BIGGBOSS 8 – ಸೈಲೆಂಟ್ ಕಿಲ್ಲರ್ ವೈಷ್ಣವಿ ಇಷ್ಟು ದಿನಗಳ ಕಾಲ ಸೇಫ್ ಆಗಿರೋದಕ್ಕೆ ಕಾರಣ..?
ಬಿಗ್ ಬಾಸ್ ಸೀಸನ್ 8 ರಲ್ಲಿ ಸೈಲೆಂಟ್ ಕಿಲ್ಲರ್ ಅಂತ ಯಾರಿಗಾದ್ರೂ ಹೇಳಬಹುದು ಎಂದ್ರೆ ಅದು ವೈಷ್ಣವಿ.. ಯಾಕಂದ್ರೆ ಸೀಸನ್ ಆರಂಭದಿಂದಲೂ ಸೈಲೆಂಟ್ ಆಗಿಯೇ ಬಹಳ ಜವಾಬ್ದಾರಿಯುತವಾಗಿ ಆಟ ಆಡಿಕೊಂಡು ಬಂದಿದ್ದ ವೈಷ್ಣವಿ ಇತ್ತೀಚೆಗೆ ಸ್ವಲ್ಪ ಎಲ್ಲರ ಜೊತೆ ಬೆರೆಯುತ್ತಿದ್ದು, ಅವರ ಮತ್ತೊಂದು ಸೈಡ್ ಕೂಡ ನೋಡೋಕೆ ಸಿಗುತ್ತಿದೆ. ಅದಕ್ಕೆ ಉತ್ತಮ ಉದಾಹರಣೆ ಹಾಸ್ಟೆಲ್ ಟಾಸ್ಕ್.. ಈ ಟಾಸ್ಕ್ ವೇಳೆ ವೈಷ್ಣವಿಯ ರೌಡಿ ಬೇಬಿ ಲುಕ್ ಎಲ್ಲರನ್ನೂ ಬೆರಗಾಗಿಸಿತ್ತು.
ಆದ್ರೆ ಆರಂಭದಿಂದಲೂ ಲೈಮ್ ಲೈಟ್ ನಲ್ಲಿ ಇಲ್ಲದೇ ಇದ್ದರು 9 ವಾರಗಳ ಕಾಲ ವೈಷ್ಣವಿ ಸೇಫ್ ಆಗಿದ್ದು ಹೇಗೆ ಅನ್ನೋ ಪ್ರಶ್ನೆಗಳು ಕೆಲವರನ್ನ ಕಾಡ ತೊಡಗಿದೆ.. ಇದಕ್ಕೆ ಉತ್ತರ ಅವರ ವ್ಯಕ್ತಿತ್ವ.. ಅವರ ಮೆಚ್ಯುರಿಟಿ ಎನ್ನಬಹುದು.. ಯಾಕಂದ್ರೆ ವೈಷ್ಣವಿ ಮನೆಯಲ್ಲಿ ತಮ್ಮ ಪಾಡಿಗೆ ತಾವಿರುತ್ತಾರೆ.. ಯಾರನ್ನೂ ಸುಖಾ ಸುಮ್ಮನೆ ಕೆರಳಿಸುವುದಿಲ್ಲ. ತಮ್ಮ ತಂಟೆಗೆ ಯಾರಾದ್ರೂ ಬಂದರೂ ಅಂತವರಿಗೆ ತಮ್ಮದೇ ಶೈಲಿಯಲ್ಲೇ ಹೆಚ್ಚೇನು ದೊಡ್ಡ ಗಲಾಟೆ ಮಾಡದೇ ಉತ್ತರ ನೀಡ್ತಾರೆ.. ಆಟದಲ್ಲೂ ಉತ್ತಮ ಪ್ರದರ್ಶನ ಅಡುಗೆ ಮನೆ ಇತರೇ ಜವಾಬ್ದಾರಿಗಳಾಗಿರಬಹುದು.. ಮತ್ತೊಂದು ಕಾರಣ ಬಿಗ್ ಬಾಸ್ ಮುನ್ನ ಕಲಿರುತೆರೆಯ ಅಗ್ನಿಸಾಕ್ಷಿ ಮೂಲಕ ಸನ್ನಿಧಿಯಾಗಿ ವೈಷ್ಣವಿ ಗಳಿಸಿರುವ ಫೇಮ್ , ಅಭಿಮಾನಿಗಳು ಸಹ ವೈಷ್ಣವಿಗೆ ಬೆಂಬಲಿಸುತ್ತಿದ್ದಾರೆ. ವೈಷ್ಣವಿ ಯಾರಿಗೂ ಟಾರ್ಗೆಟ್ ಆಗದ ರೀರತಿಯಲ್ಲಿ ಆಟವಾಡುವುದು ಅವರ ಪ್ಲಸ್ ಪಾಯಿಂಟ್..