BIGGBOSS 8: ಮನೆಯಿಂದ ಈ ವಾರ ಎಲಿಮಿನೇಟ್ ಆಗೋದು ಇವರೆನಾ..?
ಚಂದ್ರಚೂಡ್ ಚಕ್ರವರ್ತಿ ಇತ್ತೀಚೆಗೆ ಪ್ರಿಯಾಂಕಾ ತಿಮ್ಮೇಶ್ ಕೈ ಬೆರಳಿನ ಮೂಲಕ ಅಶ್ಲೀಲ ಸನ್ನೆ ತೋರಿಸಿ ವೀಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದರು.. ಅಲ್ಲದೇ ಚಕ್ರವರ್ತಿಯನ್ನ ಮನೆಯಿಂದ ಆಚೆ ಹಾಕುವಂತೆ ಒತ್ತಾಯಗಳು ಹೆಚ್ಚಾಗಿದ್ದವು.. ಇದೀಗ ನಿರೀಕ್ಷೆಯಂತೆಯೇ ಕಿಚ್ಚ ಸುಉದೀಪ್ ಅವರು ವೀಕೆಂಡ್ ಸಂಚಿಕೆಯಲ್ಲಿ ಈ ಬಗ್ಗೆ ಚಕ್ರವರ್ತಿಯನ್ನ ಕಟುವಾಗಿ ಪ್ರಶ್ನೆಸಿ ಕೆಂಡಕಾರಿದ್ದಾರೆ.. ಬಿಗ್ ಬಾಸ್ ಮನೆಯಿಂದ ಪ್ರಿಯಾಂಕ ತಿಮ್ಮೇಶ್ ಅವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ಹೋಗುವಾಗ ಚಕ್ರವರ್ತಿ ಚಂದ್ರಚೂಡ್ ಅವರು ತೋರಿಸಿದ ಅಶ್ಲೀಲ ಸನ್ನೆಯ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಹ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಸಹ ಚಕ್ರವರ್ತಿಯವರ ಚಳಿ ಬಿಡಿಸಿದ್ದಾರೆ.
ಇದೀಗ ಬಿಗ್ ಬಾಸ್ ಫಿನಾಲೆಗೆ ದಿನಗಳು ಸಮೀಪಿಸುತ್ತಿದ್ದಂತೆ ಮನೆಯ ಸದಸ್ಯರ ನಡುವಿನ ಪೈಪೋಟಿಯೂ ಹೆಚ್ಚಾಗುತ್ತಿದೆ. ಈ ಮಧ್ಯೆ, ವಾರಾಂತ್ಯಕ್ಕೆ ಮುಗಿಯುತ್ತಿದ್ದ ಎಲಿಮಿನೇಶನ್ ಟೆನ್ಷನ್ ವಾರದ ದಿನಗಳಿಗೆ ಶಿಫ್ಟ್ ಆಗಿರುವುದು ಸ್ಪರ್ಧಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.. ನಾಮಿನೇಟ್ ಆಗಿರುವ ಶಮಂತ್, ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾ, ದಿವ್ಯಾ ಉರುಡುಗ ಮತ್ತು ಪ್ರಶಾಂತ್ ಸಂಬರಗಿಯವರ ಪೈಕಿ ಒಬ್ಬರು ಭಾನುವಾರ ಮನೆಯಿಂದ ಹೋಗಬೇಕಿತ್ತು. ಆದರೆ, ಈ ಬಾರಿ ಎಲಿಮಿನೇಶನ್‌ಗೆ ಟ್ವಿಸ್ಟ್ ಕೊಟ್ಟ ಸುದೀಪ್ ಇವತ್ತು ಯಾರೂ ಹೋಗುವುದಿಲ್ಲ. ಆದರೆ, ಮುಂದಿನ ಶನಿವಾರ ನಾನು ಇಲ್ಲಿಗೆ ಬರುವ ಹೊತ್ತಿಗೆ ಒಬ್ಬರು ಮನೆಯಲ್ಲಿ ಇರುವುದಿಲ್ಲ ಎನ್ನುವ ಮೂಲಕ ಟೆನ್ಷನ್ ಕೊಟ್ಟಿದ್ದಾರೆ.
ಈ ಮಧ್ಯೆ, ಮನೆಗೆ ಟೆಲಿಫೋನ್ ಬೂತ್ ಸಹ ಬಂದಿದ್ದು, ಆಗಾಗ್ಗೆ ರಿಂಗ್ ಮಾಡಿ ಸ್ಪರ್ಧಿಗಳಿಗೆ ಚಟುವಟಿಕೆ ನೀಡಿ, ಪರಸ್ಪರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಅಲ್ಲದೇ ಅಶ್ಲೀಲ ಸನ್ನೆ ತೋರಿಸಿ ಟ್ರೋಲ್ ಆಘ್ತಿರುವ ಭಯದಲ್ಲಿರುವ ಚಕ್ರವರ್ತಿ ಕ್ಯಾಮರಾ ಬಳಿಗೆ ಹೋಗಿ ಕ್ಷಮೆ ಕೇಳಿದ್ದಾರೆ. ನಾನು ಆ ರೀತಿಯ ವ್ಯಕ್ತಿಯಲ್ಲ. ಕೋಪದಲ್ಲಿ ಆ ರೀತಿ ತೋರಿಸಿದ್ದೇನೆ. ನನ್ನ ವರ್ತನೆಗೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಈಗಾಗಲೇ ವೀಕ್ಷಕರ ಮತಗಳ ಆಧಾರದ ಮೇಲೆ ಹೊರ ಹೋಗುವ ಸದಸ್ಯನ ನಿರ್ಧಾರವಾಗಿರುವ ಸಾಧ್ಯತೆ ಇದ್ದು, ಬಹುತೇಕ ಚಂದ್ರಚೂಡ್ ಮನೆಯಿಂದ ಹೊರಹೋಗುವ ಎಲ್ಲಾ ಲಕ್ಷಣಗಳು ಕಾಣ್ತಿವೆ..
ವಾರದ ಕತೆ ಕಿಚ್ಚ ಜೊತೆ ವೇಳೆ ಮಾತನಾಡುವಾಗ ಚಕ್ರವರ್ತಿಯವರ ಬೆರಳಿನ ವಿಚಾರದ ಕುರಿತು ಕಿಚ್ಚ ಪ್ರಶ್ನಿಸಿದ್ದರು. ಅಲ್ಲದೆ ಅದರ ಅರ್ಥ ಏನು ಎಂದು ಹೇಳುವವರೆಗೆ ಬಿಡುವುದಿಲ್ಲ ಎಂದಿದ್ದರು. ನಮ್ಮ ಕೈಯ್ಯಲ್ಲಿನ ಐದು ಬೆರಳುಗಳ ಮೂಲಕ ಸನ್ನೆ ಮಾಡಬಹುದು ಪ್ರತಿ ಬೆರಳಿನ ಸನ್ನೆಗೂ ಅರ್ಥವಿದೆ ಎಂದು ಹೇಳಿದ ಸುದೀಪ್, ನೀವು ಮಾಡಿದ ಸನ್ನೆಯ ಅರ್ಥವೇನು ಎಂದು ಚಕ್ರವರ್ತಿಯವರನ್ನು ಪ್ರಶ್ನಿಸಿದ್ದರು. ಇದಕ್ಕೆ ಆರಂಭದಲ್ಲಿ ಉತ್ತರಿಸಿದ ಚಕ್ರವರ್ತಿ ಚಂದ್ರಚೂಡ್, ಸಿಟ್ಟು ಬಂತು ಹೀಗಾಗಿ ತೋರಿಸಿಬಿಟ್ಟೆ ಎನ್ನುತ್ತಾರೆ. ಬಳಿಕ ಮತ್ತೊಮ್ಮೆ ಕೇಳಿದಾಗ ಐದು ಬೆರಳುಗಳು ಪಂಚಭೂತಗಳ ಸಂಕೇತ, ಮಧ್ಯದ ಬೆರಳು ಸಮತೋಲನದ ಸಂಕೇತ, ಕಷ್ಟ, ಸುಖ ಎಲ್ಲವನ್ನೂ ಸಮತೋಲನವಾಗಿ ಸವೀಕರಿಸಲಿ ಎಂದು ಪ್ರಿಯಾಂಕಾ ಅವರಿಗೆ ಆ ಬೆರಳು ತೋರಿಸಿದೆ ಎನ್ನುತ್ತಾರೆ. ತಕ್ಷಣವೇ ಸುದೀಪ್ ಕೋಪಗೊಳ್ಳುತ್ತಾರೆ, ಮತ್ತೆ ನಿಧಾನವಾಗಿ ಪ್ರಶ್ನಿಸಿ, ಸಮತೋಲನದ ಬೆರಳು ಆಗಿದ್ದರೆ, ಹೇಗೆ ಅಪರಾಧವಾಗುತ್ತದೆ ಎಂದು ಕೇಳುತ್ತಾರೆ.
KGF-2 ದಾಖಲೆ ಪೀಸ್ ಪೀಸ್ ಮಾಡಿದ RRR – ಲಹರಿಗೆ ಭಾರೀ ಮತ್ತೊಮ್ಮೆ ಆಡಿಯೋ ಹಕ್ಕು ಮಾರಾಟ..!
ಅದು ಅಪರಾಧವಾಗುತ್ತದೆ, ಆ ಸನ್ನೆ ಮಾಡುವುದು ಕಾನೂನಿನ ಪ್ರಕಾರ ಸಹ ತಪ್ಪು ಎನ್ನುತ್ತಾರೆ. ಆಗ ಚಕ್ರವರ್ತಿ ಹೌದು ಸರ್ ಕೆಟ್ಟ ಸನ್ನೆ ಎನ್ನುತ್ತಾರೆ. ಅದು ಕೆಟ್ಟ ಸನ್ನೆಯೇ, ಹೊರಗಡೆ ಈ ರೀತಿ ತೋರಿಸಿದರೆ ಜಗಳವಾಗುತ್ತದೆ. ಅದೂ ಒಂದು ಹುಡುಗಿಗೆ ಅದನ್ನು ನೀವು ತೋರಿಸುವುದು ನಾಟ್ ಒಕೆ ಸರ್ ಎಂದು ಸುದೀಪ್ ಹೇಳುತ್ತಾರೆ. ಆಗ ಎಸ್ ಸರ್ ಐ ಅಗ್ರೀ ಸರ್, ಆ ಕ್ಷಣ ಸಿಟ್ಟು ಬಂದು ಮಾಡಿದೆ. ಅಲ್ಲದೆ ಕನ್ನಡಿಯಲ್ಲಿ ಮತ್ತೆ ನೋಡಿಕೊಂಡಿದ್ದು, ಯಾವ ಮಟ್ಟಕ್ಕೆ ಕಾಣುತ್ತಿದೆ, ಏನೋ ಮಾಡಿಬಿಟ್ನಲ್ಲ ಎಂದು ನನಗೆ ನಾನೇ ನೋಡಿಕೊಂಡೆ ಎಂದು ಚಕ್ರವರ್ತಿ ಹೇಳುತ್ತಾರೆ. ಆಗ ಸುದೀಪ್ ನಿಮ್ಮ ಪ್ರಕಾರ ಯಾವ ಮಟ್ಟಕ್ಕೆ ಕಾಣಿಸಿರಬಹುದು ಎಂದು ಮರಳಿ ಕೇಳುತ್ತಾರೆ, ತುಂಬಾ ಕೆಟ್ಟದಾಗಿ ಕಾನೀಸುತ್ತದೆ ಎಂದು ಚಕ್ರವರ್ತಿ ಮತ್ತೆ ಹೇಳುತ್ತಾರೆ. ಮಧ್ಯ ಪ್ರವೇಶಿಸಿದ ಸುದೀಪ್, ಯಾವುದೇ ಸ್ಪರ್ಧಿಗಳಲ್ಲಿ ಯಾರೇ ಆಗಲಿ, ನಾನು ನನ್ನ ಮಾನ, ಮರ್ಯಾದೆ ಹರಾಜು ಹಾಕಿಕೊಳ್ಳುವುದಕ್ಕೆ ಮನೆಯೊಳಗೆ ಹೋಗಿದ್ದೇನೆ ಎಂದುಕೊಂಡರೆ ಯಾರೂ ತಡೆಯಲು ಆಗಲ್ಲ ಸರ್, ಕಾಪಾಡಬಹುದು, ನಡೆಯುತ್ತಿರುವುದನ್ನು ನಿಮ್ಮ ಬಳಿಗೆ ತಲುಪಿಸಬಹುದು. ಆದರೆ ಯಾರಿಗೂ ಏನೂ ಮಾಡಬೇಡಿ ಎಂದು ನಾವು ಹೇಳುವುದಿಲ್ಲ. ಕೆಲವು ಕಾನೂನಿನ ಚೌಕಟ್ಟು ಮೀರಿ ನಡೆದಾಗ ಹೊರಗಡೆ ಕಳುಹಿಸುತ್ತೇವೆ. ಅದನ್ನು ಬಿಟ್ಟರೆ ಎಲ್ಲವೂ ನಿಮಗೆ ಬಿಟ್ಟಿದ್ದು ಎಂದು ಸುದೀಪ್ ಹೇಳಿದ್ದಾರೆ.
ಅಲ್ಲದೆ ನೀವು ಹೆಣ್ಣುಮಕ್ಕಳಿಗೆ ಗೌರವ ಕೊಡುತ್ತೀರಿ ಎಂದು ಹೇಳುತ್ತೀರಿ, ಹೀಗಿರಬೇಕಾದರೆ ಯಾವ ರೇಂಜ್‍ಗೆ ಕೆಟ್ಟದಾಗಿ ಕಾಣಿಸಿರಬಹುದು ಯೋಚಿಸಿ. ಅವರ ತಾಯಂದಿರು, ಮನೆಯವರು ಕರೆ ಮಾಡಿ ಅವರು ತೋರಿಸಿದ್ದು ಯಾವ ಸನ್ನೆ ಎಂದು ಕೇಳಿದರೆ ಏನು ವಿವರಣೆ ಕೊಡುತ್ತೀರಿ. ಮಾತೆತ್ತಿದರೆ ಜನ ನೋಡುತ್ತಿದ್ದಾರೆ ಎನ್ನುತ್ತೀರಿ ಇದು ಅರ್ಥವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ 8 ಸೀಸನ್‍ನಲ್ಲಿ 160 ಜನ ಬಿಗ್ ಬಾಸ್ ಮನೆಗೆ ಹೋಗಿರಬಹುದು. ಮುಂದಿನ 10 ವರ್ಷಗಳಲ್ಲಿ ಇನ್ನೂ 160 ಜನ ಅಂದುಕೊಂಡರೂ ಅಂದಾಜು 300 ಜನರಿಗೆ ಸೀಮಿತವಾದ ಅದ್ಭುತ ವೇದಿಕೆ ಇದು. ಹೊರಗಡೆ ಲಕ್ಷಾಂತರ ಜನ ಬಿಗ್ ಬಾಸ್ ಮನೆ ಒಳಗೆ ಹೋಗಲು ಕಾಯುತ್ತಿದ್ದಾರೆ. ಇಷ್ಟು ಪವರ್‍ಫುಲ್ ಆಗಿರುವ ವೇದಿಕೆಯಲ್ಲಿ ನೀವು ನಡೆದುಕೊಳ್ಳಬೇಕಾದ ರೀತಿ ಸಹ ಮುಖ್ಯ ಆಗುತ್ತೆ. ಇದರಲ್ಲಿ ನೀವು ಫೇಲ್ ಆಗಿದ್ದೀರಿ ಎಂದು ನನಗನ್ನಿಸುತ್ತಿದೆ. ಮೊದಲು ತಪ್ಪು ಮಾಡಿದಾಗ ಇನ್ನೊಮ್ಮೆ ಈ ರೀತಿ ಮಾಡುವುದಿಲ್ಲ ಎಂದಿರಿ ಇದನ್ನು ನೀವು ಉಳಿಸಿಕೊಂಡಿರಾ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಅದರಲ್ಲೂ ಈ ಬಾರಿ ನನಗೆ ತುಂಬಾ ನೋವಾಯಿತು. ನಮ್ಮ ಮನೆಯಲ್ಲಿ ತಂಗಿ, ಹೆಂಡತಿ, ತಾಯಿ ಅಕ್ಕ ಇರುತ್ತಾರೆ ಯಾವನೋ ಒಬ್ಬ ನಮ್ಮ ಮನೆಯ ಹೆಣ್ಣುಮಕ್ಕಳಿಗೆ ಆ ರೀತಿ ತೋರಿಸಿದಾಗ ನಾವು ಏನು ಮಾಡಬಹುದು. ಸಿಟ್ಟು ಬರುತ್ತೆ, ನಾವು ಶಕ್ತಿ ಇಲ್ಲದಿದ್ದರೂ ಅವರ ಕೆನ್ನೆಗೆ ಹೊಡೆಯುತ್ತೇವೆ ಎಂದು ಚಕ್ರವರ್ತಿ ಉತ್ತರಿಸುತ್ತಾರೆ. ಹಾಗೇ ಅವರು ನಮ್ಮ ಬಿಗ್ ಬಾಸ್ ಫ್ಯಾಮಿಲಿಗೆ ಸೇರಿದ್ದಾರೆ, ಕೋಟ್ಯಂತರ ಜನ ನೋಡುತ್ತಿದ್ದಾರೆ. ಏನು ಅಭಿಪ್ರಾಯ ಕೊಟ್ಟಿರಿ ಎಂದು ಸುದೀಪ್ ಕೇಳಿದ್ದಾರೆ. ಅಲ್ಲದೆ ಮಾತನಾಡಿದಾಗ ಬೀಪ್ ಮಾಡಿ ಪ್ರಸಾರ ಮಾಡಬಹುದು. ಆದರೆ ಬೆರಳು ಮಾಡಿದಾಗ ಬ್ಲರ್ ಮಾಡಬೇಕಾಗುತ್ತದೆ. ಅದು ಇನ್ನೂ ಅಸಹ್ಯವಾಗಿ ಕಾಣುತ್ತದೆ ಈ ರೀತಿ ಮಾಡಬೇಡಿ. ನಿಮ್ಮ ಗೌರವ ಕಾಪಾಡುವುದು. ಹೆಣ್ಣುಮಗಳ ಬಗ್ಗೆ ಮಾತನಾಡಿದ್ದಕ್ಕೆ ಪ್ರಶ್ನಿಸುವುದು ನನ್ನ ಜವಾಬ್ದಾರಿ. ನಾನು ಈ ವೇದಿಕೆ ಮೇಲಿರುವುದು ನಿಮಗೋಸ್ಕರ ಅದನ್ನು ನೀವು ಮರೆಯಬೇಡಿ ಎಂದು ಹೇಳಿದ್ದಾರೆ.
ಕುಂದ್ರಾ ನಿರ್ಮಿಸಿದ್ದು `ಪೋರ್ನ್ ಚಿತ್ರವಲ್ಲ, ಸಾಫ್ಟ್ ಪೋರ್ನ್’
ಬಳಿಕ ಈ ಬಗ್ಗೆ ಸ್ಪರ್ಧಿಗಳ ಬಳಿ ಮಾತನಾಡಿರೋ ಚಕ್ರವರ್ತಿ ಪ್ರತಿ ವಾರ ನನ್ನನ್ನೇ ಬೈತಾರೆ, ನಾನೇ ಟಾರ್ಗೆಟ್ ಆಗುತ್ತಿದ್ದೇನೆ ಅನ್ನಿಸುತ್ತಿದೆ ಎಂದು ಹೇಳಿಕೊಳ್ತಾರೆ. ಅಲ್ಲದೆ ನಾನೊಬ್ಬ ಸ್ತ್ರೀ ವಿರೋಧಿ, ಸ್ತ್ರೀ ಪೀಡಕನ ರೀತಿ ಬಿಂಬಿಸುತ್ತಿದ್ದಾರೆ ಎಂದು ನನಗೆ ಅನ್ನಿಸುತ್ತದೆ ಎಂದು ಪ್ರಶಾಂತ್ ಬಳಿ ಚಕ್ರವರ್ತಿ ಮತ್ತೆ ಹೇಳಿಕೊಳ್ಳುತ್ತಾರೆ. ಬಳಿಕ ಇದನ್ನು ಸುದೀಪ್ ಅವರ ಬಳಿಯೂ ಹೇಳುತ್ತಾರೆ. ಪ್ರತಿ ವಾರ ನನ್ನನ್ನು ಸ್ತ್ರೀ ನಿಂದಕ, ಸ್ತ್ರೀ ಪೀಡಕನನ್ನಾಗಿ ಮಾಡಿದ್ದೀರಿ. ನಿಮ್ಮ ಬಾಯಲ್ಲಿ ಇಷ್ಟು ವಾರ ನಾನೊಬ್ಬ ಕ್ರಿಮಿನಲ್ ಆಗಿದ್ದೇನೆ ಎಂದು ಚಕ್ರವರ್ತಿ ಹೇಳಿದ್ದಾರೆ. ಆಗ ನೀವು ಮಾಡಿದ್ದನ್ನೇ ನನ್ನ ಬಾಯಲ್ಲಿ ಹೇಳಿದ್ದೇನೆ. ನಿಮ್ಮನ್ನು ಹೊಗಳಿಯೂ ಇದ್ದೇನೆ, ನಿಮ್ಮ ಬುದ್ಧಿ, ಬರವಣಿಗೆಗೆ ಅಭಿಮಾನಿ ಎಂದು ಸಹ ಹೊಗಳಿದ್ದೇನೆ ಎಂದು ಸುದೀಪ್ ಹೇಳಿದ್ದರು.