ತಂದೆಯ ಶವಸಂಸ್ಕಾರಕ್ಕೆ ಹೂ ತರಲು ಹೋದ ಮಗ ಸಾವು
ಕಾರವಾರ : ಬಸ್ ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರಸಿ ನಗರದ ಎಸ್ ಬಿಐ ಸರ್ಕಲ್ ನಲ್ಲಿ ನಡೆದಿದೆ.
34 ವರ್ಷದ ರವಿಚಂದ್ರ ವಡ್ಡರ್, 26 ವರ್ಷದ ಸುನೀಲ ಇಂದೂರ ಮೃತ ದುರ್ದೈವಿಗಳಾಗಿದ್ದಾರೆ. ಇವರು ಶಿರಸಿಯ ಗಣೇಶ ನಗರದ ನಿವಾಸಿಗಳೆಂದು ತಿಳಿದುಬಂದಿದೆ.
ರವಿಚಂತ್ರ ಅವರ ತಂದೆ ಹನುಮಂತಪ್ಪ ಇಂದು ಕೊನೆಯುಸಿರೆಳೆದಿದ್ದು, ಅವರ ಶವಸಂಸ್ಕಾರಕ್ಕಾಗಿ ರವಿಚಂದ್ರ ಮತ್ತು ಸುನೀಲ ಹೂ ತರಲು ಮಾರುಕಟ್ಟೆಗೆ ತೆರಳುತ್ತಿದ್ದರು.
ಈ ವೇಳೆ ಬಸ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದ್ದು. ಬೈಕ್ ನಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಗರ ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










