ಮಲಯಾಳಂ ಬಿಗ್‌ಬಾಸ್ – 6 ಮಂದಿಗೆ ಕೊರೊನಾ ಪಾಸಿಟಿವ್ – ಅರ್ಧಕ್ಕೆ ನಿಲ್ಲುವ ಸಾಧ್ಯತೆ
ಕರ್ನಾಟಕದಲ್ಲಿ ಕೋವಿಡ್ ಹಾವಳಿಯಿಂದಾಗಿ ಲಾಕ್ ಡೌನ್ ನ ನಂತರ ಬಿಗ್ ಬಾಸ್ ಕನ್ನಡ ಸೀಸನ್ 8 ಅರ್ಧಕ್ಕೆ ನಿಂತುಹೋಯ್ತು.. ಇದೀಗ ಮಳಯಾಳಂನ ಬಿಗ್ ಬಾಸ್ ರಿಯಾಲಿಟಿ ಶೋ ಸೀಸನ್ 3 ಸಹ ಅರ್ಧಕ್ಕೆ ರದ್ದಾಗುವ ಎಲ್ಲಾ ಸಾಧ್ಯತೆಯಿದೆ..
ಹೌದು.. ಬಿಗ್‌ಬಾಸ್ ಶೋನ ತಾಂತ್ರಿಕ ವರ್ಗದಲ್ಲಿ ಕೆಲಸ ಮಾಡುತ್ತಿರುವ ಆರು ಮಂದಿಗೆ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಶೋ ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ. ಇನ್ನೂ ಕಳೆದ ವರ್ಷವೂ ಸಹ ಪ್ರಸಾರವಾಗಿದ್ದ ಮಲಯಾಳಂ ಬಿಗ್‌ಬಾಸ್ ಸೀಸನ್ 2 ಕೊರೊನಾ ಕಾರಣಕ್ಕೆ ಅರ್ಧಕ್ಕೆ ನಿಂತಿತ್ತು.
ಶೋನ ಸ್ಪರ್ಧಿಗಳು ಮತ್ತು ತಾಂತ್ರಿಕ ತಂಡದವರು ಪ್ರತಿ ವಾರ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂಬ ನಿಯಮವಿತ್ತು. ಅದೇ ರೀತಿ ಅಂತೆಯೇ ಈ ವಾರ ಪರೀಕ್ಷೆ ಮಾಡಿದಾಗ 6 ಮಂದಿಗೆ ಪಾಸಿಟಿವ್ ಬಂದಿದೆ. ಆದರೆ ಬಿಗ್ ಬಾಸ್ ಮನೆಯ ಒಳಗಿರುವ ಸ್ಪರ್ಧಿಗಳ್ಯಾರಿಗೂ ಕೊರೊನಾ ಪಾಸಿಟಿವ್ ಆಗಿಲ್ಲ.
ಅಂದ್ಹಾಗೆ ಕೆಲವು ದಿನಗಳ ಹಿಂದಷ್ಟೆ ಶೋ ಅನ್ನು 2 ವಾರ ವಿಸ್ತರಿಸಲಾಗಿತ್ತು. ಆದರೆ ಈಗ ಕೊರೊನಾ ಪಾಸಿಟಿವ್ ಆಗಿರುವ ಕಾರಣ ಶೋ ನಿಂತುಹೋಗಬಹುದು ಎನ್ನಲಾಗ್ತಿದೆ. ಸ್ಪರ್ಧಿಗಳಿಗೆ ತುರ್ತಾಗಿ ಮತ್ತೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತದೆ. ಅದರ ವರದಿ ಆಧಾರದ ಮೇಲೆ ಶೋ ರದ್ದಾಗುತ್ತೋ ಮುಂದುವರೆಯಲಿದ್ಯೋ ಎನ್ನುವ ನಿರ್ಧಾರ ಹೊರ ಬೀಳಲಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.
=======0








