ಡಿಯು , ಅರವಿಂದ್ ಕಾಲೆಳೆದ ಕಿಚ್ಚ – ಈಗ್ಲೇ ಮದುವೆಗೆ ರೆಡಿಯಾಗಿದ್ದಾರಾ..? ಪ್ರಣಯ ಪಕ್ಷಿಗಳು..!
ಬಿಗ್ ಬಾಸ್ 2ನೇ ಇನ್ನಿಂಗ್ಸ್ ನಲ್ಲಿ ಹಲವರಲ್ಲಿ ಅನೇಕ ಬದಲಾವಣೆಗಳು ಕಂಡುಬoದಿವೆ.. ಆದ್ರೆ ಆದ್ರೆ ಮೊದಲ ಇನ್ನಿಂಗ್ಸ್, 2 ಇನ್ನಿಂಗ್ಸ್ ಎರಡರಲ್ಲೂ ಬದಲಾಗಿಲ್ಲ ಅಂದ್ರೆ ಅಂದ್ರೆ ದಿವ್ಯಾ – ಅರವಿಂದ್ ಜೋಡಿಯ ಕೆಮಿಸ್ಟ್ರಿ , ಕ್ಯೂಟ್ ನೆಸ್.. ಈ ಇಬ್ಬರೂ ಮೊದಲು ಹೇಗೆ ಇದ್ರೋ ಈಗಲೂ ಹಾಗೆಯೇ ಇದ್ದಾರೆ. ಕಿಚ್ಚ ಸುದೀಪ್ ಅವರು ಆಗಾಗ ಈ ಜೋಡಿಯ ಕಾಲೆಳೆಯುತ್ತಲೇ ಇರುತ್ತಾರೆ..
ಅದೇ ರೀತಿ ವೀಕೆಂಡ್ ಸಂಚಿಕೆಯಲ್ಲಿ ಮತ್ತೆ ಡಿಯು ಮತ್ತೆ ಅರವಿಂದ್ ವಿಚಾರವಾಗಿ ಮಾತನಾಡಿರುವ ಕಿಚ್ಚ ಮನೆಯವರನ್ನು ಮಾತನಾಡಿಸಲು ಆರಂಭಿಸುತ್ತಿದ್ದಂತೆ ಇವಾಗ್ಲೇ ಮದ್ವೆಗೆ ರೆಡಿ ಅಗಿದ್ದೀರಲ್ರೀ ಎಂದು ಕೇಳಿದ್ದಾರೆ. ಸುದೀಪ್ ಅವರು ಈ ಪ್ರಶ್ನೆ ಕೇಳುತ್ತಿದ್ದಂತೆ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರು ಕ್ರೀಮ್ ಕರ‍್ನ ಡ್ರೆಸ್ ಹಾಕಿದ್ದರು, ಅದೂ ಸಹ ಸಾಂಸ್ಕೃತಿಕ ಉಡುಗೆ. ಇಬ್ಬರೂ ಅದೇ ಕಲರ್ ಹಾಗೂ ಸಾಂಸ್ಕೃತಿಕ ಉಡುಗೆ ತೊಟ್ಟಿದ್ದರಿಂದ ಇವಾಗ್ಲೇ ಮದ್ವೆಗೆ ರೆಡಿ ಅಗಿದ್ದೀರಲ್ರೀ ಎಂದು ಕಿಚ್ಚ ಪ್ರಶ್ನಿಸಿ ಕಾಲೆಳೆದಿದ್ದಾರೆ..
BIGGBOSS 8 : ಮನೆಯಿಂದ ಹೊರ ನಡೆದ ಶಮಂತ್ – 2ನೇ ಬಾರಿಗೆ ಅದೃಷ್ಟ ಒಲಿಯಲಿಲ್ಲ..!
ಬಳಿಕ ನಿಮ್ಮ ಡ್ರೆಸ್ ಬಗ್ಗೆ ಹೇಳಿ ಎಂದು ಅರವಿಂದ್ ಅವರನ್ನು ಕೇಳಿದ್ದಾರೆ. ಒಂದು ಶರ‍್ವಾನಿ ತರದ ಲಾಂಗ್ ಕೋಟ್ ಹಾಗೂ ಒಂದು ರೇಷ್ಮೆ ಕಚ್ಚೆ ಪಂಚೆ ಸರ್ ಎಂದು ಅರವಿಂದ್ ಉತ್ತರಿಸಿದ್ದಾರೆ. ಬಳಿಕ ದಿವ್ಯಾ ಉರುಡುಗ ಉತ್ತರಿಸಿದ್ದು, ಆಫ್ ಫೈಟ್ ಲೆಹಂಗಾ ಸರ್, ಎಲಿಗೆಂಟ್ ಆಗಿ, ಸಿಂಪಲ್ ಆಗಿ ಎಂದಿದ್ದಾರೆ. ಬಳಿಕ ತಲೆಗೆ ಏನೋ ಮುಡ್ಕೊಂಡಿದಿರಾ ಎಂದು ಸುದೀಪ್ ಕೇಳಿದ್ದಾರೆ. ಹೂವು ಸರ್ ಎಂದಿದ್ದಾರೆ. ಆಗ ಸುದೀಪ್ ಮಾತನಾಡಿ ನಾನು ಮತ್ತೊಬ್ಬ ಕಂಟೆಸ್ಟ್ ಗೆ ಕೇಳಿರುವ ಪ್ರಶ್ನೆಗೂ ನೀವು ರೆಡಿ ಆಗಿರುವುದಕ್ಕೂ ಸರಿ ಇದೆ ಎಂದಿದ್ದಾರೆ.
BIGGBOSS 8 – ಜರ್ನಿ ಬಗ್ಗೆ ಅನುಭವ ಬಿಚ್ಚಿಟ್ಟ ಶುಭಾ – ಮುಂದಿನ ಗೋಲ್ ಮದ್ವೆಯಂತೆ..!
ಬಳಿಕ ದಿವ್ಯಾ ಉರುಡುಗ ಇದಕ್ಕೆ ಸ್ಪಷ್ಟನೆ ನೀಡಿ, ಸ್ವಲ್ಪ ಟ್ರೆಡಿಶನಲ್ ಆಗಿ, ಚೆನ್ನಾಗಿ ರೆಡಿ ಆಗೋಣ ಎಂದು ಈ ಡ್ರೆಸ್ ಹಾಕಿದ್ವಿ ಎಂದಿದ್ದಾರೆ. ಆಗ ಸುದೀಪ್ ಯಾರು ಹೇಲಿದ್ದು ಹಾಗಂತ ಎಂದಿದ್ದಾರೆ. ಸರ್ ಇದು ವೈಷ್ಣವಿ ರಡಿ ಮಾಡಿದ್ದು ಎಂದು ತೊದಲಿದ್ದಾರೆ. ಅಷ್ಟಕ್ಕೆ ಸುದೀಪ್ ಮಧ್ಯ ಪ್ರವೇಶಿಸಿ ಅವರು ಪರ‍್ಟಿಗೆ ಹೋಗೋ ತರ ರೆಡಿ ಆಗಿದ್ದಾರೆ ನೀವು ಮದ್ವೆಗೆ ಹೋಗುವ ರೀತಿ ಕಾಣುತ್ತಿದ್ದೀರಿ ಎಂದು ಕಾಲೆಳೆದಿದ್ದಾರೆ.
ಅದೇ ನನ್ನ ಬಟ್ಟೆ ಆ ರೀತಿ ಇತ್ತಲ್ವಾ ಈ ತರ ಲುಕ್ ಚೆನ್ನಾಗಿ ಕಾಣಿಸುತ್ತೆ ಅಂತ ರೆಡಿ ಆದೆ ಎಂದಿದ್ದಾರೆ. ಹೂವೆಲ್ಲ ಮುಡಿದುಕೊಂಡು ಸಂಡೇಗೆ ರೆಡಿ ಆಗುವುದನ್ನು ಕಡಿಮೆ ನೋಡಿದ್ದೇವೆ ನಾವು, ನಮ್ಮ ಅನಿಸಿಕೆಯಲ್ಲಿ ಸಂಡೆಗಾಗಿಯೇ ರೆಡಿ ಆಗಿದ್ದು ಎಂದು ಭಾವಿಸಿ ಕರ‍್ಯಕ್ರಮ ಮುಂದುವರಿಸುತ್ತೇವೆ ಎಂದು ಸುದೀಪ್ ಹೇಳಿದ್ದಾರೆ. ಆಗ ಮನೆ ಮಂದಿ ನಕ್ಕಿದ್ದಾರೆ.








