ಸ್ಯಾಂಡಲ್ ವುಡ್ ನ ಕ್ರೇಜಿ ಕ್ವೀನ್ ರಕ್ಷಿತಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ, ಈಗಲೂ ಸಾವಿರಾರು ಅಭಿಮಾನಿಗಳನ್ನು ಹೊಂದಿರುವ ಕಲಾಸಿಪಾಳ್ಯದ ಹುಡುಗಿ ಇಂದು 36ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷವೂ ಪ್ರೇಮ್, ಪತ್ನಿಯ ಹುಟ್ಟಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಲಾಕ್ ಡೌನ್ ಎಫೆಕ್ಟ್ ನಿಂದಾಗಿ ಅದ್ಧೂರಿತನ ದೂರದ ಮಾತಾಗಿದೆ.
ಹಾಗೆಂದು ಹುಟ್ಟುಹಬ್ಬ ತೀರಾ ನಿರಾಶಾದಾಯಕವಾಗುವಂತಾಗಲು ಪ್ರೇಮ್ ಮತ್ತವರ ತಂಡ ಬಿಟ್ಟಿಲ್ಲ. ನಿರ್ದೇಶಕ ಪ್ರೇಮ್, ಮಗ ಸೂರ್ಯ ಹಾಗೂ ಅವರ ಬಳಗ ಸೇರಿಕೊಂಡು ಮನೆಯಲ್ಲಿಯೇ ಅಂದವಾದ ಕೇಕ್ ತಯಾರಿಸಿ ರಕ್ಷಿತಾ ಜನ್ಮದಿನ ಆಚರಿಸಿದ್ದಾರೆ. ಇದೇ ಮೊದಲ ಬಾರಿ ಮನೆಯೊಳಗೇ ಇದ್ದು ರಕ್ಷಿತಾ ಜನ್ಮದಿನ ಆಚರಿಸುತ್ತಿದ್ದೇವೆ ಎಂದು ಪ್ರೇಮ್ ತಿಳಿಸಿದ್ದಾರೆ. ಅದಕ್ಕಾಗಿ ಫಸ್ಟ್ ಟೈಂ ಕೇಕ್ ತಯಾರಿಸುವುದನ್ನೂ ಕಲಿತ ಖುಷಿಯನ್ನು ಅವರು ಹಂಚಿಕೊಂಡಿದ್ದಾರೆ.
https://twitter.com/directorprems/status/1244705418514853888








