BIGGBOSS 8 : ಗ್ರ್ಯಾಂಡ್ ಫಿನಾಲೆಗೆ ವಾರ ಇರುವಾಗ್ಲೇ ಮನೆಯಿಂದ ಹೊರನಡೆದ ಶುಭಾ..!
ಇನ್ನೂ ಫೈನಲ್ ಹತ್ರವಾಗ್ತಿದೆ.. ಗ್ರ್ಯಾಂಡ್ ಫಿನಾಲೆಗೆ ಅಬ್ಬಬ್ಬಾ ಅಂದ್ರೂ ಇನ್ನೊಂದು ವಾರ ಬಾಕಿ ಇದೆ.. ಫೈನಲ್ಸ್ ಹತ್ರ ಆಗ್ತಿದ್ದಂತೆ ಸ್ಪರ್ಧಿಗಳಲ್ಲಿ ಟೆನ್ಷನ್ ಕೂಡ ಹೆಚ್ಚಾಗಿದೆ.. ಇನ್ನೂ ಆರಂಭದಿಂದಲೂ ಒಬ್ಬಬ್ಬರೂ ಒಂದೊಂದು ರೀತಿಯಾದ ವ್ಯಕ್ತಿತ್ವಗಳಿಂದ ಗುರುತಿಸಿಕೊಂಡಿದ್ದಾರೆ. ಕೆಲವರು ಒಳಗೊಂದು ಹೊರಗೊಂದು ಅನ್ನೋ ರೀತಿ ಇದ್ರೆ , ಇನ್ನೂ ಕೆಲವರು ನೇರ ನಡೆನುಡಿಯಿಂದ ಗುರುತಿಸಿಕೊಂಡಿದ್ದಾರೆ.. ಇನ್ನೂ ಫೈನಲ್ಸ್ ಹತ್ರ ಆಗ್ತಿದ್ದಂತೆ ಬಿಗ್ ಬಾಸ್ ಹೊಸ ಹೊಸ ಟ್ವಿಸ್ಟ್ ಗಳನ್ನ ಕೊಡುತ್ತಾ , ಸರ್ಪ್ರೈಸ್ ನೀಡ್ತಿದೆ. ಕೆಲವರಿಗೆ ದೊಡ್ಡ ಶಾಕ್ ಕೊಟ್ಟಿದೆ..
ಆರಂಭದಿಂದಲೂ ಬಬ್ಲಿಬಬ್ಲಿಯಾಗಿ ನಗುತ್ತಲೇ , ನಗಿಸುತ್ತಲೇ ಎಲ್ಲರ ಜೊತೆ ಬೆರೆಯುತ್ತಿದ್ದ ಶುಭಾ ಪೂಂಜಾ ಅವರು ಈ ವಾರ ಮನೆಯಿಂದ ಹೊರ ನಡೆದಿದ್ದಾರೆ. ಹೌದು ವಾರದ ಕಥೆ ಕಿಚ್ಚ ಜೊತೆ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ಶುಭಾ ಅವರು ಎಲಿಮಿನೇಟ್ ಆಗಿರೋದಾಗಿ ಘೋಷಿಸಿದ್ದಾರೆ.. ಬಳಿಕ ಶುಭಾ ಪೂಂಜಾ ಅವರು ಮನೆಯಿಂದ ಹೊರ ನಡೆದಿದ್ದಾರೆ. ಟಾಸ್ಕ್ ಗಳಲ್ಲಿ ಹೆಚ್ಚೇನು ಭಾಗವಹಿಸದಿದ್ದರೂ, ಮೆನಯವರೊಂದಿಗೆ ಬೆರೆತು ಚೆನ್ನಾಗಿ ಮಾತನಾಡಿಕೊಂಡಿದ್ದರು. ಇದೀಗ ಫಿನಾಲೆಗೆ ಇನ್ನೊಂದು ವಾರ ಇರುವಾಗಲೇ ಔಟ್ ಆಗಿದ್ದಾರೆ.
ಆಗಸ್ಟ್ 8ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದ್ದು, ಐವರು ಸ್ಪರ್ಧಿಗಳು ಮಾತ್ರ ಗ್ರ್ಯಾಂಡ್ ಫಿನಾಲೆ ತಲುಪಲಿದ್ದಾರೆ. ಇದಕ್ಕೂ ಮುನ್ನ ಮೂವರು ಸ್ಪರ್ಧಿಗಳನ್ನು ಎಲಿಮಿನೇಟ್ ಮಾಡಬೇಕು. ಹೀಗಾಗಿ ಈ ವಾರ ಶನಿವಾರವೇ ಎಲಿಮಿನೇಶನ್ ನಡೆದಿದೆ. ಮುಂದಿನ ವಾರ ಮಧ್ಯದಲ್ಲಿ ಸಹ ಮತ್ತೊಂದು ಎಲಿಮಿನೇಶ್ ನಡೆಯಲಿದೆ. ಶುಭಾ ಅವರು ಮನೆಯಿಂದ ಹೊರ ಹೋಗುತ್ತಿರುವುದಕ್ಕೆ ಮನೆ ಮಂದಿಯಲ್ಲಿ ಭೇಸರ ಮೂಡಿದ್ದು, ಮಂಜು ಪಾವಗಡ, ದಿವ್ಯಾ ಉರುಡುಗ, ವೈಷ್ಣವಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ವಾರದ ಮಧ್ಯದಲ್ಲಿ ಮತ್ತೊಬ್ಬ ಸದಸ್ಯರು ವಿದಾಯ ಹೇಳಲಿದ್ದಾರೆ.. ಆದ್ರೆ ತಮ್ಮ ಜರ್ನಿ ಮುಗಿಸೋ ಆ ಸ್ಪರ್ಧಿಯಾರಾಗಬಹುದು ಎಂಬ ಕುತೂಹಲ ಎಲ್ರನ್ನೂ ಕಾಡ್ತಿದೆ. ಇನ್ನೂ ಹೊರಗಡೆ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಪ್ರಕಾರ ಅರವಿಂದ್ ಹಾಗೂ ಮಂಜು ಪಾವಗಡ ಫೈನಲ್ ಪ್ರವೇಶ ಮಾಡೋದಂತು ಪಕ್ಕಾ ಇಬ್ಬರಲ್ಲಿ ಒಬ್ಬರು ವಿನ್ನರ್ ಆಗುವುದು ಕೂಡ ಪಕ್ಕಾ ಎನ್ನಲಾಗ್ತಿದೆ.