BIGGBOSS 8 : ದಿವ್ಯಾ ಉರುಡುಗ ಆಸೆ ಈಡೇರಿಸಿದ ಕಿಚ್ಚ ಸುದೀಪ್ – ವಿಶೇಷ ಗಿಫ್ಟ್
ಬಿಗ್ ಬಾಸ್ ಫೈನಲ್ ಹತ್ರವಾಗ್ತಿದೆ.. ಗ್ರ‍್ಯಾಂಡ್ ಫಿನಾಲೆಗೆ ಅಬ್ಬಬ್ಬಾ ಅಂದ್ರೂ ಈ ವಾರ ಬಾಕಿ ಇದೆ.. ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ರ‍್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ರ‍್ಪ್ರೈಸ್ ನೀಡ್ತಿದೆ.
ಇನ್ನೇನು ಈ ವಾರ ಮುಗಿಯುತ್ತಿದದ್ದಂತೆ ಗ್ರ‍್ಯಾಂಡ್ ಫಿನಾಲೆ ಫಿನಾಲೆ ಇರೋದ್ರಿಂದ ಸ್ಪರ್ಧಿಗಳಿಗೆ ಸಾಕಷ್ಟು ವಿಶೇಷ ಗಿಫ್ಟ್ ಗಳನ್ನ ನೀಡುತ್ತಾ ಅವರನ್ನ ಖುಷಿ ಪಡಿಸಲಾಗ್ತಿದೆ.. ಅದ್ರಂತೆ ಕಿಚ್ಚ ಸುದೀಪ್ ಅವರು ದಿವ್ಯಾ ಉರುಡುಗ ಕೇಳಿಕೊಂಡಿದ್ದ ಆಸೆಯನ್ನ ಕಿಚ್ಚ ಸುದೀಪ್ ಈಡೇರಿಸಿದ್ದಾರೆ.. ಹೌದು.. ದಿವ್ಯಾ ಉರುಡುಗ ಕೇಳಿದ್ದ ವಿಶೇಷ ಆಸೆಯನ್ನು ಈಡೇರಿಸಿದ್ದು, ಮನೆ ಮಂದಿ ಸಂಭ್ರಮಿಸಿದ್ದಾರೆ.
ಇಲ್ಲಿವರೆಗೂ ಈಡೇರದ ಆಸೆಯನ್ನು ಮನೆಯವರು ಬಿಗ್ಬಾಸಸ್ ಮನೆಯಲ್ಲಿ ಇಟ್ಟಿರುವ ಕಿವಿ ಆಕೃತಿಯ ಮುಂದೆ ಹೇಳಿಕೊಳ್ಳಿ, ಇಡೇರಿಸಲು ಸಾಧ್ಯವಾರೆ ಖಂಡಿತ ಬಿಗ್ಬಾಇಸ್ ಈಡೇರಿಸುತ್ತಾರೆ ಎಂದು ಸೂಚನೆಯನ್ನು ನೀಡಲಾಗಿತ್ತು. ಸ್ರ‍್ಧಿಗಳು ಮಾತ್ರ ವಿಭಿನ್ನವಾದ ಕೋರಿಕೆಯನ್ನು ಇಟ್ಟಿದ್ದರು. ದಿವ್ಯಾ ಉರುಡುಗ , ಸುದೀಪ್ ಸರ್ ಮಾಡಿರುವ ಅಡುಗೆಯನ್ನು ನಾವೆಲ್ಲ ಸವಿಯಬೇಕು ಎಂದು ಬೇಡಿಕೆ ಇಟ್ಟಿದ್ದರು.
ಬಿಗ್ ಬಾಸ್ ಮಂದಿ ಹಸಿವಿನಿಂದ ಕುಳಿತಿದ್ದರು. ಆಗ ಸುದೀಪ್ ಅವರು ವಾಯ್ಸ್ ಕೇಳಿಸುತ್ತದೆ ನಾನು ನೀವು ಇಷ್ಟಪಟ್ಟಂತೆ ಅಡುಗೆ ಮಾಡಿಕಳುಹಿಸಿದ್ದೇನೆ ಎಂದು ಸುದೀಪ್ ಹೇಳಿದ್ದಾರೆ. ಮನೆಮಂದಿ ಸುದೀಪ್ ಅವರ ವಿಶೇಷ ಗಿಫ್ಟ್ ನೋಡಿ ಸಖತ್ ಖುಷಿಯಾಗಿದ್ದಾರೆ.
ಆಗ ದಿವ್ಯಾ ಅವರು ಇದೇ ನನ್ನ ವಿಶ್ ಆಗಿತ್ತು ಎಂದು ಜೋರಾಗಿ ಕೂಗಿದ್ದಾರೆ. ಊಟದ ಜೊತೆಗೆ ಒಂದು ಲೇಟರ್ ಅನ್ನು ದಿವ್ಯಾಗೆ ಕಳುಹಿಸಿದ್ದಾರೆ. ಡಿಯು ಅವರೇ ಕೇಳಿದ್ರಿ ನೀವು ಊಟ, ಪ್ರೀತಿಯಿಂದ ತಿನ್ನುತ್ತ ಬಿಡಿ ಅರವಿಂದ್ ಮೇಲಿನ ನೋಟ ಎಂದು ಬರೆದು ಕಳುಹಿಸಿದ್ದಾರೆ. ಮನೆ ಮಂದಿ ಸುದೀಪ್ ಅವರ ಈ ವಿಶೇಷ ಗಿಫ್ಟ್ ನೋಡಿ ಕುಣಿದು ಕುಪ್ಪಳಿಸಿದ್ದಾರೆ.
ಅಂದ್ಹಾಗೆ ಈ ಹಿಂದೆ ಕೊರೊನಾ ಸಮಯದಲ್ಲಿ ಸುದೀಪ್ ಅವರ ಆರೋಗ್ಯದಲ್ಲಿ ಏರುಪೇರಾದಾಗ , ಒಟ್ಟಾಗಿ ಸೇರಿ ಅಡುಗೆ ತಯಾರಿಸಿ ಸುದೀಪ್ ಅವರಿಗೆ ಕಳುಹಿಸಿಕೊಟ್ಟಿದ್ದರು. ಇದೀಗ ಮನೆಂದಿಗೆ ಪ್ರೀತಿಯಿಂದ ಸುದೀಪ್ ಅವರು ಊಟವನ್ನು ಕಳುಹಿಸಿದ್ದಾರೆ.
https://www.instagram.com/p/CSG04hgHn99/?utm_source=ig_web_copy_link








