BIGGBOSS 8 : ನಿಧಿ ಬಳಿ ಜೈಲಿನಲ್ಲಿ ಕ್ಷಮೆಯಾಚಿಸಿದ ಸಂಬರಗಿ..!
ಬಿಗ್ ಬಾಸ್ 8 ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಇಬ್ಬರು ಸದ್ಯರಿಗೆ ಕಳಪೆ ಬೋರ್ಡ್ ನೀಡಿ ಜೈಲಿಗೆ ಕಳುಹಿಸಲಾಗಿದೆ. ಪ್ರಶಾಂತ್ ಸಂಬರಗಿ ಹಾಗೂ ನಿಧಿ ಸುಬ್ಬಯ್ಯ ಇಬ್ಬರಿಗೂ ಕಳಪೆ ಪಟ್ಟಿ ನೀಡಲಾಗಿದೆ. ಇಬ್ಬರೂ ಜೈಲಿನಲ್ಲಿದ್ದ ವೇಳೆ ಪ್ರಶಾಂತ್ ಸಂಬರಗಿ ನಿಧಿ ಬಳಿ ಸಾರಿ ಕೇಳಿದ್ದಾರೆ. ಇನ್ನೂ ಇಬ್ಬರಿಗೆ 24 ಗಂಟೆಯ ಕಾಲ ಜೈಲಿನಲ್ಲಿರುವ ಶಿಕ್ಷೆ ನೀಡಲಾಗಿದೆ. ಕಳೆದ ವಾರದ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡಿದಕ್ಕೆ ಅವರಿಬ್ಬರಿಗೂ ಜೈಲಿಗೆ ಕಳುಹಿಸಲಾಗಿದೆ.
ಮೊದಲಿನಿಂದಲೇ ನಿಧಿ ಹಾಗೂ ಸಂಬರಗಿಯ ನಡುವೆ ಯಾವುದೇ ಒಳ್ಳೆ ಬಾಂಡಿಂಗ್ ಇಲ್ಲ. ಮೇಲಾಗಿ ಆಗಾಗ ಈ ಇಬ್ಬರು ಸ್ಪರ್ಧಿಗಳ ನಡುವೆ ಮನಸ್ಥಾಪಗಳು ಉಂಟಾಗುತ್ತಲೇ ಇರುತ್ವೆ. ಇತ್ತೀಚೆಗೆ ಸಹ ಮೊಟ್ಟೆ ವಿಚಾರವಾಗಿ ಈ ಇಬ್ಬರ ನಡುವೆ ದೊಡ್ಡ ಫೈಟ್ ನಡೆದಿತ್ತು. ಈ ವೇಳೆ ನಿಧಿಯವರನ್ನ ವಯಕ್ತಿವಾಗಿಯೂ ಹೀಯಾಳಿಸಿ ಅವರ ಪಾಲಿಗೆ ಶತ್ರುವಂತಾಗಿದ್ದಾರೆ ಸಂಬರಗಿ. ಜೈಲಿನಲ್ಲಿ ಸಂಬರಗಿ ತಾನು ಮಾಡಿದ ತಪ್ಪಿಗಾಗಿ ನಿಧಿ ಬಳಿ ಕ್ಷಮೆಯಾಚಿಸಿದ್ದಾರೆ. ಆದ್ರೆ ನಿಧಿ ಏನೂ ಮಾತನಾಡದೇ ಇದ್ರೂ ಸಿಕ್ಕ ಅವಕಾಶ ಬಳಸಿಕೊಂಡು ಸಂಬರಗಿ ತಾವು ಮಾಡಿದ ತಪ್ಪಿಗಾಗಿ ಕ್ಷಮೆಯಾಚಿಸಿದ್ದಾರೆ.