BIGGBOSS 8 – ‘ ಒಂದು ಹುಡುಗಿಗಾಗಿ ಮಂಜು ತನ್ನ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ’…. ‘ಅರವಿಂದ್ ಒಳ್ಳೆ ಹುಡುಗ’…!
ಬಿಗ್ ಬಾಸ್ ಮನೆಯಲ್ಲಿ ಆಗಾಗ ಸ್ಪರ್ಧಿಗಳು ಬೇರೆ ಸ್ಪರ್ಧಿಗಳ ಬಗ್ಗೆ ಮಾತನಾಡಿಕೊಳ್ಳೋದು ಕಾಮನ್.. ಅದೇ ರೀತಿ ಪ್ರಸಾಂತ್ ಸಂಬರಗಿ ಹಾಗೂ ಚಂದ್ರಚೂಡ್ ಚಕ್ರವರ್ತಿ ಒಂದೆಡೆ ಕುಳಿತು ಮನೆಯ ಸದಸ್ಯರುಗಳ ಬಗ್ಗೆ ಮಾತನಾಡಿದ್ದಾರೆ. ಆದ್ರೆ ಗಮನಾರ್ಹ ಅಂದ್ರೆ ಅರವಿಂದ್ ದಿವ್ಯಾ ಉರುಡುಗ ಹಾಗೂ ಮಂಜು ದಿವ್ಯಾ ಸುರೇಶ್ ಬಗ್ಗೆ ಅವರ ನಿಲು..
ಹೌದು ಮೊದಲಿಗೆ ಅರವಿಂದ್ ಬಗ್ಗೆ ಮಾತನಾಡಿರುವ ಚಕ್ರವರ್ತಿ ಹುಡ್ಗ-ಹುಡ್ಗಿ ಜೋಡಿಯಾಗಿದ್ರೆ ಒಂದು ರೀತಿಯ ಪ್ಯಾಂಪರಿಂಗ್ ಇರುತ್ತೆ, ಹುರುಪಿನಿಂದ ಟಾಸ್ಟ್ ಮಾಡುತ್ತಾರೆ. ಆದರೆ ನಮಗೆ ಪೇರ್ ಇಲ್ಲದಕ್ಕೆ ಹೀಗೆ ಆಗುತ್ತಿದೆ. ಈಗ ದಿವ್ಯಾ ಇಲ್ಲದ್ದಕ್ಕೆ ಅರವಿಂದ್ ಎನರ್ಜಿ ಕುಸಿಯುತ್ತಿದೆ. ವೈಷ್ಣವಿ ಹಾಗೂ ಅರವಿಂದ್ಗೂ ಪೇರ್ ಆಗಲ್ಲ. ಈಗ ದಿವ್ಯಾ ಬಂದ್ರೆ ಅರವಿಂದ್ ಸರಿ ಹೋಗಬಹುದು. ಆದರೆ ಅರವಿಂದ್ ತುಂಬಾ ಒಳ್ಳೆ ಹುಡುಗ ಗುರು, ನನಗೆ ಒಬ್ಬಬ್ಬರ ಬಗ್ಗೆ ಹೇಳಿ ಎಂದು ಕೇಳಿದರೆ, ಸರಿಯಾಗಿ ಹೇಳುತ್ತೇನೆ. ಇವರೆಗೆಲ್ಲ ಹೆದರುವುದಿಲ್ಲ ಎಂದು ಮಾತನಾಡಿದ್ದಾರೆ.
ಇದೇ ವೇಳೆ ದಿವ್ಯಾ ಜೊತೆ ಹೆಚ್ಚಿದ್ರೂ ಎಲ್ಲರ ಜೊತೆ ಬೆರೀತಾನೆ, ಅರವಿಂದ್ ಒಳ್ಳೆ ಹುಡ್ಗ ಗುರು. ಅರವಿಂದ್ ದಿವ್ಯಾ ಉರುಡುಗ ಜೊತೆ ಎಷ್ಟೇ ಇದ್ದರೂ ಎಲ್ಲರನ್ನೂ ಸಂಭಾಳಿಸುತ್ತಾನೆ, ಮಾತನಾಡಿಸುತ್ತಾನೆ, ನಮಗೂ ಟೈಮ್ ಕೊಡುತ್ತಾನೆ. ದಿವ್ಯಾ ಉರುಡುಗ ಬಂದ್ರೆ ಅರವಿಂದ್ ಸರಿ ಹೋಗಬಹುದು ಎಂದು ಚಕ್ರವರ್ತಿ ಚಂದ್ರಚೂಡ್ ಹೇಳಿಕೊಂಡಿದ್ದಾರೆ.
ಬಳಿಕ ಮಂಜು ಪಾವಗಡ ಬಗ್ಗೆ ಮಾತನಾಡಿದ ಚಕ್ರವರ್ತಿ ಮನೆಯ ಎಂಟರ್ಟೈನರ್, ವಿದೂಷಕ ಎನ್ನುವುದು ತಿಳಿದ ವಿಚಾರ. ಆದರೆ ಮಂಜು ತಮ್ಮ ಹಾಸ್ಯ ಪ್ರಜ್ಞೆ ಬಗ್ಗೆ ಮೈಮರೆತಿದ್ದಾರೆ. ಹೀಗಾಗಿ ಮನೆಯಲ್ಲಿ ಗುಸುಗುಸು ಶುರುವಾಗಿದ್ದು, ಒಂದು ಹುಡುಗಿಗಾಗಿ ಎನರ್ಜಿ ಹಾಳು ಮಾಡಿಕೊಳ್ಳುತ್ತಿದ್ದಾನೆ, ಗೆಲ್ಲುವ ಅವಕಾಶ ಕಳೆದುಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ. ಅಲ್ಲದೇ ದಿವ್ಯಾ ಸುರೇಶ್ ಹೋದರೆ ಮಂಜು ಕಥೆ ಅಷ್ಟೇ ಎಂದು ಹೇಳಿದ್ದಾರೆ. ಆದ್ರೆ ಈ ಬಗ್ಗೆ ಮಾತನಾಡಿದ ಸಂಬರಗಿ ದಿವ್ಯಾ ಹೋದರೆ ಮತ್ತೊಬ್ಬರನ್ನು ಜೊತೆ ಮಾಡಿಕೊಳ್ಳುತ್ತಾನೆ ಎಂದಿದ್ದಾರೆ.
ಇನ್ನೂ ಈ ಹಿಂದೆ ಕಿಚ್ಚ ಸುದೀಪ್ ಸಹ ಮಂಜುಗೆ ಇದೇ ಮಾತನ್ನೆ ನೇರವಾಗಿ ಹೇಳಿದ್ದರು. ನೀವು ಒಬ್ಬ ಎಂಟರ್ಟೈನರ್, ಹಾಸ್ಯ ಕಲಾವಿದರು ಎನ್ನುವುದನ್ನೇ ಮರೆಯುತ್ತಿದ್ದೀರಿ ಎಂದು ಎಚ್ಚರಿಸಿದ್ದರು.








