ಸಲಿಂಗಕಾಮಿಗಳಿಗೆ ಜೊತೆಯಲ್ಲಿರುವುದಕ್ಕೆ ಅನುಮತಿ ನೀಡಿದ ನ್ಯಾಯಾಲಯ..!
ಉತ್ತರಪ್ರದೇಶ : ಇಬ್ಬರು ಸಲಿಂಗ ಕಾಮಿ ಮಹಿಳೆಯರಿಗೆ ಒಟ್ಟಿಗೆ ಬದುಕುವುದಕ್ಕೆ ರಾಂಪುರ ನ್ಯಾಯಾಲಯವು ಅನುಮತಿ ನೀಡಿದೆ. ಹೌದು (20)ಯುವತಿಯೊಬ್ಬಳು ಉತ್ತರಪ್ರದೇಶದ ರಾಂಪುರ ಶಹಬಾದ್ ನಗರದಲ್ಲಿ ಸುಮಾರು ದಿನಗಳಿಂದ ತನ್ನ ಗೆಳತಿಯೊಂದಿಗೆ ವಾಸವಾಗಿದ್ದಳು.. ಇತ್ತ ಮಗಳು ನಾಪತ್ತೆಯಾಗಿದ್ದರಿಂದ ಪೋಷಕರು ಜುಲೈನಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದರು.
ಆದ್ರೆ ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುತಿ ತನ್ನ ಸ್ನೇಹಿತೆಯ ಜೊತೆ ರಾಂಪುರ ಶಹಬಾದ್ ನಗರದಲ್ಲಿ ತಾನು ತಂಗಿದ್ದ ನಿವಾಸದಲ್ಲಿ ಕಾಣಿಸಿಕೊಂಡಿದ್ದಾಳೆ. ಬಳಿಕ ಆಕೆಯನ್ನ ಕರೆತಂದು ವಿಚಾರಣೆ ನಡೆಸಿದಾಗ ಆಕೆ ಸ್ವಇಚ್ಛೆಯಿಂದಲೇ ಮನೆಯನ್ನ ಬಿಟ್ಟು ಹೋಗಿದ್ದು, ಮುಂದೆಯೂ ಸ್ನೇಹಿತೆಯ ಜೊತೆಯಲ್ಲೇ ಇರುವುದಾಗಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ..
ಗುಡ್ ನ್ಯೂಸ್ : ಮುಂದಿನ ತಿಂಗಳೇ ಮಕ್ಕಳಿಗೆ ಕೋವಿಡ್ ವ್ಯಾಕ್ಸಿನ್
ಬಳಿಕ ಈ ಇಬ್ಬರನ್ನು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಲಾಗಿತ್ತು. ನಂತರ ಇಬ್ಬರಿಗೂ ಜೊತೆಯಾಗಿ ಬದುಕಲು ಅನುಮತಿ ನೀಡಲಾಗಿದೆ. ಈ ಮುನ್ನ ಯುವತಿ ಪೋಷಕರು, ದೂರಿನಲ್ಲಿ ಆಕೆ ಇನ್ನೂ ಅಪ್ರಾಪ್ತ ವಯಸ್ಕಳು ಎಂದು ತಿಳಿಸಿದ್ದರು ಎನ್ನಲಾಗಿದೆ. ಆದರೆ ಯುವತಿ ತನ್ನ ಪ್ರೌಢ ಶಾಲೆಯ ಪ್ರಮಾಣ ಪತ್ರವನ್ನು ತೋರಿಸಿದ್ದಾಳೆ. ಅಲ್ಲದೇ ಯುವತಿಗೆ 20 ವರ್ಷವಾಗಿದ್ದು, ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.








