BIGGBOSS 8 – ಇದೇ ಮೊದಲ ಬಾರಿಗೆ ರಾಜೀವ್ ಪ್ರತಿಕ್ರಿಯೆ – ಕಾರಣ ಏನು ಗೊತ್ತಾ..?
ಬಿಗ್ ಬಾಸ್ ಮನೆಯಿಂದ ರಾಜೀವ್ ಹೊರಹೋಗುತ್ತಾರೆ ಎಂದು ಯಾರೂ ಸಹ ನಿರೀಕ್ಷೆಯೇ ಮಾಡಿರಲಿಲ್ಲ.. ಇನ್ ಫ್ಯಾಕ್ಟ್ ಅವರೇ ಈ ಸೀಸನ್ ನ ವಿನ್ನರ್ ಆಗಬಹುದು ಎಂದು ಲೆಕ್ಕಾಚಾರಗಳು ಇತ್ತು. ಟಾಸ್ಕ್ ನಲ್ಲಿಯೂ ರಾಜೀವ್ ಅವರು ಅಷ್ಟೇ ಉತ್ತಮವಾಗಿ ಪ್ರದರ್ಶನ ನೀಡ್ತಿದ್ದರು. ಆದ್ರೆ ಅವರು ಬಿಗ್ ಬಾಸ್ ಮನೆಯಿಂದ 8ನೇ ವಾರ ಮನೆಯಿಂದ ಆಚೆ ಬಂದಿದ್ದರು..
ಆದ್ರೆ ಮನೆಯಿಂದ ಹೊರಬಂದ ಬಳಿಕ ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.. ಈ ಬಗ್ಗೆ ಪ್ರತಿಕ್ರಿಯೆಯನ್ನೂ ನೀಡಿರಲಿಲ್ಲ. ಇದೀಗ ಮೊದಲ ಬಾರಿಗೆ ರಾಜೀವ್ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್‍ಬಾಸ್‍ನಿಂದ ಆಚೆ ಬಂದಾಗ ಇಷ್ಟು ಬೇಸರವಾಗಿರಲಿಲ್ಲ. ಬಿಗ್‍ಬಾಸ್ ಅರ್ಧಕ್ಕೆ ನಿಂತು ಹೋಗುತ್ತಿರುವುದಕ್ಕೆ ಬೇಸರವಾಗುತ್ತಿದೆ ಎಂದು ಇನ್‍ಸ್ಟಾಗ್ರಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗರಿಗೆ ಕನ್ನಡಿಗನಾದ ರಾಜೀವನ ನಮಸ್ಕಾರ, ನಾನು ಬಿಗ್ಬಾಸ್ ಮನೆಯಿಂದ ಹೊರಗೆ ಬಂದಾಗಲೂ ಇಷ್ಟು ಬೇಜಾರಾಗಿರಲಿಲ್ಲ. ಆದರೆ ಇವತ್ತು ಬಿಗ್ ಬಾಸ್ ಕಾರ್ಯಕ್ರಮವೇ ನಿಂತುಹೋಗಿರುವುದು ತುಂಬಾ ಬೇಜಾರ್ ಆಗುತ್ತಿದೆ. ಎಲ್ಲೋ ಒಂದು ಕಡೆ ನನ್ನ ಪಾಡಿಗೆ ನಾನಿದ್ದೆ. ನನ್ನನ್ನು ಸ್ವಾಗತಿಸಿ, ಗೌರವಿಸಿ ಬಿಗ್ಬಾಸ್ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಇವತ್ತು ಅದೆಷ್ಟೋ ಕೋಟ್ಯಂತರ ಅಭಿಮಾನಿಗಳ ಅಭಿಮಾನಕ್ಕೆ ಒಳಗಾಗುವಂತೆ ಮಾಡಿದ್ದಾರೆ, ಇದಕ್ಕೆ ನಾನೆಂದಿಗೂ ಆಭಾರಿ’ ಎಂದು ರಾಜೀವ್ ಹೇಳಿದ್ದಾರೆ.
‘ಅದೆಷ್ಟೋ ಪ್ರತಿಭೆಗಳನ್ನು ಹುಡುಕಿ, ಗುರುತಿಸಿ, ಸಾಧನೆಯ ಹಾದಿಯಲ್ಲಿ ಮೆರೆಸಿ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ಕೂರಿಸಿ, ಅಚ್ಚಳಿಯದ ಉತ್ತುಂಗಕ್ಕೆ ಏರಿಸಿ, ಸಂಭ್ರಮಪಡುವ ಬಿಗ್ ಬಾಸ್‍ನಂತಹ ಕಾರ್ಯಕ್ರಮದಲ್ಲಿ, ನನ್ನ ಹೆಜ್ಜೆಯ ಗುರುತುಗಳು ಸಹ ಆ ಮನೆಯಲ್ಲಿ ಓಡಾಡಿರುವುದನ್ನು ನೆನೆದು ನಾನು ಕಾಲಕಾಲಕ್ಕೂ ಹೆಮ್ಮೆಪಡುತ್ತೇನೆ. ನನ್ನನ್ನು ತಮ್ಮನಿಗಿಂತ ಹೆಚ್ಚಾಗಿ ಪ್ರೀತಿ ಮಾಡುವ ಅಭಿನಯ ಚಕ್ರವರ್ತಿ ಕನ್ನಡಗರ ಆಸ್ತಿ ಕಿಚ್ಚ ಸುದೀಪ್ ಅವರಿಗೆ ನನ್ನ ಹೃದಯಾಳದ ವಂದನೆಗಳು. ನನ್ನನ್ನು ಹ0ಬಲದಿಂದ ಸದಾ ಬೆ0ಬಲಿಸುವ ಪರಮ್ ಸರ್ ಅವರಿಗೆ ಪ್ರೀತಿಯ ಅಪ್ಪುಗೆ, ಕಲರ್ಸ್ ವಾಹಿನಿಯ ಮೂಲಕ ಮನೆ ಮನೆಯಲ್ಲೂ ಮನೆ ಮಾತಾಗಲು ಕಾರಣವಾದ ಪ್ರತಿಯೊಬ್ಬ ಕಾರ್ಮಿಕ ಹಾಗೂ ತಂತ್ರಜ್ಞರಿಗೆ ನನ್ನ ಹೃದಯಪೂರ್ವಕ’ ಧನ್ಯವಾದಗಳು ಎಂದಿದ್ದಾರೆ.
ಅಲ್ಲದೇ ‘ಮನೆಯಲ್ಲಿ ಇದ್ದ ಪ್ರತಿಯೊಂದು ದಿನವು ನನ್ನನ್ನು ಪ್ರೀತಿಯಿಂದ ನಡೆಸಿಕೊಂಡು ಬ0ದಿದ್ದಾರೆ. ಮನೆಯಿಂದ ನನ್ನನ್ನು ಹೊರಗೆ ಕಳಿಸುವಾಗಲು ಅವರ ಔಪಚಾರಿಕತೆಯ ಬೀಳ್ಕೊಡುಗೆಯನ್ನು ಕೊಟ್ಟು ಗೌರವಯುತವಾಗಿ ನನ್ನನ್ನು ಕಳಿಸಿಕೊಡುವ ಉದ್ದೇಶ ಅವರದ್ದಾಗಿತ್ತು. ಆದರೆ ಸುದೀಪ್ ಸರ್ ಅವರ ಅನುಪಸ್ಥಿತಿ ಹಾಗೂ ನನ್ನ ಮನಸ್ಥಿತಿ ಎರಡು ಸದ್ದಿಲ್ಲದೇ ನನ್ನನ್ನು ಸ್ತಬ್ಧನಾಗುವಂತೆ ಮಾಡಿತ್ತು. ಮೊದಲಿಗೆ ನನ್ನ ಅಭಿಮಾನಿಗಳ ಬಳಿ ನಾನು ಕ್ಷಮೆಯಾಚಿಸುತ್ತೇನೆ’ ಎಂದಿದ್ದಾರೆ.
ಕರ್ನಾಟಕದಲ್ಲಿ ಲಾಕ್ ಡೌನ್ ವಿಧಿಸಿರುವ ಪರಿಣಾಮ ಬಿಗ್ ಬಾಸ್ ಸೀಸನ್ 8 ಅರ್ಧಕ್ಕೆ ನಿಂತು ಹೋಗಿದೆ.. ಈ ವಿಷಯ ತಿಳಿಯುತ್ತಿದ್ದಂತೆ ಮನೆಯ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ಧಾರೆ. ಇಡೀ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್ ಬಾಸ್ ಶೋ ಅರ್ಧಕ್ಕೆ ನಿಂತುಹೋಗಿದೆ.








