BIGGBOSS 8 : ಪ್ರಶಾಂತ್ ಸಂಬರಗಿಯವರು ನನ್ನಿಂದ ಏನು ಕಿತ್ಕೊಳ್ಳೊಕೆ ಆಗಲ್ಲ – ಶಮಂತ್
ಬೆಂಗಳೂರು: ಬಿಗ್ ಬಾಸ್ 2ನೇ ಇನ್ನಿಂಗ್ಸ್ ಶುರುವಾಗಿದ್ದು, ಸ್ಪರ್ಧಿಗಳು ನಾನಾ ಸ್ಟಾರ್ಟರ್ಜಿಗಳನ್ನ ಬಳಸಿಕೊಳ್ತಿದ್ದಾರೆ… ಅಲ್ಲದೇ ಈಗಾಗಲೇ ಮನೆಗೆ ವಾಪಸ್ ಹೋಗಿ ಬಂದಿರೋದ್ರಿಂದ ಹಿಂದಿನ ಎಲ್ಲಾ ಸಂಚಿಕೆಗಳನ್ನೂ ನೋಡಿಕೊಂಡು ಬಂದಿದ್ದಾರೆ.. ಹೀಓಗಾಗಿ ಹಿಂದಿನ ತಪ್ಪುಗಳನ್ನ ಅರಿತು ಈಗ ಸರಿದೂಗಿಸುವ ಪ್ರಯತ್ನದಲ್ಲಿದ್ದಾರೆ.. ಜೊತೆಗೆ ಯಾವ ಸ್ಪರ್ಧಿಗಳು ತಮ್ಮ ಹಿಂದೆ ತಮ್ಮ ಬಗ್ಗೆ ಏನೆಲ್ಲಾ ಮಾತನಾಡಿಕೊಮಡಿದ್ದಾರೆ ಅನ್ನೋದನ್ನ ಕಂಡುಕೊಂಡಿದ್ದು, ಅವರದ್ದೇ ಆದ ಗೇಮ್ ಪ್ಲಾನ್ ಗಳನ್ನ ಮಾಡ್ತಿದ್ದಾರೆ..

ಸದ್ಯ ಮೊದಲಬಾರಿ ಶಮಂತ್ , ಚಕ್ರವರ್ತಿ , ಪ್ರಿಯಾಂಕಾ ತಿಮ್ಮೇಶ್ , ಸಸಂಬರಗಿ ಸ್ವಲ್ಪ ಕ್ಲೋಸ್ ಆಗಿದ್ದರು… ಈಗಲೂ ಕೂಡ ಹಾಗೇ ಇರುವಂತೆ ಕಾಣ್ತಿದೆ… ಈ ನಡುವೆ ಬ್ರೋ ಗೌಡ ಪ್ರಶಾಂತ್ ರನ್ನ ನಮ್ಮ ಚಿಕ್ಕಪ್ಪ ಅಂದಿದ್ದು, ಪ್ರಿಯಾಂಕಾ ತಿಮ್ಮೇಶ್, ಚಕ್ರವರ್ತಿ, ಪ್ರಶಾಂತ್ ಸಂಬರಗಿ ಒಟ್ಟಿಗೆ ಕುಳಿತು ಚರ್ಚೆ ನಡೆಸುತ್ತಿದ್ದಾಗ, ಶಮಂತ್ ಪ್ರಶಾಂತ್ ಸಂಬರಗಿಗೆ ಚಿಕ್ಕಪ್ಪ ಎಂದು ಕರೆಯುತ್ತಾರೆ. ಇದಕ್ಕೆ ಪ್ರಶಾಂತ್ ಇನ್ನೊಮ್ಮೆ ನೀನು ನನ್ನನ್ನು ಚಿಕ್ಕಪ್ಪ ಎಂದರೆ ನೋಡು ಎಂದು ವಾರ್ನ್ ಮಾಡುತ್ತಾರೆ.
ಆಗ ಶಮಂತ್ ಚಿಕ್ಕಪ್ಪ, ಚಿಕ್ಕಪ್ಪ ಎಂದು ಮತ್ತೆ ರೇಗಿಸುತ್ತಾರೆ. ಈ ವೇಳೆ ಪ್ರಿಯಾಂಕಾ ತಿಮ್ಮೇಶ್, ಪ್ರಶಾಂತ್ ಅವರಿಗೇನಾದರೂ ಮಗಳಿದ್ದಿದ್ದರೆ ಇಷ್ಟೊತ್ತಿಗೆ ಎಂಗೇಜ್‍ಮೆಂಟ್ ಆಗಿರುತ್ತಿತ್ತು ಎಂದು ಶಮಂತ್ ಹೇಳುತ್ತಿದ್ದರು ಎಂದಿದ್ದಾರೆ. ಇದರ ಅರ್ಥ ಇಷ್ಟು ಒಳ್ಳೆಯ ಮಾವ ಸಿಕ್ಕಿದ್ದಾರೆ ಮಗಳನ್ನು ಬಿಡಬಾರದು ಎಂದು ಪ್ರಿಯಾಂಕಾ ತಿಮ್ಮೇಶ್ ವಿವರಿಸುತ್ತಾ ಇರುತ್ತಾರೆ.. ಆಗ ಶಮಂತ್ ಮಾವ ಕೆಟ್ಟವರು. ಆದರೆ ನನಗೆ ಒಳ್ಳೆಯವರಷ್ಟೇ ಮಾವ ಬ್ರಿಲಿಯಂಟ್ ಎಂದು ಹೇಳುತ್ತಾರೆ. ನಂತರ ಚಕ್ರವರ್ತಿ ಚಂದ್ರಚೂಡ್ ನಿನಗೆ ಪ್ರಶಾಂತ್ ಏನು ಅನಿಸುತ್ತಾರೆ, ನಿನಗೆ ಅವರ ಮೇಲೆ ಏನು ಫೀಲಿಂಗ್ ಇದೆ ಎಂದು ಪ್ರಶ್ನಿಸುತ್ತಾರೆ.. ಇದಕ್ಕೆ ಉತ್ತರಿಸಿದ ಶಮಂತ್ ಪ್ರಶಾಂತ್ ನನಗೆ ಒಂದು ರೀತಿ ಅಂಕಲ್ ಮಾದರಿ, ಚಿಕ್ಕಪ್ಪ ನನ್ನ ಹತ್ತಿರ ಏನು ಕಿತ್ತಿಕೊಳ್ಳುವುದಕ್ಕೆ ಆಗುವುದಿಲ್ಲ. ಬರೆದು ಕೊಂಡುತ್ತೇನೆ ಪ್ರಶಾಂತ್ ಸಂಬರ್ಗಿಯವರು ಶಮಂತ್ ಅವರಿಂದ ಏನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಹೇಳಿದ್ದಾರೆ.








