bihar actor akshath
ಬಿಹಾರ ಮೂಲದ ನಟ ಅಕ್ಷತ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್: ನಟಿಯೊಬ್ಬಳ ಬಂಧನ..!
ಮುಂಬೈ : ಬಾಲಿವುಡ್ ನಟ ಸುಶಾಂತ್ ಸಾವಿನ ಕೆಲ ದಿನಗಳ ನಂತರ ಮತ್ತೋರ್ವ ಬಿಹಾರ ಮೂಲದ ನಟ ಆತ್ಮಹತ್ಯೆಗೆ ಶರಣಾಗಿದ್ದ. ಇದೀಗ ಈ ನಟನ ಸಾವಿನ ಪ್ರಕರಣದಲ್ಲಿ ಹೊಸದೊಂದು ಟ್ವಿಸ್ಟ್ ಸಿಕ್ಕಿದಷೆ. ಹೌದು ಮುಂಬೈನ ಅಂಧೇರಿ ಅಪಾರ್ಟ್ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದ ಬಿಹಾರ ಮೂಲದ ನಟ ಅಕ್ಷತ್ ಉತ್ಕರ್ಷ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಪ್ರಕರಣ ಸಂಬಂಧ ನಟಿಯೊಬ್ಬಳು ಹಾಗೆಯೇ ಆಕೆಯ ಸಹೋದರಿಯ ವಿರುದ್ಧ ಇದೀಗ ಎಫ್ ಐಆರ್ ದಾಖಲಾಗಿದೆ. ಈ ಸಂಬಂಧ ಅಕ್ಷತ್ ತಂದೆ ವಿಜಯಕಾಂತ್ ಚೌಧರಿ ಬಿಹಾರದ ಮುಜಾಫರ್ ಫುರದ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ.
ದೂರಿನಲ್ಲಿ ಅಕ್ಷತ್ ಸ್ನೇಹಿತೆ ಆತನನ್ನ ಮದುವೆಯಾಗಲು ಒತ್ತಾಯಿಸಿದ್ದಳು. ಆದರೆ ಅಕ್ಷತ್ ನಿರಾಕರಿಸಿದ ಕಾರಣ ಆತನನ್ನ ಕೊಲೆ ಮಾಡಿದ್ದಾರೆ ಎಂದು ಉಲ್ಲೇಖವಾಗಿದೆ. ಅಕ್ಷತ್ ತಂದೆಯ ದೂರನ್ನ ಆದರಿಸಿ ಪೊಲೀಸರು, ಸೆಕ್ಷನ್ 302 ಮತ್ತು 34ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಈ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಮುಂಬೈನ ಅಂಬೋಲಿ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅಂಬೋಲಿ ಪೊಲೀಸರು ಹೇಳಿದ್ದಾರೆ.
ಈ ಹಿಂದೆ ಪೊಲೀಸರು ಇದೊಂದು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದರು. ನಟ ಅಕ್ಷತ್ ಕೆಲಸ ವಿಲ್ಲದೆ, ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿ ಕೊಲೆ ಆರೋಪವನ್ನು ಮುಂಬೈ ಪೊಲೀಸರು ತಳ್ಳಿಹಾಕಿದ್ದರು.
ಪ್ರಾಥಮಿಕ ವಿಚಾರಣೆ ಮತ್ತು ಮರಣೋತ್ತರ ಪರೀಕ್ಷೆಯಲ್ಲಿ ನೇಣು ಬಿಗಿದ ಕಾರಣ ಸಾವನ್ನಪ್ಪಿರುವುದ್ದು, ಕೊಲೆಯಲ್ಲ ಎನ್ನುವ ಮಾಹಿತಿ ಬಂದಿದೆ ಎಂದು ಅಂಬೋಲಿ ಪೊಲೀಸರು ಮಾಹಿತಿ ನೀಡಿದ್ದಾರೆ.
‘ಶ್ರೀರಾಮನಾಗಿ’ ಅಭಿಮಾನಿಗಳಿಗೆ ಪ್ರಭಾಸ್ ದರ್ಶನ ಯಾವಾಗ ಗೊತ್ತಾ..!
ಇನ್ನೂ ಈ ಪ್ರಕರಣವೂ ಸದ್ಯ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣದ ಮಾದರಿಯಲ್ಲೇ ಇದೆ. ಸುಶಾಂತ್ ಸಿಂಗ್ ಪ್ರಕರಣದಲ್ಲೂ ಮುಂಬೈ ಪೊಲೀಸರು ಆತ್ಮಹತ್ಯೆ ಎಂದು ಖಚಿತ ಪಡಿಸಿದ ಬಳಿಕ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಬಿಹಾರದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣ ದಿನಗಳೆದಂತೆಲ್ಲಾ ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ತಾಯಿದೆ. ಇದೇ ಮಾದರಿಯಲ್ಲೇ ಬಿಹಾರ ಮೂಲದವರೇ ಆದ ಅಕ್ಷತ್ ಸಹ ನಿಗೂಢವಾಗಿ ಮುಂಬೈನ ತಮ್ಮ ಪ್ಲಾಟ್ ಫಾರ್ಮ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸದ್ದರು. ಆದ್ರೆ ಸುಶಾಂತ್ ಅವರ ತಂದೆಯಂತೆಯೇ ಅಕ್ಷತ್ ಅವರ ತಂದೆ ಮಗನ ಗೆಳತಿ ವಿರುದ್ಧ ಇದೀಗ ಬಿಹಾರದಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.
bihar actor akshath
‘ಸ್ನೇಹನಾ ಪ್ರೀತಿನಾ’ ಸಿನಿಮಾದ ನಿರ್ದೇಶಕ ಶಾಹುರಾಜ್ ಶಿಂಧೆ ವಿಧಿವಶ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel