BIHAR ELECTION
ಚುನಾವಣೆ ಸೋತ ಬಳಿಕ ಸಿಹಿ ಚೆಲ್ಲಿದ್ರಂತೆ RJD ಕಾರ್ಯಕರ್ತರು : ಫ್ಯಾಕ್ಟ್ ಚೆಕ್ ನಲ್ಲಿ ಬಯಲಾಯ್ತು ಅಸಲಿಯತ್ತು..!
ಬಿಹಾರ: 2020 ರ ಸಾಲಿನ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್ ಜೆ ಡಿ ಎನ್ ಡಿ ಎ ನಡುವೆ ನೆಕ್ ಟು ನೆಕ್ ಫೈಟ್ ಏರ್ಪಟ್ಟಿತ್ತು. ಗೆದ್ದೇ ಗೆಲ್ಲುತ್ತೇವೆ ಅನ್ನೋ ಭರವಸೆಯಲ್ಲಿದ್ದ ಆರ್ಜೆಡಿ ಹೀನಾಯ ಸೋಲನುಭವಿಸಿತ್ತು. ಎನ್ ಡಿ ಎ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಿತು. ಆದ್ರೆ ಚುನಾವಣಾ ಫಲಿತಾಂಶದ ವೇಳೆ ಆರ್ ಜೆಡಿ ಬಗೆಗಿನ ಕೆಲ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ್ದವು. ಅದೇಣೆಂದ್ರೆ ಚುನಾವಣೆಯಲ್ಲಿ ಸೋತ ಕಾರಣಕ್ಕೆ ಪಕ್ಷದ ಕಾರ್ಯಕರ್ತರು ಜನರಿಗೆ ಹಂಚಬೇಕಾಗಿದ್ದ ಸಿಹಿಯನ್ನು ಚರಂಡಿಗೆ ಚೆಲ್ಲಿದ್ದರು ಎಂಬ ಗುಮಾನಿ ಹರಿದಾಡಿತ್ತು. ಈ ಸಂಬಂಧ ಫೋಟೋಗಳು ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
`ರೈತರ ಧ್ವನಿ ಕೇಳದ ಬಿಜೆಪಿ | ಪ್ರತಿಭಟನೆ ಹತ್ತಿಕ್ಕಲು ಜಲ ಫಿರಂಗಿ ಬಳಕೆ’
ಆದರೆ ಇದೀಗ ಫ್ಯಾಕ್ಟ್ ಚೆಕ್ ನಲ್ಲಿ ಅದು ಸುಳ್ಳು ಎಂಬುದು ಸ್ಪಷ್ಟವಾಗಿದೆ. ಅಂದ್ಹಾಗೆ ಅಷ್ಟಕ್ಕೂ ಈ ಫೋಟೋ ಹರಿಯಾಣದ ಸಿರ್ಸಾದಲ್ಲಿನ ಸಿಹಿ ತಿಂಡಿ ಅಂಗಡಿದ್ದು ಎನ್ನಲಾಗಿದೆ. ಹೌದು ಅಂಗಡಿಯೊಂದರ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಬಳಕೆಗೆ ಯೋಗ್ಯವಲ್ಲದ 100 ಕಿಗ್ರಾಂನಷ್ಟು ರಸಗುಲ್ಲಾ ನಾಶಪಡಿಸಿದ್ದರು. ಅದೇ ಫೋಟೋವನ್ನ ೀ ವಿಚಾರವಾಗಿ ಜೋಡಿಸಿ ಹರಿಬಿಡಲಾಗಿತ್ತು ಎಂಬುದು ಇದೀಗ ಸ್ಪಷ್ಟವಾಗಿದೆ.
BIHAR ELECTION
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








