Bike Wheeling : ಡೆಡ್ಲಿ ವೀಲ್ಹಿಂಗ್ ಮಾಡ್ತಿದ್ದವನ ಬಂಧಿಸಿದ ಪೊಲೀಸರು…
ಡೆಡ್ಲಿ ವೀಲ್ಹಿಂಗ್ ಮಾಡ್ತಿದ್ದವನ ಬಂಧಿಸಿದ ಪೊಲೀಸರು…
ಏರ್ ಪೋರ್ಟ್ ರಸ್ತೆಯಲ್ಲಿ ಡೆಡ್ಲಿ ವಿಲಿಂಗ್ ಮಾಡುತ್ತಿದ್ದ ಪುಂಡನನ್ನ ಆರ್ ಟಿ ನಗರ ಸೆರೆಹಿಡಿದಿದ್ದಾರೆ.. ಆರ್ ಟಿ ನಗರ ಪೊಲೀಸರ ಕಾರ್ಯಾಚರಣೆಯಲ್ಲಿ ಈ ಪುಂಡ ಸಿಕ್ಕಿಬಿದ್ದಿದ್ದಾನೆ.. 20 ವರ್ಷದ ವಿಜಯ್ ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.
ಹೋಂಡಾ ಡಿಯೋ ಬೈಕ್ ನಲ್ಲಿ ಈತ ಅಪಾಯಕಾರಿ ವೀಲಿಂಗ್ ಮಾಡ್ತಿದ್ದ. ಮೇಖ್ರಿ ಅಂಡರ್ ಪಾಸ್ ಹಾಗೂ ಸಿಬಿಐ ರಸ್ತೆಯಲ್ಲಿ ಡೆಡ್ಲಿ ವೀಲಿಂಗ್ ಜೊತೆಗೆ ಬೈಕ್ ಡ್ರಾಗ್ ರೇಸ್ ಮಾಡ್ತಿದ್ದ.
ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದರು.. ರೀಲ್ಸ್ ಗಾಗಿ ವೀಲಿಂಗ್ ವಿಡಿಯೋ ಮಾಡಲಾಗಿತ್ತು.. ಅಷ್ಟೇ ಅಲ್ಲ ಇದಕ್ಕಾಗಿ ವಿಜಯ್ ಇದಕ್ಕಾಗಿ ಡಿಯೋ ಬೈಕ್ ಆಲ್ಟರ್ ಮಾಡಿದ್ದ ಎನ್ನಲಾಗಿದೆ.. INTSTAGRAM ಅಕೌಂಟ್ ಆದರಿಸಿ ಪುಂಡನ ಬಂಧಿಸಲಾಗಿದೆ.









