ಹಕ್ಕಿ ಜ್ವರ ಹೇಗೆ ಹರಡುತ್ತೆ..? ಮುಂಜಾಗ್ರತಾ ಕ್ರಮಗಳೇನು..?
ಹಕ್ಕಿ ಜ್ವರ ಸಂಪೂರ್ಣ ಮಾಹಿತಿ..
ಕೊರೊನಾ ಕಾಟದ ಮಧ್ಯೆ ರಾಜಸ್ಥಾನ, ಮಧ್ಯಪ್ರದೇಶ, ಪಂಜಾಬ್, ಹರಿಯಾಣ, ಕೇರಳ ಸೇರಿದಂತೆ ದೇಶದ ಹಲವಾರು ರಾಜ್ಯಗಳಲ್ಲಿ ಈಗ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಇದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಭಾರತದಲ್ಲಿ ಹಕ್ಕಿ ಜ್ವರ ಮೊದಲು ಯಾವಾಗ ಪತ್ತೆಯಾಯ್ತು, ಈ ವೈರಸ್ ನಿಯಂತ್ರಣ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.
ಹಕ್ಕಿ ಜ್ವರ ಭಾರತದಲ್ಲಿ 2005 ಫೆಬ್ರವರಿ 18 ರಂದು ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಲ್ಲಿ ಮೊದಲು ಪತ್ತೆಯಾಗಿತ್ತು. ನಂತರ ಮಾರ್ಚ್, 2006ರಲ್ಲಿ ಮಧ್ಯಪ್ರದೇಶದಲ್ಲಿ ಎರಡನೇ ಬಾರಿಗೆ ಈ ಸೋಂಕು ಕಂಡು ಬಂದಿತು. ಈ ಅವಧಿಯಲ್ಲಿ ಈ ಸೋಂಕು ಏಶಿಯಾ, ಯೂರೋಪ್ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಸುಮಾರು 400 ಜನರನ್ನು ಬಲಿ ತೆಗೆದುಕೊಂಡು ಲಕ್ಷಾಂತರ ಜನರನ್ನು ರೋಗಗ್ರಸ್ಥನ್ನಾಗಿ ಮಾಡಿತ್ತು.
ಈ ಸೋಂಕಿನ ನಿಯಂತ್ರಣ ಕಾರ್ಯಾಚರಣೆಯಲ್ಲಿ ಸೋಂಕಿ ತಲುಗುಲಿದ್ದ ಒಟ್ಟು 10.44 ಲಕ್ಷ ಪಕ್ಷಿಗಳನ್ನು ಆರಿಸಿ ಸಾಯಿಸಲಾಯಿತು. ಆಗಸ್ಟ್ 2006ರಲ್ಲಿ ದೇಶವು ಸೋಂಕಿನಿಂದ ಮುಕ್ತಗೊಂಡಿತು. ಆದರೆ 2017 ಜುಲೈನಲ್ಲಿ ಮಣಿಪುರ ಹಾಗೂ 2008ರಲ್ಲಿ ಪಶ್ಚಿಮ ಬಂಗಾಳ ಮತ್ತು ತ್ರಿಪುರದಲ್ಲಿ ಮತ್ತೆ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಆ ಸಂದರ್ಭದಲ್ಲಿ ಕ್ರಮವಾಗಿ 3.39 ಲಕ್ಷ ಹಾಗೂ 61.62 ಲಕ್ಷ ಪಕ್ಷಿಗಳನ್ನು ಕೊಲ್ಲಲಾಯಿತು. ಇದಾದ ಬಳಿಕ ಪ್ರತಿ ರಾಜ್ಯಗಳಲ್ಲಿ ಆಗಾಗ ಹಕ್ಕಿ ಜ್ವರ ಪತ್ತೆಯಾಗುತ್ತಿದೆ.
12 ನೇ ತರಗತಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾದ ಎಲ್ಲ ಬಾಲಕಿಯರಿಗೂ ಸ್ಕೂಟರ್ !
ಕಳೆದ ವರ್ಷ 2020ರ ಜನವರಿಯಲ್ಲಿ ಕೇರಳದಲ್ಲಿ ಮಾರ್ಚ್ ನಲ್ಲಿ ಬಿಹಾರದಲ್ಲಿ ಈ ಸೋಂಕು ಕಾಣಿಸಿಕೊಂಡಿತ್ತು. ಈ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಪಕ್ಷಿಗಳು ಹಕ್ಕಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿವೆ. ಇದೀಗ ಮಧ್ಯಪ್ರದೇಶ, ಹರಿಯಾಣದಲ್ಲಿ ಈ ಸೋಂಕು ಕಾಣಿಸಿಕೊಂಡಿದ್ದು, ಸಾವಿರಾರು ಕಾಗೆಗಳು ಮತ್ತು ಕೋಳಿಗಳು ಸಾವನ್ನುಪ್ಪುತ್ತಿವೆ. 
ಹಕ್ಕಿ ಜ್ವರ ಎಂದರೇನು?
ಪಕ್ಷಿಗಳಲ್ಲಿ ಏವಿಯನ್ ಇನ್ಫ್ಲುಯೆನ್ಸ್ ಟೈಪ್ ಎ ವೈರಸ್ ಗಳಿಂದ ಉಂಟಾಗುವ ಹಕ್ಕಿ ಜ್ವರ ಸಾಂಕ್ರಾಮಿಕ ರೋಗವಾಗಿದೆ. ಇದು ಸೌಮ್ಯದಿಂದ ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು ಅಥವಾ ಪಕ್ಷಿಗಳಲ್ಲಿ ಹಠಾತ್ ಸಾವಿಗೂ ಕಾರಣವಾಗಬಹುದು. ಈ ಸೋಂಕಿಗೆ ಮುಖ್ಯ ಕಾರಣ ಎಚ್5ಎನ್1 ಎಂಬ ಹೆಸರಿನ ವೈರಸ್. ಇದೊಂದು ತೀವ್ರ ಸಾಂಕ್ರಾಮಿಕ ಪಿಡುಗುಗಾಗಿದೆ.
ಸಾಮಾನ್ಯವಾಗಿ ನಮ್ಮ ದೇಶೀಯ ಕೋಳಿಗಳು ದುರ್ಬಲವಾಗಿರುತ್ತವೆ. ಹೀಗಾಗಿ ಅವುಗಳಿಗೆ ಸುಲಭವಾಗಿ ಸೋಂಕು ತಗಲುತ್ತವೆ.
ಇನ್ನು ಸುಲಭವಾಗಿ ಮನುಷ್ಯರಿಗೆ ಈ ಸೋಂಕು ತಗುಲಿಸುವುದಿಲ್ಲ. ಆದರೆ, ಕೆಲವೊಮ್ಮೆ ಸೋಂಕಿತ ಕೋಳಿಗಳೊಂದಿಗೆ ಸಂಪರ್ಕ ಹೊಂದಿರುವ ಮನುಷ್ಯರಿಗೆ ಈ ಸೋಂಕು ಹರಡಬಹುದು. 2005-2006 ರಲ್ಲಿ ಈ ರೋಗಾಣು ಏಶಿಯಾ, ಯೂರೋಪ್ ಮತ್ತು ಆಫ್ರಿಕಾ ಪ್ರದೇಶಗಳಲ್ಲಿ ಸುಮಾರು 400 ಜನರನ್ನು ಬಲಿ ತೆಗೆದುಕೊಂಡು ಲಕ್ಷಾಂತರ ಜನರನ್ನು ರೋಗಗ್ರಸ್ಥನ್ನಾಗಿ ಮಾಡಿತ್ತು.
ಸೋಂಕಿತ ಪಕ್ಷಿಗಳ ಲಕ್ಷಣಗಳೇನು..?
ಹಕ್ಕಿ ಜ್ವರ ಕಾಣಿಸಿಕೊಂಡ ಪಕ್ಷಿಗಳಲ್ಲಿ ಶಕ್ತಿ ಮತ್ತು ಹಸಿವಿನ ಕೊರತೆ ಕಾಣುತ್ತೆ. ಕೆಮ್ಮು, ಸೀನುವಿಕೆ ಹಾಗೂ ಮೂಗಿನಲ್ಲಿ ದ್ರವ ಬರುವುದು, ತಲೆ ಮತ್ತು ಕಾಲುಗಳು ಊದಿಕೊಳ್ಳುತ್ತವೆ
ಮನುಷ್ಯರಲ್ಲಿ ಕಂಡು ಬರುವ ಲಕ್ಷಣಗಳೇನು..?
ಹಕ್ಕಿ ಜ್ವರದ ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ. ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು ಕಾಯಿಲೆಯ ಲಕ್ಷಣಗಳು. ಎಕ್ಸ್‍ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ.
ಪಕ್ಷಿಗಳ ನಡುವೆ ಹಕ್ಕಿ ಜ್ವರ ಹೇಗೆ ಹರಡುತ್ತದೆ..?
ಸೋಂಕಿತ ಪಕ್ಷಿಗಳಿಂದ ಮೂಗಿನ ಮತ್ತು ಉಸಿರಾಟದ ನೇರ ಸಂಪರ್ಕದಿಂದ, ಪಕ್ಷಿಯ ಮಲ-ಮೂತ್ರವನ್ನು ನೇರ ಮುಟ್ಟುವುದರಿಂದ ಹಕ್ಕಿ ಜ್ವರ ಹರಡುತ್ತೆ.
ಆಹಾರ ಮತ್ತು ನೀರಿನ ಮಾಲಿನ್ಯ, ಕಲುಷಿತ ಉಪಕರಣಗಳ ಬಳಕೆಯಿಂದಲೂ ಈ ಸೋಂಕು ಹರಡುತ್ತದೆ.
ಸೋಂಕಿನಿಂದ ಸಾಕು ಪಕ್ಷಿಗಳನ್ನು ಸುರಕ್ಷಿತವಾಗಿಡುವುದು ಹೇಗೆ?
ಸಾಕು ಪಕ್ಷಿಗಳನ್ನು ಕಾಡು ಪಕ್ಷಿಗಳು ಮತ್ತು ಅವುಗಳ ಹಿಕ್ಕೆಗಳಿಂದ ದೂರವಿಡಬೇಕು. ಸೂಕ್ಷ್ಮ ಬಲೆ ಹೊಂದಿರುವ ಆವರಣವನ್ನು ಪಂಜರದ ಮೇಲೆ ಬಳಸಬೇಕು. ರೋಗ ಲಕ್ಷಣ ಕಂಡುಬಂದಲ್ಲಿ ಬೇರೆ ಪಕ್ಷಿಗಳನ್ನು ಕನಿಷ್ಠ 21 ದಿನಗಳವರೆಗೆ ದೂರವಿರಿಸಬೇಕು.
ಸಾಕು ಹಕ್ಕಿ ಕಾಯಿಲೆಗೊಳಗಾದರೆ ಅಥವಾ ಸತ್ತರೆ ಏನು ಮಾಡಬೇಕು?
ಮನೆಯಲ್ಲಿರುವ ಪಕ್ಷಿಗಳು ಅನಾರೋಗ್ಯಕ್ಕೆ ತುತ್ತಾದರೆ ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಕೊಡಿಸಬೇಕು. ಬಳಿಕ ಆರೋಗ್ಯಕರ ಪಕ್ಷಿಗಳಿಂದ ರೋಗಗ್ರಸ್ತ ಪಕ್ಷಗಳನ್ನು ದೂರವಿಡಬೇಕು. ಇನ್ನು ಕಾಲ ಕಾಲಕ್ಕೆ ಪಂಜರವನ್ನು ತೊಳೆದು ಸೋಂಕು ರಹಿತಗೊಳಿಸುತ್ತಿರಬೇಕು. ಒಂದು ವೇಳೆ ಸೋಂಕಿನಿಂದ ಮೃತಪಟ್ಟರೇ ಪಕ್ಷಿಗಳ ಮೃತದೇಹವನ್ನು ಪ್ಲಾಸ್ಟಿಕ್ ಚೀಲದಲ್ಲಿರಿಸಿ, ಬಿಗಿಯಾಗಿ ಕಟ್ಟಿ ಬಳಿಕ ವಿಲೇವಾರಿ ಮಾಡಬೇಕು.
ನಾವು ತೆಗೆದುಕೊಳ್ಳಬೇಕಾದ ಮುನ್ನೆಚರಿಕಾ ಕ್ರಮಗಳೇನು..?
ಪಂಜರವನ್ನು ತೊಳೆಯುವ ವೇಳೆ ಕಡ್ಡಾಯವಾಗಿ ಮಾಸ್ಕ್ ಮತ್ತು ಗ್ಲೌಸ್ ಧರಿಸಿರಬೇಕು. ಅದೇ ರೀತಿ ಸತ್ತ ಪಕ್ಷಿಗಳನ್ನು ವಿಲೇವಾರಿ ಮಾಡುವ ಸಂದರ್ಭದಲ್ಲೂ ಕೂಡ ಮಾಸ್ಕ್ ಮತ್ತು ಗ್ಲೌಸ್ ಧರಿಸಿರಬೇಕು. ಪಕ್ಷಿ ಮತ್ತು ಅದರ ಪಂಜರವನ್ನು ಕ್ಲೀನ್ ಮಾಡಿದ ಬಳಿಕ ಸೋಪ್ ನಿಂದ ಕೈಗಳನ್ನು ಚೆನ್ನಾಗಿ ಕ್ಲೀನ್ ಮಾಡಿಕೊಳ್ಳಬೇಕು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









