ರಾಷ್ಟ್ರ ರಾಜಧಾನಿಯಲ್ಲಿ ಹಕ್ಕಿ ಜ್ವರದ ಆತಂಕ : ಪ್ರಮುಖ ನಗರಗಳಲ್ಲಿ ಮೃತಪಟ್ಟಿದ್ದ ಪಕ್ಷಿಗಳಲ್ಲಿ ‘ಹಕ್ಕಿ ಜ್ವರ’ ದೃಢ..!
ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ, ಬ್ರಿಟನ್ ಕೊರೊನಾ ಆತಂಕದ ಬೆನ್ನಲ್ಲೇ ಹಕ್ಕಿ ಜ್ವರದ ಕಾಟ ಶುರುವಾಗಿದೆ. ಹಲವು ರಾಜ್ಯಗಳಲ್ಲಿ ಈ ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಹಲವಾರು ಪಕ್ಷಿಗಳು ಬಲಿಯಾಗ್ತಿವೆ.. ಇತ್ತ ರಾಷ್ಟ್ರ ರಾಜಧಾನಿಗೂ ಹಕ್ಕಿ ಜ್ವರ ಎಂಟ್ರಿಯಾಗಿರೋದು ಪಕ್ಕಾ ಆಗಿದೆ.
ಕೆಜಿಎಫ್ 2 ಟೀಸರ್ ನಲ್ಲಿ ಪವರ್ ಫುಲ್ ನಲ್ಲಿ ಲುಕ್ ನಲ್ಲಿ ಕಾಣಿಸಿಕೊಂಡ ಈ ನಟಿ ಯಾರು…? ಪಾತ್ರ ಯಾವುದು…?
ದೆಹಲಿಯ ಹಲವು ಪ್ರದೇಶಗಳಲ್ಲಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದ ಪಕ್ಷಿಗಳಿಗೆ ಹಕ್ಕಿ ಜ್ವರ ತಗುಲಿರುವುದು ದೃಢಪಟ್ಟಿದೆ. ಸಂಜಯ್ ಸರೋವರದಲ್ಲಿ 10 ಬಾತುಕೋಳಿ ಮೃತಪಟ್ಟಿತ್ತು. ಮಯೂರ್ ವಿಹಾರದ ಮೂರನೇ ಹಂತದಲ್ಲಿ 50 ಕಾಗೆಗಳು ಸಾವಿಗೀಡಾಗಿತ್ತು. ಈ ಪಕ್ಷಿಗಳ ಸಾವಿಗೆ ಕಾರಣವನ್ನು ಪತ್ತೆ ಹಚ್ಚಲು ಮೂರು ಬಾತುಕೋಳಿಯ ಮಾದರಿ, ನಾಲ್ಕು ಕಾಗೆಗಳ ಮಾದರಿ ಸೇರಿದಂತೆ ದ್ವಾರಕದಲ್ಲಿ ಮೃತಪಟ್ಟಿದ್ದ ಒಂದು ಕಾಗೆಯ ಮಾದರಿಯನ್ನು ಭೋಪಾಲ್ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.
ಅಮೆರಿಕದ ಇತಿಹಾಸದಲ್ಲೇ ಟ್ರಂಪ್ ಅತ್ಯಂತ ಕೆಟ್ಟ ಅಧ್ಯಕ್ಷ
ಭೋಪಾಲ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದ 8 ಮಾದರಿಗಳಲ್ಲೂ ಹಕ್ಕಿ ಜ್ವರ ದೃಢಪಟ್ಟಿದೆ. ಕೆಲವು ಮಾದರಿಗಳನ್ನು ಜಲಂಧರ್ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅವುಗಳ ವರದಿ ಇನ್ನೂ ಬರಬೇಕಿದೆ. ದೆಹಲಿ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಮುನ್ನೆಚ್ಚರಿಕಾ ಕ್ರಮವಾಗಿ ಸಂಜಯ್ ಸರೋವರ, ಹೌಜ್ ಖಾಸ್ ಪಾರ್ಕ್, ದ್ವಾರಕದ ಸೆಕ್ಟರ್ 9 ಪಾರ್ಕ್, ಹಸ್ತಾಲ್ ಪಾರ್ಕ್ಗಳನ್ನು ಮುಚ್ಚಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel