ಅರಳಿ ಮರದ ಕೆಳಗೆ ಪೂಜೆ ಸಲ್ಲಿಸುತ್ತಿದ್ದವರ ಮೇಲೆ ಹರಿದ ಟ್ರಕ್ – 8 ಮಂದಿ ಸಾವು
ಅರಳಿ ಮರದ ಕೆಳಗೆ ಪೂಜೆ ಸಲ್ಲಿಸುತ್ತಿದ್ದ 30 ಮಂದಿಯ ಮೇಲೆ ಕುಡಿದ ಮತ್ತಿನಲ್ಲಿ ಚಾಲಕ ಟ್ರಕ್ ಹರಿಸಿದ್ದು, ಸ್ಥಳದಲ್ಲೇ 8 ಮಂದಿ ಸಾವನ್ನಪ್ಪಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಮೃತಪಟ್ಟವರಲ್ಲಿ ಆರು ಮಂದಿ ಮಕ್ಕಳಿದ್ದಾರೆ.
ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಸುಲ್ತಾನಪುರ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಧಾರ್ಮಿಕ ಕಾರ್ಯದ ವೇಳೆ ಪೂಜೆ ಸಲ್ಲಿಸುತ್ತಿದ್ದವರ ಮೇಲೆ 120 K M ಸ್ಪೀಡ್ ನಲ್ಲಿ ಬಂದ ಲಾರಿ ಹರಿದು ಬಿಟ್ಟಿದೆ. ಮರ ಇಲ್ಲದಿದ್ದರೇ 50 ಕ್ಕೂ ಹೆಚ್ಚು ಜೀವಗಳು ಬಲಿಯಾಗುತ್ತಿದ್ದವು ಎಂದು ಸ್ಥಳಿಯರು ಹೇಳಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ದೇವಸ್ಥಾನವಿದೆ ಎಂದು ಗ್ರಾಮಸ್ಥ ಮನೋಜ್ ರೈ ತಿಳಿಸಿದ್ದಾರೆ. 50-60 ವರ್ಷಗಳಿಂದ ಅಲ್ಲಿ ಪೂಜೆ ನಡೆಯುತ್ತಿದೆ. ಕುಡಿದ ಮತ್ತಿನಲ್ಲಿ ಲಾರಿ ಚಲಾಯಿಸಿದ ಟ್ರಕ್ ಚಾಲಕನನ್ನ ಜನರು ಹಿಡಿದು ಥಳಿಸಿದ್ದಾರೆ. ನಂತರ ಪೊಲೀಸರು ಆಸ್ಪತ್ರಗೆ ಕರೆದೊಯ್ದಿದ್ದಾರೆ.
Bihar Accident: At least 12 die as truck ploughs into religious procession in Biharr