BIGGBOSS 8 : ದುರ್ನಡೆತೆಯಿಂದಾಗಿಯೇ ಎಲಿಮಿನೇಟ್ ಆದ್ರಾ ಚಕ್ರವರ್ತಿ..!
ಗ್ರ್ಯಾಂಡ್ ಫಿನಾಲೆ ಹತ್ರ ಆಗ್ತಾಯಿದ್ದಂತೆ ಸ್ಪರ್ಧಿಗಳಲ್ಲಿ ಟೆನ್ಷನ್ ಹೆಚ್ಚಾಗ್ತಾಯಿದೆ.. ಬಬಿಗ್ ಬಾಸ್ ಕೊಡುತ್ತಿರುವ ಟ್ವಿಸ್ಟ್ ಗಳು ಸ್ಪರ್ಧಿಗಳ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸುತ್ತಿದೆ.. ಈ ನಡುವೆ ವೀಕೆಂಡ್ ಬದಲಿಗೆ ವಾರದ ಮಧ್ಯದಲ್ಲಿ ಎಲಿಮಿನೇಟ್ ಮಾಡೋದಾಗಿ ಬಿಗ್ ಬಾಸ್ ತಿಳಿಸಿದ್ರು.. ಹೀಗಾಗಿ ಪ್ರತಿ ಕ್ಷಣ ಸ್ಪರ್ಧಿಗಳು ಭಯದಲ್ಲೇ ಕಾಲ ಕಳೆಯುಂತಾಗಿತ್ತು..
ಇದೀಗ ಬಿಗ್ ಬಾಸ್ 2ನೇ ಇನ್ನಿಂಗ್ಸ್ ನಲ್ಲಿ ಚಂದ್ರಚೂಡ್ ಚಕ್ರವರ್ತಿ ಎಲಿಮಿನೇಟ್ ಆದ 4ನೇ ಸ್ಪರ್ಧಿಯಾಗಿದ್ದಾರೆ.. ವೈಲ್ಡ್ ಕಾರ್ಡ್ ಮೂಲಕ ಮನೆಗೆ ಎಂಟ್ರಿಯಾಗಿದ್ದ ಚಕ್ರವರ್ತಿ ಆರಂಭದಿಂದಲೂ ಲೈಮ್ ಲೈಟ್ ನಲ್ಲಿಯೇ ಇದ್ರು. ಮೈಂಡ್ ಗೇಮ್ಸ್ ಆಡುತ್ತಾ ಇತರೇ ಸ್ಪರ್ಧಿಗಳ ಬಗ್ಗೆ ಕಮೆಂಟ್ ಗಳನ್ನ ಪಾಸ್ ಮಾಡುತ್ತಾ , ಕಿರಿಕ್ ಮಾಡಿಕೊಳ್ತಾ ನೇರ ನುಡಿಯಿಂದ, ಭಾಷಾ – ಬರವಣಿಗೆಯ ಹಿಡಿತದಿಂದ ಗುರುತಿಸಿಕೊಂಡಿದ್ದವರು ಚಕ್ರವರ್ತಿ.. ಮನಸ್ಸು ಮಾಡಿದ್ರೆ ಚಕ್ರವರ್ತಿ ಅವರು ಫೈನಲ್ಸ್ ಎಂಟ್ರಿಯಾಗಬಹುದಾಗಿತ್ತು..
ಆದ್ರೆ ಅವರು ತಾಳ್ಮೆ ಕಳೆದುಕೊಂಡು ಮಾಡಿದ ಆ ಒಂದೇ ಒಂದು ತಪ್ಪು ಅವರ ಜರ್ನಿಯನ್ನ ಕೊನೆಗೊಳಿಸಿದೆ ಅಂತ ಹೇಳಬಹುದು.. ಹೌದು ಮನೆಯಲ್ಲಿ ಪ್ರಿಯಾಂಕಾ ತಿಮ್ಮೇಶ್ ಹಾಗೂ ಚಕ್ರವರ್ತಿ ನಡುವೆ ಸಿಕ್ಕಾಪಟ್ಟೆ ಕಿರಿಕ್ ನಡೆದಿತ್ತು.. ಕಳೆದ ವಾರ ಪ್ರಿಯಾಂಕಾ ತಿಮ್ಮೇಶ್ ಎಲಿಮಿನೇಟ್ ಆದಾಗ ಚಕ್ರವರ್ತಿಯನ್ನ ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಮಾಡಿದ್ದರು.. ಇದ್ರಿಂದ ಆಕ್ರೋಶಗೊಂಡಿದ್ದ ಚಕ್ರವರ್ತಿ ಪ್ರಿಯಾಂಕಾ ತಿಮ್ಮೇಶ್ ಅವರಿಗೆ ಅಶ್ಲೀಲ ಸನ್ನೆ ತೋರಿಸಿದ್ದರು… ಇದ್ರಿಂದಾಗಿ ಪ್ರೇಕ್ಷಕರು ಆಕ್ರೋಶಗೊಂಡಿದ್ದು, ಚಕ್ರವರ್ತಿಯನ್ನ ಆಚೆ ಹಾಕುವಂತೆ ಆಗ್ರಹಿಸಿದ್ದರು.. ಮೊದಲೇ ನೇರವಾಗಿ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಚಕ್ರವರ್ತಿ ಈ ರೀತಿಯಾದ ನಡೆಯಿಂದ ತಮ್ಮ ಪರ ವೋಟಿಂಗ್ ಮಾಡಿ ಉಳಿಸಿಕೊಳ್ಳುವ ವೀಕ್ಷಕರ ಸಂಖ್ಯೆಯನ್ನ ಕಳೆದುಕೊಂಡಿದ್ದರು.. ಇದೇ ವಿಚಾರವಾಗಿ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಚಕ್ರವರ್ತಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.. 
ಹೀಗಾಗಿ ಚಕ್ರವರ್ತಿ ಹೊರಗಡೆ ಹೋಗೋದಕ್ಕೆ ನೇರ ಕಾರಣ ಅವರ ದುರ್ನಡೆತೆಯೇ ಅಂದ್ರೂ ತಪ್ಪಾಗೋದಿಲ್ಲ.. ಇನ್ನೂ ಒಂದು ಪಕ್ಷ ಚಕ್ರವರ್ತಿ ತಾಳ್ಮೆ ಕಳೆದುಕೊಳ್ಳದೇ ಅಶ್ಲೀಲ ಸನ್ನೆ ಮಾಡದೇ ಹೋಗಿದ್ದರೆ ಬಹುಶಃ ಇನ್ನೂ ಸ್ವಲ್ಪ ದಿನ ಮನೆಯಲ್ಲೇ ಇರಬಹುದಾಗಿತ್ತು. ಫೈನಲ್ಸ್ ಗೂ ಎಂಟ್ರಿಯಾಗುವ ಎಲ್ಲಾ ಅವಕಾಶಗಳೂ ಇದ್ದವು.. ಒಂದು ವೇಳೆ ಚಕ್ರವರ್ತಿ ಹೋಗದೇ ಇದ್ದಿದ್ದರೆ , ಶಮಂತ್ ಗೌಡ ಅಥವ ಶುಭಾ ಪುಂಜಾ ಅವರು ಹೋಗು ಚಾನ್ಸಸ್ ಇತ್ತು ಎಂದು ನೆಟ್ಟಿಗರ ಚರ್ಚೆಯಿಂದ ತಿಳಿದುಬರುತ್ತೆ..
BIGGBOSS 8 : ಫೋನ್ ಕಾಲ್ ಸ್ವೀಕರಿಸಿದ ಸಂಬರಗಿ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದೇಕೆ..?








