ಬಾಲಿವುಡ್ ನ ಸ್ಟಾರ್ ನಟಿ ಬಿಪಾಶಾ ಬಸು ಹಾಗೂ ಪತಿ ಕರಣ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.. ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಮೊದಲ ಮಗುವಿನ ನಿರೀಕ್ಷೆಯಲ್ಲಿರೋದಾಗಿ ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಹಂಚಿಕೊಂಡಿದ್ದರು..
ಇದೀಗ ಬೋಲ್ಡ್ ಅಂಡ್ ಕ್ಯೂಟ್ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿರುವ ದಂಪತಿ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ..
ಈ ಜೋಡಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಲೋನ್ ಸಿನಿಮಾದಲ್ಲಿ ಬಿಪಾಶಾ ಮತ್ತು ಕರಣ್ ಇಬ್ಬರಿಗೂ ಪರಿಚಯವಾಗಿತತ್ತು. ಈ ಸಿನಿಮಾ ಮೂಲಕ ಗೆಳೆತನ ಬೆಳೆದು ಇಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಆನಂತರ ಇಬ್ಬರೂ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿರುವ ಬಿಪಾಷಾ “ಹೊಸ ಸಮಯ, ಹೊಸ ಹಂತ, ಹೊಸ ಬೆಳಕು ನಮ್ಮ ಜೀವನಕ್ಕೆ ಮತ್ತೊಂದು ವಿಶಿಷ್ಟ ಛಾಯೆಯನ್ನು ಸೇರಿಸುತ್ತದೆ. ನಾವು ಹಿಂದೆಂದಿಗಿಂತಲೂ ಸ್ವಲ್ಪ ಹೆಚ್ಚು ಸಂಪೂರ್ಣವಾಗಿದ್ದೇವೆ. ನಾವು ಈ ಜೀವನವನ್ನು ಪ್ರತ್ಯೇಕವಾಗಿ ಪ್ರಾರಂಭಿಸಿದ್ದೇವೆ ಮತ್ತು ನಂತರ ನಾವು ಒಬ್ಬರನ್ನೊಬ್ಬರು ಭೇಟಿಯಾಗಿದ್ದೇವೆ ಮತ್ತು ಅಂದಿನಿಂದ ನಾವು ಇಬ್ಬರಾಗಿದ್ದೇವೆ. ಇಬ್ಬರಿಗೆ ಮಾತ್ರ ತುಂಬಾ ಪ್ರೀತಿ, ನೋಡಲು ನಮಗೆ ಸ್ವಲ್ಪ ಅನ್ಯಾಯವಾಗಿದೆ ಎಂದು ತೋರುತ್ತದೆ…ಇಷ್ಟು ಬೇಗ, ಒಮ್ಮೆ ಇಬ್ಬರಾಗಿದ್ದ ನಾವು ಈಗ ಮೂವರಾಗುತ್ತೇವೆ, ”ಎಂದು ಬಿಪಾಶಾ ಮತ್ತು ಕರಣ್ ಫೋಟೋ ಜೊತೆಗೆ ಬರೆದುಕೊಂಡಿದ್ದಾರೆ..