BIGGBOSS 8 : 2ನೇ ಬಾರಿಗೆ ಕ್ಯಾಪ್ಟನ್ ಆದ ದಿವ್ಯಾ ಉರುಡುಗ – ಬಿಗ್ ಬಾಸ್ ನಿಂದ ಭರ್ಜರಿ ಗಿಫ್ಟ್..!
ಕೊರೊನಾ ಲಾಕ್ ಡೌನ್ ಮುಗಿದು ಬಿಗ್ ಬಾಸ್ ಸೀಸನ್ 8 ರ 2ಬನೇ ಇನ್ನಿಂಗ್ ಆರಂಭವಾದ ನಂತರದಿಂದ ರಘು ,ನಿಧಿ ಸುಬ್ಬಯ್ಯ , ಪ್ರಿಯಾಂಕಾ ತಿಮ್ಮೇಶ್ ಹೀಗೆ ಎಲಿಮಿನೇಟ್ ಆಗುತ್ತಾ ಹೋಗಿದ್ದು, ಸ್ಪರ್ಧಿಗಳ ಸಂಖ್ಯೆ ಕಡಿಮೆಯಾಗ್ತಿದೆ.. ಆದ್ರೆ ಕಾಂಪಿಟೇಶನ್ ಹೆಚ್ಚಾಗ್ತಿದೆ.. ಫಿನಾಲೆ ಸಮೀಪಿಸುತ್ತಿದೆ.. ಈ ನಡುವೆ ಕಾಂಪಿಟೇಶನ್ ಟಫ್ ಆಗ್ತಾ ಹೋಗ್ತಿದೆ.. ಗೆಲ್ಲಲೇ ಬೇಕೆನ್ನುವ ಹಟ ಎಲ್ರಲ್ಲೂ ಇದೆ.. ಇದರ ನಡುವೆ 2ನೇ ಇನ್ನಿಂಗ್ ಕಲವರಲ್ಲಿ ಕೆಲ ಬದಲಾವಣೆಗಳು ಕಂಡುಬಂದಿವೆ.
ಇದೀಗ ಮತ್ತೆ ದಿವ್ಯಾ ಉರುಡುಗ ದೊಡ್ಮನೆಯಲ್ಲಿ 2ನೇ ಬಾರಿಗೆ ಕ್ಯಾಪ್ಟನ್ ಆಗಿದ್ದು, ಬಿಗ್ ಬಾಸ್ ಕಡೆಯಿಂದ ಭರ್ಜರಿ ಉಡುಗೊರೆ ಪಡೆದುಕೊಂಡಿದ್ದಾರೆ.ಮುಂದಿನ ವಾರಕ್ಕೆ ಯಾರು ಕ್ಯಾಪ್ಟನ್ ಆಗುತ್ತಾರೋ, ಅವರು ನಾಮಿನೇಷನ್‍ನಿಂದ ಹೊರಗೆ ಉಳಿಯುತ್ತಾರೆ. ಗ್ರ್ಯಾಂಡ್ ಫಿನಾಲೆಗೆ ಹತ್ತಿರ ಇರುವಾಗ ನಾಮಿನೇಷನ್‍ನಿಂದ ದೂರ ಇರುವುದು ಬಹಳ ಒಳ್ಳೆಯ ನಡೆ. ಸದ್ಯ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಅತ್ಯುತ್ತಮವಾಗಿ ಆಟ ಆಡಿ, ದಿವ್ಯಾ ಉರುಡುಗ ಮುಂದಿನ ವಾರಕ್ಕೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಶಮಂತ್, ವೈಷ್ಣವಿ, ಮಂಜು ಪಾವಗಡ, ಅರವಿಂದ್ ಮತ್ತು ದಿವ್ಯಾ ಉರುಡುಗ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗವಹಿಸಿದ್ದರು. ಅಂತಿಮವಾಗಿ ದಿವ್ಯಾಗೆ ಗೆದ್ದು ಬೀಗಿದ್ದಾರೆ. ಅವರೀಗ ಕ್ಯಾಪ್ಟನ್ ಆಗಿರುವುದರಿಂದ ನಾಮಿನೇಷನ್‍ನಿಂದ ಬಚಾವ್ ಆಗಿದ್ದಾರೆ. ಹೀಗಾಗಿ ಫಿನಾಲೆಯ ಟಾಪ್ 5 ಸ್ಪರ್ಧಿಗಳಲ್ಲಿ ದಿವ್ಯಾ ಇರುವ ಚಾನ್ಸಸ್ ಹೆಚ್ಚಿದೆ..
BIGGBOSS 8 : ಶುಭಾಗೆ ಶಾಕ್ – ನೇರವಾಗಿ ನಾಮಿನೇಟ್..!
ಅಲ್ಲದೇ ಈ ವಾರ ಅತ್ಯುತ್ತಮ ಪಟ್ಟ ಯಾರಿಗೆ ನೀಡಬೇಕು ಎಂಬ ಚರ್ಚೆಯೂ ನಡೆಯಿತು. ಬಹುತೇಕರ ಉತ್ತರ ದಿವ್ಯಾ ಉರುಡುಗ ಆಗಿತ್ತು. ಕಾರಣ, ಕಳೆದ ವಾರ ದಿವ್ಯಾ ಕೈಗೆ ಗಾಯವಾಗಿತ್ತು. ಬ್ಯಾಂಡೇಜ್ ಸುತ್ತಿಕೊಂಡೇ, ಈ ವಾರ ಪೂರ್ತಿ ಅವರು ಟಾಸ್ಕ್‍ಗಳನ್ನು ಆಡಿದರು. ಯಾವುದೇ ಕಾರಣಕ್ಕೂ ತಮ್ಮ ಕೈಯಲ್ಲಿ ಆಗುವುದಿಲ್ಲ ಎಂಬ ನೆಪ ಹೇಳದೇ, ಎಲ್ಲ ಟಾಸ್ಕ್‌ಗಳನ್ನು ಆಡಿದರು. ಈ ಅಂಶವನ್ನು ಗಮನಿಸಿದ ಮನೆಯ ಕೆಲವು ಸದಸ್ಯರು ದಿವ್ಯಾಗೆ ವೋಟ್ ಮಾಡಿದರು. ಒಂದೇ ದಿನ ಕ್ಯಾಪ್ಟನ್ ಪಟ್ಟ ಮತ್ತು ಅತ್ಯುತ್ತಮ ಪಟ್ಟ ದಿವ್ಯಾ ಉರುಡುಗಗೆ ಸಿಕ್ಕಿತು. ಬಿಗ್‍ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದ ಮಹಿಳಾ ಅಭ್ಯರ್ಥಿ ದಿವ್ಯಾ ಉರುಡುಗ. ಅವರ ನಂತರ 2ನೇ ಮಹಿಳಾ ಕ್ಯಾಪ್ಟನ್ ಆಗಿದ್ದು, ದಿವ್ಯಾ ಸುರೇಶ್. ಇದೀಗ ಗ್ರ್ಯಾಂಡ್ ಫಿನಾಲೆ ಸಮೀಪದಲ್ಲಿರುವಾಗಲೇ ಮತ್ತೊಮ್ಮೆ ದಿವ್ಯಾ ಉರುಡುಗ ಮತ್ತೊಮ್ಮೆ ಕ್ಯಾಪ್ಟನ್ ಪಟ್ಟ ಗಳಿಸಿಕೊಂಡಿದ್ದಾರೆ.