bihar liquor ban : ಮದ್ಯ ನಿಷೇಧ- ನಕಲಿ ಮದ್ಯ ಸೇವಿಸಿ 39 ಮಂದಿ ಸಾವು…
ಬಿಹಾರ ಸರ್ಕಾರ ಮದ್ಯ ನಿಷೇಧ ಮಾಡಿದ ನಂತರ 39 ಮಂದಿ ನಕಲಿ ಮಧ್ಯ ಸೇವಿಸಿ ಸಾವನ್ನಪ್ಪಿದ್ದಾರೆ. ಪ್ರತಿಕ್ಷಗಳಾದ ಬಿಜೆಪಿ ಸೇರಿದಂತೆ ಹಲವು ಪ್ರತಿ ಪಕ್ಷಗಳು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.
ಇದೇ ವೇಳೆ ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಸಿಎಂ ನಿತೀಶ್ ಕುಮಾರ್ ಮದ್ಯ ಸೇವಿಸಿದವರು ಖಂಡಿತ ಸಾವನ್ನಪ್ಪುತ್ತಾರೆ ಜನರೇ ಎಚ್ಚೆತ್ತುಕೊಳ್ಳಬೇಕು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಮಧ್ಯ ನಿಷೇಧ ಇಲ್ಲದಿದ್ದಾಗ್ಯೂ ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದರು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ಮದ್ಯ ನಿಷೇಧ ಮಾಡಿದ್ದರಿಂದ ನಕಲಿ ಮಾರಾಟ ಹೆಚ್ಚಾಗಿ ಕೆಲವು ಅದನ್ನ ಕುಡಿದು ಸತ್ತಿದ್ದಾರೆ. ಮದ್ಯಪಾನ ಕೆಟ್ಟ ಚಟ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
ಬಡವರನ್ನ ಹಿಡಿಯಬೇಡಿ ದಂದೇ ಮಾಡುತ್ತಿರುವವರನ್ನ ಹಿಡಿಯಿರಿ ಎಂದು ಪೊಲೀಸರಿಗೆ ತಿಳಿಸಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.
Bihar Liquor Ban: Liquor ban- 39 people died after drinking fake liquor…








