ಬ್ರಹ್ಮಗಿರಿ ವನ್ಯಧಾಮದಲ್ಲಿ ಪಕ್ಷಿ ವೀಕ್ಷಣೆ..!
ಕೊಡಗು: ಕತ್ತಿಗೆ ಬೈನಾಕ್ಯುಲರ್, ಹೈ ರೆಸೋಲ್ಯೂಷನ್ ಕ್ಯಾಮರಾ, ಜೊತೆಗೆ ಒಂದಷ್ಟು ಲೆನ್ಸು, ಬೆನ್ನಿಗೊಂದು ಬ್ಯಾಗು.. ಇದು ಕೊಡಗು ವನ್ಯಜೀವಿ ಸಂಘದ ವತಿಯಿಂದ ಕರ್ನಾಟಕ ಅರಣ್ಯ ಇಲಾಖೆ ಸಹಕಾರದೊಂದಿಗೆ ಬ್ರಹ್ಮಗಿರಿ ವನ್ಯಜೀವಿ ಅಭಯಾರಣ್ಯದ ಹೊರವಲಯದಲ್ಲಿ ಏರ್ಪಡಿಸಿದ್ದ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.
ಕೇವಲ 25 ಮಂದಿಗೆ ಸೀಮಿತವಾಗಿದ್ದ ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪಕ್ಷಿ ಪ್ರಿಯರು ಆಗಮಿಸಿದ್ದರು.
ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ಬ್ರಹ್ಮಗಿರಿ ಅಭಯಾರಣಕ್ಕೆ ಚಳಿಗಾಲದಲ್ಲಿ ಆಗಮಿಸುವ ಹಾಗು ಸ್ಥಳೀಯ ಹಕ್ಕಿಗಳಾದ ನೀಲಗಿರಿ ರಾಕ್ ಟ್ರಸ್, ಸಪೆರ್ಂಟ್ ಈಗಲ್, ಭೀಮರಾಜ, ಪ್ಯಾಡಿ ಟಿಟ್, ಬ್ಲೂ ಕ್ಯಾಪ್ ರಾಕ್ ಟ್ರಸ್, ಮಲಬಾರ್ ಟ್ರೋಗನ್, ಹೀಗೆ ಹತ್ತು ಹಲವು ಹಕ್ಕಿಗಳು ಪಕ್ಷಿ ಪ್ರೇಮಿಗಳ ಕ್ಯಾಮರಾದಲ್ಲಿ ಸೆರೆಯಾದವು.
ಕೊಡಗಿನ ವಾತಾವರಣದಲ್ಲಿ ಕಂಡು ಬರುವ ಅಪರೂಪದ ಹಕ್ಕಿಗಳ ಬಗ್ಗೆ ಹೊರಜಗತ್ತಿಗೆ ಪರಿಚಯ ಮಾಡಲು ಮತ್ತು ಅವುಗಳ ಜೀವನ ಶೈಲಿಯ ಒಂದು ಕಿರು ಅಧ್ಯಾಯನ ಮಾದರಿಯಲ್ಲಿ ನಡೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಆದ್ರೆ ಈ ಭಾಗದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿರುವ ಕಾರಣ ಕಾರ್ಯಕ್ರಮವನ್ನು ಮೊಟಕುಗೊಳಿಸಲಾಗಿತು.