Bihar : 42 ವರ್ಷದ ಶಿಕ್ಷಕನನ್ನ ಮದುವೆಯಾದ 20 ವರ್ಷದ ವಿದ್ಯಾರ್ಥಿನಿ..!!! Viral Video
42 ವರ್ಷದ ಶಿಕ್ಷನ ವರಿಸಿದ 20ರ ಯುವತಿ
ಶಿಕ್ಷಕನ ಪ್ರೀತಿಸಿ ಮದುವೆಯಾದ ವಿದ್ಯಾರ್ಥಿನಿ
ಕೋಚಿಂಗ್ ಸೆಂಟರ್ ಗೆ ಹೋಗುತ್ತಿದ್ದ ಯುವತಿ
ಬಿಹಾರದ ಸಮಸ್ತಿಪುರದಲ್ಲಿ ಘಟನೆ
ಸೋಷಿಯಲ್ ಮೀಡಿಯಾದಲ್ಲಿ ಮದುವೆ ವಿಡಿಯೋ ವೈರಲ್
ಪ್ರೀತಿಗೆ ವಯಸ್ಸಿಲ್ಲ… ಪ್ರೀತಿ ಕುರುಡು ಅಂತ ಸುಮ್ನೆ ಹೇಳಲ್ಲ… ಪ್ರೀತಿ ಯಾವಾಗ ಹೇಗೆ ಯಾರ ಮೇಲೆ ಯಾಕಾಗುತ್ತದೆ ಹೇಳೋದು ತುಂಬಾ ಕಷ್ಟ..
ಇದೀಗ ಬಿಹಾರದಲ್ಲಿ ನಡೆದ ಒಂದು ಮದುವೆ ಈ ಮಾತಿಗೆ ಉತ್ತಮ ಉದಾಹರಣೆ ಎನ್ನಬಹುದು..
ಬಿಹಾರದ ಸಮಸ್ತಿಪುರದಲ್ಲಿ 42 ವರ್ಷದ ಶಿಕ್ಷಕರನ್ನ 20 ವರ್ಷದ ಹುಡುಗಿ ಪ್ರೀತಿಸಿ ಮದುವೆಯಾಗಿದ್ದಾಳೆ..
ಈ ಜೋಡಿಯ ಮದುವೆ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ..
ಶ್ವೇತಾ ಕುಮಾರಿ ಎಂಬ ವಿದ್ಯಾರ್ಥಿನಿಯು ತಮ್ಮ ಇಂಗ್ಲಿಷ್ ಶಿಕ್ಷಕ ಸಂಗೀತ್ ಕುಮಾರ್ ಅವರನ್ನು ವರಿಸಿದ್ದಾರೆ.
ಶ್ವೇತಾ ಇಂಗ್ಲಿಷ್ ಕಲಿಯಲು ಕೋಚಿಂಗ್ ಸೆಂಟರ್ ಗೆ ಹೋಗುತ್ತಿದ್ದಳು. ಅಲ್ಲಿ ಇಂಗ್ಲಿಷ್ ಶಿಕ್ಷಕರು ಹಾಗೂ ಆಕೆಯ ನಡುವೆ ಪ್ರೀತಿ ಹುಟ್ಟಿದೆ.. ಇದೀಗ ದೇವಸ್ಥಾನವೊಂದ್ರಲ್ಲಿ ಇಬ್ಬರೂ ಮದುವೆಯಾಗಿದ್ದಾಋಎ..
ಸಮಸ್ತಿಪುರದ ದೇವಸ್ಥಾನದಲ್ಲಿ ಇಬ್ಬರೂ ವಿವಾಹವಾಗಿದ್ದಾರೆ. ಇವರಿಬ್ಬರ ಮದುವೆಗೆ ಕೆಲ ಆಪ್ತರಷ್ಟೇ ಸಾಕ್ಷಿಯಾಗಿದ್ದಾರೆ. ಇಬ್ಬರ ಮದುವೆಯ ವೀಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಸಂಗೀತ್ ಅವರಿಗೆ ಇದು ಎರಡನೇ ಮದುವೆಯಾಗಿದೆ.. ಅವರ ಮೊದಲ ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು.
न उम्र की सीमा हो! बिहार के समस्तीपुर में 42 साल के टीचर को 20 साल की स्टूडेंट से प्रेम हो गया..दोनों ने राजी खुशी विवाह रचाया..वीडियो खूब वायरल हो रहा..लोग मटुकनाथ और जूली की प्रेम गाथा को याद कर रहे..वीडियो-श्री राजपूत..Edited By- @Sinhamegha8 pic.twitter.com/dVp0KfoJGW
— Prakash Kumar (@kumarprakash4u) December 10, 2022
Bihar , 20 year old student marrying (42) teacher