ಬಾಲಿವುಡ್ ನ ಸ್ಟಾರ್ ನಟಿ ಬಿಪಾಶಾ ಬಸು ಹಾಗೂ ಪತಿ ಕರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಜೋಡಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಲೋನ್ ಸಿನಿಮಾದಲ್ಲಿ ಬಿಪಾಶಾ ಮತ್ತು ಕರಣ್ ಇಬ್ಬರಿಗೂ ಪರಿಚಯವಾಗಿತತ್ತು. ಈ ಸಿನಿಮಾ ಮೂಲಕ ಗೆಳೆತನ ಬೆಳೆದು ಇಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆನಂತರ ಇಬ್ಬರೂ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.