ಬೆಂಗಳೂರು : ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಸಂಘದ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ಸಮಿತಿಯ ವತಿಯಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಬೆಂಗಳೂರಿನ ಜಯನಗರದ ಶಾಲಿನಿ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೈಕ್ ಜಾಥಾ ಮೂಲಕ ಜಾಗೃತಿ ಮೂಡಿಸಲಾಯಿತ್ತು.
ಬೈಕ್ ಜಾಥಾಗೆ ಹಿರಿಯ ಲೆಕ್ಕ ಪರಿಶೋಧಕರಾದ ಎಚ್. ಸುಂದರೇಶ್ ಅವರು ಚಾಲನೆ ನೀಡಿದ್ರು.
ಇದನ್ನೂ ಓದಿ : ಬೆಂಗಳೂರು – ಮಂಗಳೂರು ಕೇಂದ್ರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ತಾತ್ಕಾಲಿಕ ನಿಲುಗಡೆ
ಜಯನಗರದ ಶಾಲಿನಿ ಮೈದಾನದಿಂದ ರಾಜಾಜಿನಗರದವರೆಗೆ ಈ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಬಳಿಕ ರಾಜಾಜಿನಗರದ ಬಾಲವನ ಉದ್ಯಾನವನ್ನು ಸ್ವಚ್ಛ ಮಾಡಲಾಯಿತ್ತು. ಸುಮಾರು 50ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.











