BIGGBOSS 8 : ದಿವ್ಯಾ ಕಣ್ಣೀರಿಗೆ ಕರಗಿದ ಅರವಿಂದ್ ಮನಸ್ಸು..!
ಬಿಗ್ ಬಾಸ್ ಶೋ ಲಾಕ್ ಡೌನ್ ನಿಂದ ಅರ್ಧಕ್ಕೆ ನಿಂತು ಹೋಗಿ ಮತ್ತೆ ಪುರಾರಂಭಾವಗಿದೆ.. ಈ ನಡುವೆ ಈಗಾಗಲೇ ಹೊರಗಡೆ ಹೋಗಿ ಎಪಿಸಸೋಡ್ ಗಳನ್ನ ನೋಡಿ ವಾಪಸ್ ತಪ್ಪುಗಳನ್ನ ಸರಿ ಪಡಿಸಿಕೊಂಡು ಹೊಸ ಗೇಮ್ ಸ್ಟ್ರಾಟರ್ಜಿಗಳೊಂದಿಗೆ ಸ್ಪರ್ಧಿಗಳು ರೀ ಎಂಟ್ರಿ ಕೊಟ್ಟಿದ್ದಾರೆ.. ಹಲವರಲ್ಲಿ ಬದಲಾವಣೆಗಳು ಕಾಣ್ತಿವೆ.. ಆದ್ರೆ ಮೊದಲ ಇನ್ನಿಂಗ್ಸ್, 2 ಇನ್ನಿಂಗ್ಸ್ ಎರಡರಲ್ಲೂ ಬದಲಾಗಿಲ್ಲ ಅಂದ್ರೆ ಅಂದ್ರೆ ದಿವ್ಯಾ – ಅರವಿಂದ್ ಜೋಡಿಯ ಕೆಮಿಸ್ಟ್ರಿ , ಕ್ಯೂಟ್ ನೆಸ್..
ಈ ಇಬ್ಬರೂ ಮೊದಲು ಹೇಗೆ ಇದ್ರೋ ಈಗಲೂ ಹಾಗೆಯೇ ಇದ್ದಾರೆ.. ಇದೀಗ ದಿವ್ಯಾ ಕಣ್ಣೀರಿಟ್ಟಿದ್ದು, ಅರವಿಂದ್ ಮನಸ್ಸು ಕರಗಿದೆ. ಬಿಗ್‍ಬಾಸ್ ಸ್ಪರ್ಧಿಗಳಿಗೆ ನಿಲ್ಲು ನಿಲ್ಲು ಕಾವೇರಿ, ತರತರ ಈ ಎತ್ತರ ಎನ್ನುವ ಎರಡು ಟಾಸ್ಕ್ ಅನ್ನು ನೀಡಿದ್ದರು. ಈ ವೇಳೆ 2 ಗುಂಪನ್ನು ಮಾಡಲಾಗಿತ್ತು. ದಿವ್ಯಾ ಅರವಿಂದ್ ಒಂದೇ ಗುಂಪಿನಲ್ಲಿ ಆಟವನ್ನು ಆಡುತ್ತಿದ್ದರು. ತರತರ ಎತ್ತರ ಟಾಸ್ಕ್ ಆಡುವ ಸಮಯದಲ್ಲಿ ಅರವಿಂದ್ ರೂಮ್ ಒಳಗೆ ಲಾಕ್ ಆಗಿ ಬಿಡುತ್ತಾರೆ.
ಈ ವೇಳೆ 2 ತಂಡಗಳ ಚೆನ್ನಾಗಿ ಆಡುತ್ತಾರೆ ಗೇಮ್ ಟೈ ಆಗುತ್ತದೆ. ಈ ಗೇಮ್ ಹೇಗೆ ಟೈ ಆಯಿತ್ತು. ನಾವು ಗೆಲ್ಲ ಬೇಕಿತ್ತು ಎಂದು ಅರವಿಂದ್, ದಿವ್ಯಾ ಮಾತನಾಡುತ್ತಾ ಇರುವಾಗ ಗೇಮ್ ಸೋತಿರುವ ಕುರಿತಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ದಿವ್ಯಾ ಏನ್ ಆಯ್ತು ಗೇಮ್‍ನಲ್ಲಿ ಎಂದು ವಿವರವಾಗಿ ಅರವಿಂದ್‍ಗೆ ಹೇಳಲು ಪ್ರಯತ್ನಿಸಿದ್ದಾರೆ. ಆದರೆ ಅರವಿಂದ್ ಆಟ ಗೆದ್ದಿಲ್ಲ ಎನ್ನುವ ಬೇಸರದಲ್ಲಿ ಇದ್ದರು. ದಿವ್ಯಾ ಕೂಡಾ ಬೇಸರವಾಗಿ ಕೂತಿದ್ದರು. ಅರವಿಂದ್ ಬಂದು ದಿವ್ಯಾ ಅವರಿಗೆ ಸಮಾಧಾನ ಮಾಡಿದ್ದಾರೆ.
ನಾವು ಗೇಮ್ ಸೋತಿಲ್ಲ, ಆದರೆ ವೀನ್ ಆಗಬೇಕಿತ್ತು ಅಷ್ಟೇ. ಎಲ್ಲರೂ ಬೇಸ್ಟ್ ಟ್ರೈ ಮಾಡಿದ್ದಾರೆ. ಎಲ್ಲರೂ ಹಸನ್ಮುಖಿಯಾಗಿರಬೇಕು ಎಂದು ಹೇಳಿ ನೀವು ಬೇಸರವಾಗಬೇಡಿ, ಮುಂದಿನ ಆಟವನ್ನು ಚೆನ್ನಾಗಿ ಆಡುವಾ ಎಂದು ದಿವ್ಯಾ ಅರವಿಂದ್‍ಗೆ ಹೇಳಿದ್ದಾರೆ. ಆಗ ಟೀಮ್‍ನ ಎಲ್ಲರನ್ನೂ ಕರೆದು ಅರವಿಂದ್ ಚೆನ್ನಾಗಿ ಅಡುವ ಎಂದು ಹೇಳಿ ಆಟಕ್ಕೆ ಹುರಿದುಂಬಿಸಿದ್ದಾರೆ.
ಸಂಗೀಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದ ಮ್ಯೂಸಿಕ್ ಕಂಪೋಸರ್ ಅರ್ಜುನ್ ಜನ್ಯಾ








