BIGGBOSS 8 – ಜರ್ನಿ ಬಗ್ಗೆ ಅನುಭವ ಬಿಚ್ಚಿಟ್ಟ ಶುಭಾ – ಮುಂದಿನ ಗೋಲ್ ಮದ್ವೆಯಂತೆ..!
ಆರಂಭದಿಂದಲೂ ಬಬ್ಲಿಬಬ್ಲಿಯಾಗಿ ನಗುತ್ತಲೇ , ನಗಿಸುತ್ತಲೇ ಎಲ್ಲರ ಜೊತೆ ಬೆರೆಯುತ್ತಿದ್ದ ಶುಭಾ ಪೂಂಜಾ, ನಿನ್ನೆ ಎಲಿಮಿನೇಟ್ ಆಗಿ ಮನೆಯಿಂದ ಹೊರನಡೆದಿದ್ದು, ಸ್ಪರ್ಧಿಗಳು ಹಾಗೂ ವೀಕ್ಷಕರಿಗೆ ಬೇಸರ ತರಿಸಿದೆ.. ಎಲಿಮಿನೇಟ್ ಆದ ಬಳಿಕ ಕಿಚ್ಚ ಸುದೀಪ್ ಅವರ ಜೊತೆಗೆ ಸ್ಟೇಜ್ ಶೇರ್ ಮಾಡಿಕೊಂಡ ಶುಭಾ ಅಲ್ಲಿಯೂ ನಗುತ್ತಲೇ , ಬಿಗ್ ಬಾಸ್ ಅನುಭವಗಳನ್ನ ಬಿಚ್ಚಿಟ್ಟಿದ್ದಾರೆ. ಬಿಗ್ಬಾಸ್ ಮನೆಯಿಂದ ಹೊರಬಂದ ಶುಭಾ ಪೂಂಜಾ ಬಿಗ್ಬಾಸ್ ನನ್ನ ಜೀವನದ ಬೆಸ್ಟ್ ಡಿಷಿಶನ್ ಎಂದು ಹೇಳಿದ್ದಾರೆ.
ಭಾನುವಾರ ವೇದಿಕೆ ಮೇಲೆ ಮಾತನಾಡಿದ ಶುಭಾ, 7 ಸೀಸನ್ನೆಲ್ಲಿಯೂ ಬಿಗ್ಬಾಯಸ್ ಕರ್ಯಕ್ರಮಕ್ಕೆ ಬರುತ್ತೀರಾ ಎಂದು ಕೇಳಿದ್ದರು. ಆದರೆ 8ನೇ ಸೀಸನ್ ಬಂದಿದ್ದು, ನನಗೆ ಲಾಭ ಎನಿಸಿತು. ನಾನು ಮನೆಯಲ್ಲಿ ಕೂಡ ಬಹಳ ಎಂಟರ್ ಟೈನರ್, ಹಾಗೆಯೇ ಬಿಗ್ಬಾಸಸ್ ಮನೆಯಲ್ಲಿಯೂ ನಾನು ಲೈವ್ಲೀಗ ಯಾಗಿರಬೇಕು, ಎಂಟರ್ ಟೈನರ್ ಆಗಿರಬೇಕು, ಜನರನ್ನು, ಮನೆಯಲ್ಲಿರುವವರು ನಗಿಸಬೇಕು ಅಂದುಕೊಂಡಿದ್ದೆ. ನಾನು ಮನೆಯಲ್ಲಿ ಇರುವ ಕೊನೆಯ ಕ್ಷಣದವರೆಗೂ ಎಂಟರ್ ಟೈನ್ ಮಾಡಬೇಕು ಅಂದುಕೊಂಡಿದ್ದೆ. ಆ ಗುರಿ ತಲುಪಿದ್ದೇನೆ ಅಂದುಕೊಂಡಿದ್ದೇನೆ. ಇನ್ನೂ ಲೈಫ್ನೂಲ್ಲಿ ನಾನು ಬಹಳ ಏರುಪೇರು ನೋಡಿದ್ದರಿಂದ, ಯಾವುದಕ್ಕೂ ತುಂಬಾ ಉದ್ರೇಕಕ್ಕೆ ಒಳಗಾಗದೇ ಇರುವ ಚಿಕ್ಕಜೀವನವನ್ನು ಖುಷಿಯಾಗಿ ನಡೆಸಬೇಕು ಎಂದಿದ್ದಾರೆ.
BIGGBOSS 8 : ಮನೆಯಿಂದ ಹೊರ ನಡೆದ ಶಮಂತ್ – 2ನೇ ಬಾರಿಗೆ ಅದೃಷ್ಟ ಒಲಿಯಲಿಲ್ಲ..!
ನನಗೆ ಇಷ್ಟ ಆಗುವಂತಹವರನ್ನು ನಾನು ಎಂದೂ ಹೆಸರಿಟ್ಟು ಕರೆಯುವುದಿಲ್ಲ. ಅವರಿಗೆ ಒಂದು ಅಡ್ಡ ಹೆಸರನ್ನು ಇಟ್ಟೆ ಇಡುತ್ತೇನೆ. ಮಂಜುಗೆ ಚಂಪೂ, ರಾಜೀವ್ಗೆ ಗುಡ್ಡು, ಡಿಯುಗೆ ಬಿಟ್ಟು ಹೀಗೆ ಅಡ್ಡ ಹೆಸರಿನಲ್ಲಿ ನಾನು ಕರೆಯುವವರು ಯಾವಾಗಲೂ ನನ್ನ ಹೃದಯದಲ್ಲಿ ಇರುತ್ತಾರೆ ಎಂದು ಹೇಳಿದ್ದಾರೆ.
ಬಿಗ್ಬಾಸ್ ನಂತರ ಏನು ಎಂಬ ಸುದೀಪ್ ಪ್ರಶ್ನೆಗೆ, ಶುಭಾ 6 ತಿಂಗಳು ಫಿಯಾನ್ಸೆ ನನಗೆ ಸಪರ್ಟ್ ಮಾಡಿ ಬಿಗ್ಬಾಸ್ ಮನೆಗೆ ಕಳುಹಿಸಿ 6 ತಿಂಗಳ ಕಾಲ ಕಾದಿದ್ದಾರೆ. ಅವರೇ ನನಗೆ ಬಿಗ್ಬಾಸ್ ಮನೆಗೆ ಹೋಗು ಎಂದಿದ್ದರು. ನನಗೋಸ್ಕರ ಫಸ್ಟ್ ಇನ್ನಿಂಗ್ಸ್ ಕಾದು ಮತ್ತೆ ಸೆಕೆಂಡ್ ಇನ್ನಿಂಗ್ಸ್ ಕಾದಿದ್ದಾರೆ. ಈಗ ಮದುವೆಯಾಗುವುದಾಗಿ ತಿಳಿಸಿದ್ದಾರೆ.