿಗೆ ತೀರಾ ಹಿಡಿಸಿತ್ತು.. ಆರಂಭದಿಂದಲೂ ಅರವಿಂದ್ ಹಾಗೂ ಮಂಜು ಪಾವಗಡ ಟಾಪ್ 2 ಫೈನಲಿಸ್ಟ್ ಆಗೋದು ಪಕ್ಕಾ ಎಂದೇ ಹೇಳಲಾಗಿತ್ತು.ಲ. ಜೊತೆಗೆ ಇವರಿಬ್ಬರಲ್ಲಿ ಒಬ್ಬರು ವಿನ್ನರ್ ಮತ್ತೊಬ್ಬರು ರನ್ನರ್ ಅಪ್ ಅಂತಲೇ ಹೇಳಲಾಗಿತ್ತು.. ಆದ್ರೆ ಫೈನಲ್ಸ್ ನಲ್ಲಿ ಮಂಜು ಟ್ರೋಫಿಯನ್ನ ತಮ್ಮದಾಗಿಸಿಕೊಂಡರು..
ಬೈಕರ್ ಅರವಿಂದ್ ಕೆ.ಪಿ. 43,35,957 ಮತಗಳನ್ನು ಪಡೆದುಕೊಂಡು ರನ್ನರ್ ಅಪ್ ಆಗಿ ಆಚೆ ಬಂದಿದ್ದಾರೆ. ಬಿಗ್‍ಬಾಸ್ ಟಾಪ್‍ನಲ್ಲಿ 5 ಸ್ಪರ್ಧಿಗಳಿದ್ದರು. ವೈಷ್ಣವಿ, ಪ್ರಶಾಂತ್ ಮನೆಯಿಂದ ಆಚೆ ಬಂದ ಮೇಲೆ ಮನೆಯಲ್ಲಿ ಅರವಿಂದ್, ದಿವ್ಯಾ ಉರುಡುಗ, ಮಂಜು ಪಾವಗಡ ಉಳಿದಿದ್ದರು. ಮಂಜು ವಿನ್ನರ್ ಆದರೆ, ಅರವಿಂದ್ ರನ್ನರ್ ಅಪ್ ಆದರು. ಅರವಿಂದ್‍ಗೆ 11 ಲಕ್ಷ ಜೊತೆಗೆ ಹಿಂದಿನ ವಾರದ ಗೇಮ್‍ನಲ್ಲಿ ಪಡೆದುಕೊಂಡ 2 ಲಕ್ಷ ಹಣವನ್ನು ಸೇರಿ 13 ಲಕ್ಷ ಹಣ ಸಿಕ್ಕಿದೆ.
ಅರವಿಂದ್ ಮೂಲತಃ ಉಡುಪಿಯವರು. ಅವರು ಬೇರೆಬೇರೆ ರಾಷ್ಟ್ರಗಳಲ್ಲಿ ಬೈಕ್ ಓಡಿಸಿದ್ದಾರೆ. ಅನೇಕ ಕಠಿಣ ಪರಿಸ್ಥಿತಿಗಳನ್ನು ಅವರು ಎದುರಿಸಿ ಬಂದಿದ್ದಾರೆ. ಹೀಗಾಗಿ ಬಿಗ್‍ಬಾಸ್ ಮನೆಯಲ್ಲಿ ಅವರ ಕಾನ್ಫಿಡೆನ್ಸ್ ಮಟ್ಟ ತುಂಬಾನೇ ಹೆಚ್ಚಿತ್ತು. ಅವರು ಏನನ್ನೇ ಹೇಳುವುದಿದ್ದರೂ ಆತ್ಮವಿಶ್ವಾಸದಿಂದ ಹೇಳುತ್ತಿದ್ದರು ಮತ್ತು ಹೇಳುವ ವಿಚಾರವನ್ನು ನೇರವಾಗಿ ಹೇಳುತ್ತಿದ್ದರು. ಅರವಿಂದ್ ನೇರವಾಗಿ ಮತನಾಡುತ್ತಾರೆ, ತಾವು ಹೊರಗಡೆ ಹೇಗೆ ಇದ್ದಾರೆ ಹಾಗೆ ಬಿಗ್‍ಬಾಸ್ ಮನೆಯಲ್ಲಿ ಇದ್ದರು..
ಒಟ್ಟಾರೆ ಬಿಗ್ ಬಾಸ್ ಸೀಸನ್ 8ರಲ್ಲಿ ನಿರೀಕ್ಷೆಯಂತೆಯೇ ಮಂಜು ಪಾವಗಡ ಅವರು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಮೊದಲನೇ ರನ್ನರ್ ಅಪ್ ಅರವಿಂದ್ ಕೆಪಿ ಆದ್ರೆ 2ನೇ ರನ್ನರ್ ಅಪ್ ದಿವ್ಯಾ ಉರುಡುಗ ಆಗಿದ್ದಾರೆ. ಮಂಜು ಪಾವಗಡ ಆರಂಭದಿಂದ್ಲೂ ಮನೆ ಮಂದಿಯನ್ನ , ಪ್ರೇಕ್ಷಕರನ್ನ ನಗಿಸುತ್ತಾ ನಗುತ್ತಾ ಆಟವಾಡುತ್ತಾ ಜನರ ಮನಸನ್ನ ಗೆದ್ದು ಇಂದು ಟ್ರೊಫಿಯ ಹಕ್ಕುದಾರರಾಗಿದ್ದಾರೆ.. ಅವರಿಗೆ ಬಿಗ್ ಬಾಸ್ ಕಡೆಯಿಂದ 53 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ..