ರಾಜ್ಯದಲ್ಲಿ ಶುರುವಾದ ಹಕ್ಕಿಜ್ವರದ ಆತಂಕ | ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಪ್ರಕರಣ ಏರಿಕೆ – Saaksha Tv
ಬೆಳಗಾವಿ: ನೆರೆ ರಾಜ್ಯದಲ್ಲಿ ಹಕ್ಕಿಜ್ವರದ ಪ್ರಕರಣಗಳ ಸಂಖ್ಯೆ ಏರುತ್ತಿದ್ದು, ಬೆಳಗಾವಿ ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ.
ಬಿಹಾರ, ಮಹಾರಾಷ್ಟ್ರಸೇರಿ ಹಲವು ರಾಜ್ಯಗಳಲ್ಲಿ ಹಕ್ಕಿಜ್ವರದ ಆತಂಕ ಕಾಣಿಸಿಕೊಂಡಿದೆ. ಥಾಣೆ ಮತ್ತು ಪಾಲ್ಘರ್ ಸೇರಿ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಹಕ್ಕಿಜ್ವರದ ಆತಂಕ ಕಾಣಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆ ಹಾಗೂ ರಾಜ್ಯದ ಹಲವು ಜಿಲ್ಲೆಗಳ ರೈತರಲ್ಲಿ ಆತಂಕ ಶುರುವಾಗಿದೆ.
ಪ್ರಸ್ತುತ ದೇಶದಲ್ಲಿ ಕೋರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಇದರಿಂದ ಜನರು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ ಈಗ ದೇಶದಲ್ಲಿ ಮತ್ತೊಂದು ಭೀತಿ ಎದುರಾಗಿದ್ದು ನೆರೆಯ ಮಹಾರಾಷ್ಟ್ರದಲ್ಲಿ ಹಕ್ಕಿಜ್ವರದ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.
ಈ ಸೋಂಕಿನಿಂದ ಕಿಲೋಮೀಟರ್ ವ್ಯಾಪ್ತಿಯೊಳಗೆ 25,000 ಕ್ಕೂ ಹೆಚ್ಚು ಪಕ್ಷಿಗಳು ಸಾಯುತ್ತಿವೆ. ಬಿಹಾರದ ಜಮೀನೊಂದರಲ್ಲಿರುವ ಕೋಳಿ ಸಾಕಣೆ ಕೇಂದ್ರವೊಂದರಲ್ಲಿ ಹಕ್ಕಿ ಜ್ವರ ಪತ್ತೆಯಾಗಿದ್ದು, ಅದರಲ್ಲಿದ್ದ 3,859 ಕೋಳಿಗಳ ಪೈಕಿ 787 ಕೋಳಿಗಳು ಮೃತಪಟ್ಟಿವೆ.
ಇನ್ನು ಮಹಾರಾಷ್ಟ್ರದಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ಪ್ರತಿನಿತ್ಯ ಮಹಾರಾಷ್ಟ್ರದ ಮೂಲಕ ಸಾವಿರಾರು ಸಂಖ್ಯೆಯ ಪ್ರಯಾಣಿಕರು ರಾಜ್ಯ ಪ್ರವೇಶಿಸುತ್ತಾರೆ. ಹೀಗಾಗಿ ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಜಿಲ್ಲೆ ಹಾಗೂ ಇನ್ನೀತರ ಜಿಲ್ಲೆಗಳಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದಾರೆ
ಕೋಳಿ ಸೇರಿ ಹಲವು ರೀತಿಯ ಪಕ್ಷಗಳಿಗೆ ಬರುವ ಜ್ವರವೇ ಹಕ್ಕಿ ಜ್ವರವಾಗಿದೆ. ಇವುಗಳಲ್ಲಿಯೇ ಎಚ್5ಎನ್1, ಎಚ್7ಎನ್9, ಎಚ್5ಎನ್6 ಸೇರಿ ಹಲವು ರೀತಿಯ ವೈರಾಣುಗಳಿದ್ದು, ಮಾನವನಿಗೆ ಹರಡುವ ಸಾಧ್ಯತೆ ಇರುವುದರಿಂದ ಹಾಗೂ ಈಗಾಗಲೇ ಹಕ್ಕಿ ಜ್ವರದಿಂದ ಜಗತ್ತಿನಾದ್ಯಂತ ಸಾವಿರಾರು ಜನ ಮೃತಪಟ್ಟಿರುವುದರಿಂದ ಇವುಗಳ ಕುರಿತು ಆತಂಕ ಜಾಸ್ತಿ ಇದೆ.
ಇನ್ನು ಮನಷ್ಯರು ಆ ವೈರಸ್ ಸಂಪರ್ಕಕ್ಕೆ ಬಂದರೆ ಇದು ಮನುಷ್ಯರು ಮತ್ತು ಇತರ ಪ್ರಾಣಿಗಳಿಗೆ ಸುಲಭವಾಗಿ ಹರಡುತ್ತದೆ. ಆದಾಗ್ಯೂ, ಈ ವೈರಸ್‌ಗಳು ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಮರ್ಥ್ಯವನ್ನು ಹೊಂದಿಲ್ಲ.
ರೋಗದ ಲಕ್ಷಣಗಳು
ಎವಿಯನ್ ಇನ್‌ಫ್ಲುಯೆಂಜಾ ವೈರಾಣು ತಗುಲಿದ 2 ರಿಂದ 5 ದಿನಗಳವರೆಗೆ ರೋಗಲಕ್ಷಣವನ್ನು ಕಾಣಿಸುವುದಿಲ್ಲ. ಆದರೆ ಬಳಿಕ 17 ದಿನಗಳವರೆಗೆ ಜ್ವರದಲ್ಲಿ ಬಹುವಾಗಿ ಎಚ್5ಎನ್1 ಮಾದರಿಯ ಜ್ವರ ಜಾಸ್ತಿಯಾಗಿ ಕಂಡುಬರುತ್ತದೆ.
ಈ ವೈರಾಣು ಮನುಷ್ಯನಿಗೆ ಹರಡಿದರೆ ವಾಕರಿಕೆ, ಅತಿಸಾರ, ಕೆಮ್ಮು, ಜ್ವರ, ತಲೆನೋವು, ಉಸಿರಾಟದ ಸಮಸ್ಯೆ, ಮೂಗು ಸೋರುವಿಕೆ, ಗಂಟಲು, ಸ್ನಾಯುನೋವು ಹಾಗೂ ಅಸ್ವಸ್ಥತೆ ಲಕ್ಷಣಗಳು ಕಂಡು ಬರುತ್ತವೆ. ಇನ್ನು ರೋಗಿಗಳಿಗೆ ಮತ್ತು ವೃದ್ಧರಲ್ಲಿ ಈ ಸೋಂಕು ಮಾರಣಾಂತಿಕ ಕೂಡ ಎನಿಸಬಲ್ಲದು ಎಂದು ತಜ್ಞವೈದ್ಯರು ಎಚ್ಚರಿಸಿದ್ದಾರೆ.
ವೈಯಕ್ತಿಕವಾಗಿ ನೈರ್ಮಲ್ಯ ಕಾಪಾಡಿಕೊಳ್ಳುವುದು
ಮುಕ್ತ ಮಾರುಕಟ್ಟೆಯಲ್ಲಿ ಮಾಂಸ ಖರೀದಿಸದಿರುವುದು
ಕೋಳಿ ಮಾಂಸವನ್ನು ಸ್ವಚ್ಛಗೊಳಿಸುವಾಗ ಮತ್ತು ಸಿದ್ಧಪಡಿಸುವಾಗ ಕೈಗವಸುಗಳನ್ನು ಧರಿಸಿ
ಕೋಳಿ ಫಾರಂಗಳಿಗೆ ತೆರಳಿ ಖರೀದಿ, ಅವುಗಳನ್ನು ಮುಟ್ಟದಿರುವುದು
ಲಕ್ಷಣ ಕಾಣಿಸಿಕೊಳ್ಳುತ್ತಲೇ ವೈದ್ಯರ ಬಳಿ ತೆರಳುವುದು
ಅರೆ ಬೆಂದ ಕೋಳಿ ಮಾಂಸ, ಮೊಟ್ಟೆ ಸೇವಿಸದಿರುವುದು
ರೆಸ್ಟೋರೆಂಟ್ ನಿಂದ ತಾತ್ಕಾಲಿಕವಾಗಿ ಚಿಕನ್ ಖಾದ್ಯ ಆರ್ಡರ್ ಮಾಡುವುದನ್ನು ತಪ್ಪಿಸಿ








