ADVERTISEMENT
Wednesday, March 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Bigg Boss 8

ಬಿಗ್ ಬಾಸ್ ಕನ್ನಡದ ಸೀಸನ್ 8 ಮತ್ತೆ ಆರಂಭವಾಗುವುದು ಖಚಿತ..!   

Namratha Rao by Namratha Rao
June 16, 2021
in Bigg Boss 8, Newsbeat, ಬಿಗ್ ಬಾಸ್ 8
Share on FacebookShare on TwitterShare on WhatsappShare on Telegram

Related posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (25-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

March 25, 2026
ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

March 24, 2026

ಬಿಗ್ ಬಾಸ್ ಕನ್ನಡದ ಸೀಸನ್ 8 ಮತ್ತೆ ಆರಂಭವಾಗುವುದು ಖಚಿತ..!

ಕೋವಿಡ್ 2ನೇ ಅಲೆ ಲಾಕ್ ಡೌನ್ ಘೋಷಣೆಯಿಂದಾಗಿ ಅರ್ಧಕ್ಕೆ ನಿಂತುಹೋಗಿದ್ದ ಬಿಗ್ ಬಾಸ್ ಕನ್ನಡ ಸೀಸನ್ 8 ಪುನರಾರಂಭವಾಗಲಿದೆ ಅನ್ನೋ ಊಹಾಪೋಹಳು ಕೆಲ ದಿನಗಳಿಂದ ಹರಿದಾಡುತ್ತಿತ್ತು.. ಇದೀಗ  ಈ  ಸುದ್ದಿ ಖಚಿತವಾಗಿದ್ದು, ಬಿಗ್ ಬಾಸ್ ಮತ್ತೆ ಆರಂಭವಾಗಲಿದೆ ಎಂದುಬಿಗ್‍ಬಾಸ್ ಪ್ರಸಾರವಾಗುವ ಖಾಸಗಿ ವಾಹಿನಿಯ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು , ‘ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ ಪ್ರಯಾಣವನ್ನು ಈಗ ಪುನಃ ಅದೇ ಹನ್ನೆರಡು ಜನರೊಂದಿಗೆ ಶುರು ಮಾಡುವ ಸಮಯವಾಗಿದೆ’ ಎಂದಿದ್ದಾರೆ.

‘ಇದೊಂಥರಾ ಎರಡನೇ ಇನ್ನಿಂಗ್ಸ್. ಯಾರು ಚೆನ್ನಾಗಿ ಆಡುತ್ತಿದ್ದಾರೆ, ಎಲ್ಲಿ ಚೆನ್ನಾಗಿ ಆಡಬಹುದಿತ್ತು, ಎಲ್ಲಿ ಚೆನ್ನಾಗಿ ಆಡಬೇಕಾಗಿತ್ತು, ಯಾರಿಗೆ ಗಾಯವಾಗಿದೆ, ಯಾರು ಬೇಗ ಸುಸ್ತಾಗುತ್ತಾರೆ, ಯಾರು ರೊಚ್ಚಿಗೇಳುತ್ತಾರೆ, ಪಿಚ್ ಹೇಗೆ ವರ್ತಿಸುತ್ತಿದೆ ಎನ್ನುವುದೆಲ್ಲಾ ಗೊತ್ತಿದೆ. ಮೊದಲನೇ ಇನ್ನಿಂಗ್ಸ್ ಸ್ಕೋರ್ ಕಾರ್ಡ್ ಎಲ್ಲರಿಗೂ ಗೊತ್ತು. ಆದರೆ ಎರಡನೇ ಇನಿಂಗ್ಸಿನಲ್ಲಿ ಯಾರು ಹೇಗೆ ಆಡುತ್ತಾರೆ ಅನ್ನುವುದರ ಮೇಲೇ ಮ್ಯಾಚ್ ಯಾರು ಗೆಲ್ಲುತ್ತಾರೆ ಎಂಬ ತೀರ್ಮಾನ ಆಗುತ್ತದೆ.

ಎರಡನೇ ಇನ್ನಿಂಗ್ಸ್ ನಲ್ಲಿ ಮತ್ತೆ ಮೊದಲ ರನ್ ಓಡಬೇಕು. ಮೊದಲ ವಿಕೆಟ್ ಉರುಳಿಸಬೇಕು. ಅದೇ ಏಕಾಗ್ರತೆ, ಶ್ರದ್ಧೆ ಮತ್ತು ಜೀವನಪ್ರೀತಿ ಬೇಕು. ಇಷ್ಟು ವರ್ಷಗಳ ಕಾಲ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ ಯಾವ ಬಿಗ್‍ಬಾಸ್ ಶೋದಲ್ಲೂ ಎರಡನೇ  ಇನ್ನಿಂಗ್ಸ್ ಆಡುವ ಅವಕಾಶ ಯಾರಿಗೂ ಸಿಕ್ಕಿರಲಿಲ್ಲ. ಕನ್ನಡದಲ್ಲಿ ಈ ಹನ್ನೆರಡು ಕಂಟೆಸ್ಟೆಂಟುಗಳಿಗೆ ಅಂಥದ್ದೊಂದು ಅವಕಾಶ ಸಿಗುತ್ತಿದೆ.

ಜೂನ್ ತಿಂಗಳು. ಹೊರಗಡೆ ಮಳೆ. ಹೊಸ ತರಗತಿಗೆ ಹೊಸದಾಗಿರೋ ಕೊಡೆ ಹಿಡಿದು ಹೋದಷ್ಟೇ ಖುಷಿಯೊಂದಿಗೆ ವಾಪಸ್ ಕೆಲಸಕ್ಕೆ ಹಾಜರಾಗುತ್ತಿದ್ದೇವೆ. ಪಾಸಾಗುತ್ತೇವೋ ಫೇಲಾಗುತ್ತೇವೋ ಅನ್ನುವುದಕ್ಕಿಂತ ತರಗತಿಯಲ್ಲಿ ಕುಳಿತು ಕಲಿತಾ ಇರಬೇಕು ಅನ್ನೋದೇ ವಿಷಯವಾಗಿದೆ’ ಎಂದು ತಿಳಿಸಿದ್ದಾರೆ.

ಈ ಮೂಲಕ ಬಿಗ್ ಬಾಸ್ ಪುನರಾರಂಭದ ಬಗ್ಗೆ ಸುಳಿವು ನೀಡಿದ್ದಾರೆ. ಅಂದ್ಹಾಗೆ ಬಿಗ್ ಬಾಸ್ ಇನ್ನೂ ಮೂರು ವಾರಗಳಿರುವಾಗಲೇ ಬಂದ್ ಆಗಿತ್ತು.. ಹೀಗಾಗಿ ಅಭಿಮಾನಿಗಳು ಜೊತೆಗೆ ಸ್ಪರ್ಧಿಗಳು ಸಹ ಬೇಸರಗೊಂಡಿದ್ದರು.. ಎಲ್ಲಾ ಅಮದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ಯಾರು ವಿನ್ನರ್  ಎಂಬುದು ಸಹ ಗೊತ್ತಾಗಿರಬೇಕಿತ್ತು..

ಇನ್ನೂ ಜೂನ್ 21 ರಿಂದ ಮತ್ತೆ ಬಿಗ್ ಬಾಸ್ ಆರಂಭವಾಗಿಲಿದೆ ಎಂದು ಹೇಳಲಾಗ್ತಿದೆ.. ಜೊತೆಗೆ ಶೋ ಆರಂಭಕ್ಕೂ ಮುನ್ನ ಮತ್ತೊಮ್ಮೆ ಸ್ಪರ್ಧಿಗಳು ಕ್ವಾರಂಟೈನ್ ಗೆ ಒಳಗಾಗುವ ಸಾಧ್ಯತೆಯಿದೆ..

ಅಂದ್ಹಾಗೆ ಬಿಗ್ ಬಾಸ್ ನಲ್ಲಿ ಅರವಿಂದ್ ಅಥವ ಮಂಜು ಪಾವಗಡ ವಿನ್ನರ್ ಆಗುವ ಸಾಕಷ್ಟು ನಿರೀಕ್ಷೆಗಳಿದ್ದವು.. ಇಬ್ಬರೂ ಸಹ ಟಫ್ ಕಾಂಪಿಟೇಟರ್ ಗಳಾಗಿದ್ದರು.. ಜೊತೆಗೆ ಸಾಕಷ್ಟು ಅಭಿಮಾನಿಗಳನ್ನ ಸಹ ಸಂಪಾದನೆ ಮಾಡಿದ್ದರು.. ಇದರ ಹೊರತಾಗಿ ಅರವಿಂದ್ ದಿವ್ಯಾ ಕೆಮಿಸ್ಟ್ರಿಯಿಂದಾಗಿ ಲೈಮ್ ಲೈಟ್ ನಲ್ಲಿಯೂ ಇದ್ದರು.. ಆದ್ರೆ ಕಡೆ ಕಡೆಯಲ್ಲಿ ದಿವ್ಯಾ ಅನಾರೋಗ್ಯದಿಂದಾಗಿ ಮನೆಯಿಂದ ಹೊರನಡೆದಿದ್ದರು.. ಈ ಬಾರಿ ಮತ್ತೆ ಮನೆಗೆ ಎಂಟ್ರಿಕೊಡುವ ಸಾಧ್ಯತೆಯಿದೆ.

ಇನ್ನೂ ಚಂದ್ರಚೂಡ್ ಚಕ್ರವರ್ತಿ , ಪ್ರಸಾಂತ್ ಸಂಬರಗಿ , ಅರವಿಂದ್ , ದಿವ್ಯಾ ಉರುಡುಗ , ಪ್ರಿಯಾಂಕಾ ತಿಮ್ಮೇಶ್ , ನಿಧಿ ಸುಬ್ಬಯ್ಯ್, ಶುಬಾ ಪುಂಜಾ , ದಿವ್ಯಾ ಸುರೇಶ್ , ಮುಂಜು ಪಾವಗಡ , ಶಮಂತ್ ಗೌಡ , ವೈಷ್ಣವಿ ಸೇಫ್ ಆಗಿ ಉಳಿದಿದ್ದರು..

Tags: biggboss 8biggboss kannada season 8KICCHA SUDEEP
ShareTweetSendShare
Join us on:

Related Posts

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (25-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 25, 2026
0

ದಿನ ಭವಿಷ್ಯ: 25-03-2026 ಮೇಷ ರಾಶಿ ಇಂದು ಮೇಷ ರಾಶಿಯವರಿಗೆ ಅತ್ಯಂತ ಉತ್ಸಾಹದಾಯಕ ದಿನವಾಗಿರುತ್ತದೆ. ನಿಮ್ಮ ರಾಶ್ಯಾಧಿಪತಿಯಾದ ಕುಜನ ಅನುಗ್ರಹ ಮತ್ತು ಸೂರ್ಯನ ಪ್ರಬಲ ಸ್ಥಿತಿಯಿಂದಾಗಿ ನಿಮ್ಮ...

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

ಡಿಕೆಶಿ ಮನಗೆಲ್ಲಲು ಹೊಸ ಅಸ್ತ್ರ: ‘ಭಾವಿ ಸಿಎಂ’ ಎಂದಾಕ್ಷಣ 50 ಕೋಟಿ ಅನುದಾನ ಮಂಜೂರು! ವಿಧಾನಸಭೆಯಲ್ಲಿ ಬಟಾ ಬಯಲಾಯ್ತು ‘BJP’ ಸೀಕ್ರೆಟ್

by Shwetha
March 24, 2026
0

ಬೆಂಗಳೂರು: ರಾಜಕಾರಣದಲ್ಲಿ ಕೆಲಸ ಆಗಬೇಕೆಂದರೆ ಸಾಮ, ದಾನ, ಭೇದ, ದಂಡ ಎಲ್ಲವನ್ನೂ ಬಳಸಬೇಕು ಎಂಬ ಮಾತಿದೆ. ಆದರೆ, ಹಾಲಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್...

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

ಆನೆ ಮರಿಗೆ ಡಾ. ಸಮೀಕ್ಷಾ ರೆಡ್ಡಿ ಹೆಸರು ನಾಮಕರಣ

by Shwetha
March 24, 2026
0

ಇತ್ತೀಚೆಗೆ ಶಿವಮೊಗ್ಗ ಮೃಗಾಲಯದಲ್ಲಿ ನೀರಾನೆ ದಾಳಿಯಿಂದ ಟ್ರೈನಿ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಮೃತಪಟ್ಟ ಘಟನೆ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆ, ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ನಲ್ಲಿ...

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವೇ ಗುರಿ: ವಿಜಯೇಂದ್ರ

by Shwetha
March 24, 2026
0

ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವುದೇ ಮುಖ್ಯ ಗುರಿ ಎಂದು B. Y. ವಿಜಯೇಂದ್ರ ತಿಳಿಸಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಈ ಎರಡೂ...

ಚಿನ್ನದ ಮೇಲೆ ಹೂಡಿಕೆ ಮಾಡುವವರೇ ಎಚ್ಚರ! ಚಿನ್ನದ ಮೌಲ್ಯ ಪಾತಾಳಕ್ಕೆ!ಹಳದಿ ಲೋಹದ ದಿಢೀರ್ ಪತನಕ್ಕೆ ಅಸಲಿ ಕಾರಣವೇನು?

ಚಿನ್ನದ ಮೇಲೆ ಹೂಡಿಕೆ ಮಾಡುವವರೇ ಎಚ್ಚರ! ಚಿನ್ನದ ಮೌಲ್ಯ ಪಾತಾಳಕ್ಕೆ!ಹಳದಿ ಲೋಹದ ದಿಢೀರ್ ಪತನಕ್ಕೆ ಅಸಲಿ ಕಾರಣವೇನು?

by Shwetha
March 24, 2026
0

ಜಾಗತಿಕ ಹಣಕಾಸು ಮಾರುಕಟ್ಟೆಯಲ್ಲಿ ಸುರಕ್ಷಿತ ಹೂಡಿಕೆ ಎಂದೇ ಕರೆಯಲ್ಪಡುವ ಚಿನ್ನದ ಸಾಮ್ರಾಜ್ಯದಲ್ಲಿ ಬಲವಾದ ಭೂಕಂಪ ಸಂಭವಿಸಿದೆ. ಯುದ್ಧದ ಭೀತಿ ಇದ್ದಾಗ ಸಾಮಾನ್ಯವಾಗಿ ಚಿನ್ನದ ಬೆಲೆ ಗಗನಕ್ಕೇರುವುದು ವಾಡಿಕೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram