ಕನ್ನಡ ಅಷ್ಟೇ ಅಲ್ದೇ ಇತರೇ ಭಾಷೆಗಳಲ್ಲೂ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿರುವ ರಿಯಾಲಿಟಿ ಶೋ ಅಂದ್ರೆ ಅದು ಬಿಗ್ ಬಾಸ್… ಕನ್ನಡದಲ್ಲಿ ಈಗಾಗಲೇ 8 ಸೀಸನ್ ಗಳು ಮುಕ್ತಾಯಗೊಂಡಿದೆ..
ಇದೀಗ ಸೀಸನ್ 9 ಯಾವಾಗ ಎಂದು ಅಭಿಮಾನಿಗಳು ಎದುರು ನೋಡ್ತಿದ್ದಾರೆ.. ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್ ಬಾಸ್ ನಲ್ಲಿ ಪ್ರತಿ ವರ್ಷ ಬದಲಾವಣೆಗಳಾಗುತ್ತಲೇ ಇರುತ್ತೆ.. ಆದ್ರೆ ಈ ವರ್ಷ ಒಂದಲ್ಲ ಬದಲಾಗಿ ಹಿಂದಿಯ ಮಾದರಿಯಲ್ಲೇ ಎರೆಡೆರೆಡು ಬಿಗ್ ಬಾಸ್ ಶೋ ಪ್ರಸಾರವಾಗಲಿದೆ..
ಒಟಿಟಿ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ Voot ನಲ್ಲಿ ಡಿಜಿಟಲ್ ಆವೃತ್ತಿಯು ಪ್ರಸಾರವಾಗಲಿದೆ.
ಅಂದ್ಹಾಗೆ ಒಟಿಟಿ ಬಿಗ್ ಬಾಸ್ ನ ಪ್ರೋಮೋ ರಿಲೀಸ್ ಆಗಿದೆ.. ಲೈಮ್ ಲೈಟ್ ನಲ್ಲಿ ಡ್ಯಾಶಿಂಗ್ ಆಗಿ ಕಾಣಿಸಿಕೊಳ್ಳುವ ಸುದೀಪ್ ಅವರನಮ್ನ ನೋಡಿ ಎಲ್ಲರೂ ಎಕ್ಸೈಟ್ ಆಗಿ ಕಿರುಚಾಡುತ್ತಾರೆ.. ಕಿಚ್ಚ ಆಟೋಗ್ರಾಫ್ ನೀಡ್ತಾ ನೀಡ್ತಾ ಜನರು ಸೀಸನ್ 9 ಅಂದ್ರೆ … ನೋ.. ನೋ… ಸೀಸನ್ 9 ಅಲ್ಲ 1 ಅಂತ ಜನರನ್ನ ಆಶ್ಚರ್ಯಗೊಳಿಸುತ್ತಾರೆ..
ಇದು ಬಿಗ್ ಬಾಸ್ ಸೀಸನ್ 9 ಅಲ್ಲ.. ಇದು ಮತ್ತೊಂದು ಬಿಗ್ ಬಾಸ್ ಅಂದ್ರೆ ಒಟಿಟಿ ಬಿಗ್ ಬಾಸ್ ಸೀಸನ್ 1…
ಸದ್ಯ ಎಲ್ಲರೂ ಈ ಬಾರಿಯ ಬಿಗ್ ಬಾಸ್ ಗಾಗಿ ಎಕ್ಸೈಟ್ ಆಗಿದ್ದಾರೆ..
https://www.instagram.com/p/CgV2eRsDfWN/?utm_source=ig_embed&utm_campaign=embed_video_watch_again








