Bihar Assembly election
ಬಿಹಾರ: ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತೆಣಿಕೆ ಇಂದು ಮುಂಜಾನೆಯಿಂದಲೇ ಆರಂಭಗೊಂಡಿದ್ದು, ಮಹಾಘಟಬಂಧನ್ ಎನ್‌ಡಿಎ ನಡುವೆ ಕಠಿಣ ಹಣಾಹಣಿ ಏರ್ಪಟ್ಟಿದೆ. ಮತಎಣಿಕೆಯ ಮಾಹಿತಿ ಪ್ರಕಾರ ಎನ್ ಡಿಯು ಮುಂಚೂಣಿಯಲ್ಲಿದೆ. ಅದ್ರಲ್ಲೂ ಜೆಡಿಯುಗಿಂತಲೂ ಬಿಜೆಪಿಯೇ ಮುನ್ನಡೆ ಸಾಧಿಸುತ್ತಿದೆ. ಬಿಜೆಪಿ 75ನೇ ಸ್ಥಾನದಲ್ಲಿದ್ದರೆ ಜೆಡಿಯು 54ನೇ ಸ್ಥಾನದಲ್ಲಿದೆ. ಸತತ 15 ವರ್ಷಗಳ ಕಾಲ ಅಧಿಕಾರದ ಗದ್ದುಗೆ ಹಿಡಿದಿದ್ದ ನಿತೀಶ್ ಕುಮಾರ್ ವರ್ಚಸ್ಸು ಈ ಬಾರಿಯ ಚುನಾವಣೆಯಲ್ಲಿ ಕಡಿಮೆಯಾದಂತೆ ಕಾಣ್ತಿದೆ. ಮಹಾಘಟ್ ಬಂಧನದ ವಿರುದ್ಧ ಎನ್‌ಡಿಎ 133 ಸ್ಥಾನಗಳಲ್ಲಿ ಜೆಡಿಯು 97ನೇ ಸ್ಥಾನದಲ್ಲಿದೆ. ಆದರೆ ಎನ್‌ಡಿಎಯೊಳಗಿನ ಬಿಜೆಪಿ 72ನೇ ಸ್ಥಾನದಲ್ಲಿದ್ದರೆ ಜೆಡಿಯು 54ನೇ ಸ್ಥಾನದಲ್ಲಿ ಉಳಿದಿದೆ.
ಎನ್‌ಡಿಯಲ್ಲಿ ಬಿಜೆಪಿ, ಜೆಡಿಯು, ಮಾಜಿ ಸಿಎಂ ಜಿತಿನ್‌ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮಿ ಮೋರ್ಚಾ ಹಾಗೂ ಮುಕೇಶ್ ಸಾಹ್ನಿಯವರ ವಿಕಾಸಶೀಲ ಇನ್ಸಾನ್ ಪಾರ್ಟಿ ಇವೆ. ಮಹಾ ಘಟಬಂಧನ್ ನಲ್ಲಿ ಆರ್‌ಜೆಡಿ, ಕಾಂಗ್ರೆಸ್, ಸಿಪಿಐ, ಸಿಪಿಐ, ಸಿಪಿಐ ಇವೆ. ಇನ್ನೂ ಈಗಾಗಲೇ ಎನ್ ಡಿಎ ಮುಂಚೂಣಿಯಲ್ಲಿದ್ದು, ಬಹುತೇಕ ಎನ್ ಡಿಎ ಅಧಿಕಾರದ ಚುಕ್ಕಾಣಿ ಹಿಡಿಯುವುದು ಪಕ್ಕಾ ಆಗಿದೆ. ಆದರೆ ಅಧಿಕೃತವಾಗಿ ತಡರಾತ್ರಿ ಸ್ಪಷ್ಟ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. 243 ಸದಸ್ಯ ಬಲದ ವಿಧಾನಸಭೆ ಪೈಕಿ ಗೆಲುವಿಗೆ 122 ಸೀಟುಗಳ ಅವಶ್ಯಕತೆ ಇದೆ. ಪ್ರಮುಖ ಮೈತ್ರಿಕೂಟಗಳಾದ ಎನ್‌ಡಿಎ ಹಾಗೂ ಮಹಾ ಘಟಬಂಧನ್ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿದೆ.
‘ಇವಿಎಂ’ನತ್ತ ಬೊಟ್ಟು ಮಾಡುವುದನ್ನ ಬಿಡಿ : ‘ಕೈ’ ನಾಯಕರಿಗೆ ಕಾರ್ತಿ ಚಿದಂಬರಂ ಬುದ್ದಿವಾದ..!
Bihar Assembly election
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel