ಬಿಗ್ ಬಾಸ್ ಕನ್ನಡ ಒಟಿಟಿ ಸೀಸನ್ 1 ರಲ್ಲಿನ ಕಂಟೆಸ್ಟೆಂಟ್ ಗಳು ಎಲ್ಲರೂ ವಿಭಿನ್ನ ವ್ಯಕತಿತ್ವದವರು , ವಿವಿಧ ಕ್ಷೇತ್ರಗಳಲ್ಲಿರುವವರು. ಈ ಬಾರಿ ಮನೆಯ ಹೈಲೇಟ್ ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ… ಮೊದಲನೇ ವಾರ ಮನೆಯಿಂದ ಹೊರಗೆ ಕಿರಣ್ ಹೊರ ನಡೆದಿದ್ದಾರೆ..
ಇದೀಗ 2 ನೇ ವರಾದಲ್ಲಿ ಮತ್ತಷ್ಟು ಮನೆ ವಾತಾವರಣ ಬದಲಾಗಿದೆ.. ಅದ್ರಲ್ಲೂ ಕೇವಲ ಒಂದು ರೊಟ್ಟಿ ತುಂಡಿಗಾಗಿ ಮನೆಯಲ್ಲಿ ಕಂಟೆಸ್ಟೆಂಟ್ ಗಳ ನಡುವೆ ದೊಡ್ಡ ಫೈಟ್ ನಡೆದಿದೆ..
ಸೋಮವಾರ ಮನೆಯ ಎಲ್ಲ ಸದಸ್ಯರು ಸ್ವಾತಂತ್ರ್ಯ ದಿನದ ಪ್ರಯುಕ್ತ ಧ್ವಜಾರೋಹನದಲ್ಲಿ ಪಾಲ್ಗೊಂಡಿದ್ದರು. ನಂತರ ಲ್ಲರೂ ಖುಷಿಯಿಂದಲೇ ಕಾಲ ಕಳೆದರು.. ಆದ್ರೆ ಇದ್ದಕ್ಕಿದ್ದ ಹಾಗೆ ಒಂದು ರೊಟ್ಟಿಯ ಪೀಸ್ ಗಾಗಿ ಕಿತ್ತಾಟ ನಡೆದು ವಾತಾವರಣವೇ ಬದಲಾಗಿ ಬಿಟ್ಟಿತ್ತು..
ರೂಪೇಶ್ ತನಗೆ ಕೊಟ್ಟಿದ್ದ ರೊಟ್ಟಿ ಹೆಚ್ಚಾಯಿತು ಎಂದು ಅದನ್ನು ಡಸ್ಟ್ ಬೀನ್ ಗೆ ಎಸೆದಿದ್ದರು. ಅದನ್ನು ಕಂಡ ಅರ್ಜುನ್, ಯಾರು ರೊಟ್ಟಿ ಎಸೆದದ್ದು ಎಂದು ಕೇಳಿದರು. ಇಬ್ಬರ ನಡುವಿನ ಮಾತಿನ ಚಕಮಕಿ ಆರಂಭವಾಗಿ ಗಲಾಟೆ ನಡೆದಿದೆ..
ಡಸ್ಟ್ ಬಿನ್ ಗೆ ನಾನೇ ರೊಟ್ಟಿ ಎಸೆದದ್ದು ಎಂದು ರೂಪೇಶ್ ಒಪ್ಪಿಕೊಂಡಿದ್ದಾರೆ. ನನಗೆ ರೊಟ್ಟಿ ಹಿಡಿಸಲಿಲ್ಲ ಎಂದೂ ಹೇಳಿದ್ದಾರೆ.. ಆದ್ರೆ ಇದ್ರಿಂದ ಅರ್ಜುನ್ ಸಿಟ್ಟಾಗಿದ್ದಾರೆ.. ಎಷ್ಟೋ ಜನಕ್ಕೆ ತಿನ್ನಲು ಅನ್ನವಿಲ್ಲ. ಉಪವಾಸದಿಂದ ಸಾಯುತ್ತಿದ್ದಾರೆ ಎಂದು ಸಿಟ್ಟಾಗಿದ್ದಾರೆ. ಇದಕ್ಕೆ ಖಾರವಾಗಿಯೇ ಮಾತನಾಡಿದ್ದಾರೆ ರೂಪೇಶ್.. ಹೀಗೆ ಇಬ್ಬರೂ ಕಿತ್ತಾಡಿಕೊಂಡಿದ್ದು , ನಂತರ ಸಮಾಧಾನಗೊಂಡಿದ್ದಾರೆ..