BIGGBOSS 8 : ‘ಆಟೋಗ್ರಾಫ್’ ಮೂವ್ ಆನ್ ಆಗುವುದನ್ನ ನಾನು ಇಲ್ಲಿ ಕಲಿತೆ – ವೈಷ್ಣವಿ
ಕೋವಿಡ್ 2ನೇ ಅಲೆ ಲಾಕ್ ಡೌನ್ ನಿಂದಾಗಿ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತುಹೋಗಿದೆ.. ಸೇಫ್ ಆಗಿ ಉಳಿದಿದ್ದ ಸ್ಪರ್ಧಿಗಳು ಮನೆಯಿಂದ ಆಚೆ ಬಂದಿದ್ದಾರೆ.. ಹೀಗೆ ಬಂದಿರುವ ಸ್ಪರ್ಧಿಗಳು ಆಟೋಗ್ರಾಫ್ ಎಪಿಸೋಡ್ನಲ್ಲಿ ಮಾತನಾಡಿ ಬಿಗ್ ಬಾಸ್ ಮನೆಯಲ್ಲಿನ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ.
ಅದೇ ರೀತಿ ವೈಷ್ಣವಿ ಗೌಡ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಬಿಗ್ಬಾಸ್ ಸೀಸನ್-8 ಸಸ್ಪೆಂಡ್ ಆಗಿರುವುದು ತುಂಬಾ ಬೇಜಾರಾಯಿತು. ಆದರೆ ವಿಷಯ ಬಹಳ ಸೀರಿಯಸ್ ಆಗಿದೆ. ಕಷ್ಟಕರವಾಗಿದೆ ಆದರೂ ಎಲ್ಲರೂ ಧೈರ್ಯದಿಂದ ಹೋರಾಡೋಣ. ನಾನು ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ.
ಬಿಗ್ಬಾಸ್ ಮನೆಗೆ ನಾನು ಎಂಟ್ರಿ ಆದಾಗ ಒಂದು ರೀತಿ ಅರಮನೆಯಂತೆ ನನಗೆ ಅನಿಸಿತು. ಮಂಜು ಒಂದು ಬಾರಿ ಮಾತನಾಡದಂತೆ ಬಿಗ್ಬಾಸ್ ಸೂಚಿಸಿದಾಗ ನಾನು ಅವರ ಮಾತಾಗಿದ್ದೆ, ಅಲ್ಲಿಯವರೆಗೂ ನಾನು ಸೈಲೆಂಟ್ ಎಂದು ಹೇಳುತ್ತಿದ್ದವರು, ತುಂಬಾ ಮಾತನಾಡುತ್ತೀಯಾ ಎಂದು ಹೇಳಲು ಶುರುಮಾಡಿದರು.
ಜೋಕ್ ಹೇಳಿ ನೀರು ಕುಡಿಯುವ ಟಾಸ್ಕ್ ಒಂದು ರೀತಿ ಮಜಾ ಇತ್ತು. ನನ್ನ ಕೈನಲ್ಲಿ ಆಗುವುದಿಲ್ಲ ಎಂದುಕೊಂಡಿದ್ದೆ. ಆದರೆ ಪ್ರತಿಯೊಬ್ಬರು ನನಗೆ ನೀರು ಕುಡಿಸಲು ನಾನು ಹೇಳುವ ಡಬ್ಬಾ ಜೋಕ್ಸ್ ಕೇಳಿ ಬಿದ್ದು ಬಿದ್ದು ನಗುತ್ತಿದ್ದರು. ಒಟ್ಟಾರೆ ನಾನು ಕಂಪ್ಲೀಟ್ ಮಜಾ ಮಾಡಿದೆ. ಎಲ್ಲರೂ ನನ್ನನ್ನು ತುಂಬಾ ವೀಕ್ ಇದ್ದಾರೆ. ನನಗೆ ಕಾಂಪಿಟೇಶನ್ ಅಲ್ಲ ಎಂದು ಹೇಳುತ್ತಿದ್ದರು. ನಾನು ಹೇಗಾದರೂ ಪ್ರೂ ಮಾಡಲೇ ಬೇಕು ಎಂದು ಆ ಟಾಸ್ಕ್ನಲ್ಲಿ ಗೆದ್ದೆ. ಅದು ಒಂದು ರೀತಿ ಚಾಲೆಂಜಿಂಗ್ ಆಗಿ ಇತ್ತು. ರೋಪ್ ಟಾಸ್ಕ್ ನನ್ನ ಫೇವರೆಟ್ ಎಂದು ಹೇಳಿದರು.
ಇನ್ನೂ ಬೇಗ ಮೂವ್ ಆನ್ ಆಗುವುದನ್ನು ನಾನು ಬಿಗ್ ಬಾಸ್ ನಿಂದ ಕಲಿತುಕೊಂಡಿದ್ದೇನೆ. ಇಲ್ಲಿ ಕೋಪ, ನಗು, ಅಳು ಇದ್ಯಾವುದು ಶಾಶ್ವತ ಅಲ್ಲ. ನಾವು ಪ್ರಯತ್ನಗಳನ್ನು ಪಡುತ್ತಾ ಜೀವನದಲ್ಲಿ ಮುಂದಕ್ಕೆ ಹೋಗುತ್ತಿರಬೇಕು. ಜೀವನ ನಿಮಗೆ ಪಾಠ ಕಲಿಸಿಕೊಡುತ್ತದೆ, ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ನಾನು ಕೇವಲ ಅದರ ಕೈ ಹಿಡಿದುಕೊಂಡು ಹೋಗಬೇಕು ಅಷ್ಟೇ ಎಂದರು. ಸದ್ಯ ನಾಳೆಯಿಂದ ಬಿಗ್ಬಾಸ್ ಮನೆ, ಬಿಗ್ಬಾಸ್ ವಾಯ್ಸ್, ಮೈಕ್, ಟಾಸ್ಕ್ಗಳು, ಸ್ಟೋರ್ ಬೆಲ್ ಆದಾಗ ಓಡಿ ಹೋಗುತ್ತಿದ್ದ ಏಕ್ಸ್ಸೈಟ್ಮೆಂಟ್ ಪ್ರತಿಯೊಂದನ್ನು ಬಹಳ ಮಿಸ್ ಮಾಡಿಕೊಳ್ಳುತ್ತೇನೆ ಎಂದರು.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.