ನೀನು ಕಾಮಿಡಿಯನ್ ಬದಲು ವಿಲ್ಲನ್ ಆಗು : ಮಂಜನಿಗೆ ಸಂಬರಗಿ ಸಲಹೆ
ಬಿಗ್ ಬಾಸ್ ಸೀಸನ್ 8… ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣೆನೆ ಆರರಂಭವಾಗಿದೆ.. ಮನೆಯಲ್ಲಿ ಉಳಿದಿರೋದೆ 5 ಜನ. ಐವರು ಗ್ರ್ಯಾಂಡ್ ಫಿನಾಲೆಗೇನೋ ಎಂಟ್ರಿಕೊಟ್ಟಾಯ್ತು.. ಒಂದೇ ವಾರದ ಅಂತರದಲ್ಲಿ ಮೂವರು ಮನೆಯಿಂದ ಎಲಿಮಿನೇಟ್ ಆಗಾಯ್ತು.. ದಿವ್ಯಾ ಸುರೇಶ್ , ಶಮಂತ್ ಗೌಡ, ಚಕ್ರವರ್ತಿ ಹೊರನಡೆದಾಗಿದೆ.. ಈ ಮೂಲಕ ಸಂಬರಗಿ , ಮಂಜು ಪಾವಗಡ , ದಿವ್ಯಾ ಉರುಡು , ಅರವಿಂದ್ ಕೆಪಿ , ವೈಷ್ಣವಿ ನೀರೀಕ್ಷಷೆಯಂತೆಯೇ ಈ ಸೀಸನ್ ಐವರು ಗ್ರ್ಯಾಂಡ್ ಫಿನಾಲಿಸ್ಟ್ ಗಳಾಗಿದ್ದಾರೆ.. ಆದ್ರೆ ಪ್ರಶ್ನೆ ಟ್ರೊಫಿಗೆ ಮುತ್ತೀಡೋದ್ಯಾರು ಈ ಐವರ ಪೈಕಿ.. ಸಸೋಷಿಯಲ್ ಮೀಡಿಯಾದಲ್ಲಿ ಫಿನಾಲೆ ವೀಕ್ ದೇ ಚರ್ಚೆ.. ವಿನ್ನರ್ ಯಾರೂ ಅನ್ನೋದೇ ಮಾತುಕತೆ..
ಈ ನಡುವೆ ಬಿಗ್ ಬಾಸ್ ಸೀಸನ್ 8ರ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದ್ದು, ಸ್ಪರ್ಧಿಗಳು ಮನೆಯಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಹೀಗೆಯೇ ಸುಮ್ನೆ ಮಾತನಾಡುವಾಗ ಮಂಜು ಪಾವಗಡ ಅವರ ಸಿನಿಮಾ ಕರಿಯರ್ ಬಗ್ಗೆ ಪ್ರಶಾಂತ್ ಸಂಬರಗಿ ಸಲಹೆಯೊಂದನ್ನು ನೀಡಿದ್ದಾರೆ.
ಗಾರ್ಡನ್ ಏರಿಯಾದಲ್ಲಿ ಮಾತನಾಡುತ್ತಿದ್ದಾಗ ಪ್ರಶಾಂತ್ ಸಂಬರಗಿ ಮಂಜು ಪಾವಗಡಗೆ ಕಾಮಿಡಿಯನ್ ಬದಲಿಗೆ ವಿಲ್ಲನ್ ಆಗಲು ಸಲಹೆ ನೀಡಿದ್ದಾರೆ.. ಹೌದು.. ಕಮಿಡಿಯನ್ ಬದಲಿಗೆ ನೀನು ವಿಲ್ಲನ್ ಆಗು ಮಂಜಾ ಎಂದು ಹೇಳಿದ್ದಾರೆ. ಮಂಜಾ ನೀನು ನೆಗೆಟಿವ್ ಶೇಡ್ ಮಾಡಬಹುದು, ಕಾಮಿಡಿಯನ್‍ಗಿಂತ ನಿನ್ನ ಲುಕ್ ನೆಗೆಟಿವ್ ಪಾತ್ರಕ್ಕೆ ಹೊಂದಿಕೆಯಾಗುತ್ತದೆ ಎಂದು ಪ್ರಶಾಂತ್ ಹೇಳಿದ್ದಾರೆ. ಆಗ ಮಂಜು ಮಧ್ಯೆ ಪ್ರವೇಶಿಸಿ ನನಗೆ ತುಂಬಾ ಇಷ್ಟ ಸರ್ ಎಂದಿದ್ದಾರೆ.
ವಿಶೇಷವಾಗಿ ಗ್ರಾಮೀಣ ಸೊಗಡಿನ ಕಥೆ ಹಾಗೂ ಟೌನ್ ಬ್ಯಾಕ್‍ಡ್ರಾಪ್ ಸ್ಟೋರಿಗಳಲ್ಲಿ ನೀನು ವಿಲನ್ ಪಾತ್ರ ಮಾಡಬಹುದು ಎಂದು ಪ್ರಶಾಂತ್ ಹೇಳಿದ್ದಾರೆ. ವಾಸ್ತವವೆಂದರೆ ನನಗೆ ನೆಗೆಟಿವ್ ಶೇಡ್ ಪಾತ್ರಗಳನ್ನು ಮಾಡಲು ತುಂಬಾ ಆಸೆ, ಅಂತಹದ್ದೇ ಪಾತ್ರಗಳನ್ನು ಮಾಡಬೇಕು ಸರ್, ಅದು ನನ್ನ ದೊಡ್ಡ ಕನಸು. ನನಗೆ ನೆಗೆಟಿವ್ ಕ್ಯಾರೆಕ್ಟರ್ ತುಂಬಾ ಇಷ್ಟ ಸರ್, ನಾನು ಇಂಡಸ್ಟ್ರಿಗೆ ಬಂದಿದ್ದೇ ಅದಕ್ಕಾಗಿ. ಬಂದ ತಕ್ಷಣ ಆಸೆ ಹುಟ್ಟಿದ್ದೇ ಅದು, ಹಾಗೇ ಆಗಬೇಕು ಎಂದುಕೊಂಡಿದ್ದೇನೆ ಎಂದು ಮಂಜು ಪ್ರತಿಕ್ರಿಯಿಸಿದ್ದಾರೆ. ಒಟ್ನಲ್ಲಿ ಆರಂಭದಲ್ಲಿ ಒಂದೆರೆಡು ಬಾರಿ ಸಂಬರಗಿ ಮಂಜು ನಡುವೆ ಕಿತ್ತಾಟ ನಡೆದಿದ್ರೂ ಕಡೆ ಕಡೆಯಲ್ಲಿ ಇನ್ನೇನು ಮುಕ್ತಾಯವಾಗೋ ಹಂತದಲ್ಲಿ ಇಬ್ಬರೂ ಪರಸ್ಪರ ಮನ ಬಿಚ್ಚಿ ಮಾತನಾಡಿಕೊಂಡಿದ್ದಾರೆ.
BIGGBOSS 8 : ಪ್ರಶಾಂತ್ ಸಂಬರಗಿ ಬಗ್ಗೆ ಮನೆ ಸಸದಸ್ಯರ ಮನದಾಳದ ಮಾತುಗಳು..!








