ಕ್ರಿಪ್ಟೋ ಕರೆನ್ಸಿಗಳ ರಾಜ ಬಿಟ್‌ಕಾಯಿನ್ (BTC) ತನ್ನದೇ ಆದ ದಾಖಲೆಗಳನ್ನು ಮುರಿಯುತ್ತಾ ಸಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಬಿಟ್‌ಕಾಯಿನ್ $1,594 ಲಾಭ ಗಳಿಸಿ, ಗರಿಷ್ಠ ಪ್ರಮಾಣದ ಏರಿಕೆಯನ್ನು ದಾಖಲಿಸಿದೆ. $1,06,058 ರಿಂದ ವಹಿವಾಟು ಆರಂಭಿಸಿದ ಬಿಟ್‌ಕಾಯಿನ್, $1,07,793ರ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರಸ್ತುತ ಇದು $451 ಏರಿಕೆಯೊಂದಿಗೆ $1,06,513 ಕ್ಕೆ ವಹಿವಾಟು ನಡೆಸುತ್ತಿದೆ. ಹೊಸ ದಾಖಲೆಯನ್ನು ಮುರಿಯುವತ್ತ ಬಿಟ್‌ಕಾಯಿನ್ ಮತ್ತೊಮ್ಮೆ ಸಾಗುತ್ತಿದೆ.
ಇತರ ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಏರಿಕೆ:
Ethereum (ETH): ಕ್ರಿಪ್ಟೋ ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ನಾಣ್ಯವಾಗಿರುವ ETH $4,017 ಅನ್ನು ತಲುಪಿದೆ.
ಇತರ ಪ್ರಮುಖ ನಾಣ್ಯಗಳೂ ಉತ್ತಮ ಏರಿಕೆ ದಾಖಲಿಸಿವೆ:
XRP: 2.59% ಏರಿಕೆ
BNB: 1.29% ಏರಿಕೆ
TRON: 2.44% ಏರಿಕೆ
ಬಿಟ್‌ಕಾಯಿನ್ ಮತ್ತು ಇಥೀರಿಯಂ, ಕ್ರಿಪ್ಟೋ ಮಾರುಕಟ್ಟೆಯಲ್ಲಿ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುತ್ತಿದೆ. BTC ತನ್ನ ಗರಿಷ್ಠ ಮಟ್ಟವನ್ನು ಮುಟ್ಟಿರುವುದು ಮತ್ತು ಇಥೀರಿಯಂ ಸಹ ಭರವಸೆಯ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವುದು ಮಾರುಕಟ್ಟೆ ಬುಲ್ಲಿಶ್ (ಏರಿಕೆಯ) ಹಂತವನ್ನು ಪ್ರವೇಶಿಸುತ್ತಿದೆ ಎಂಬುದರ ಸೂಚನೆಯಾಗಿದೆ.
ವಿಶ್ಲೇಷಕರ ಪ್ರಕಾರ, ಬಿಟ್‌ಕಾಯಿನ್ ನಿಕಟ ಭವಿಷ್ಯದಲ್ಲಿ ಹೊಸ ದಾಖಲೆಗಳನ್ನು ಬರೆಯುವ ಸಾಧ್ಯತೆಯಿದೆ. ಇತರ ನಾಣ್ಯಗಳೂ ಹೂಡಿಕೆದಾರರಿಗೆ ಉತ್ತಮ ಲಾಭದ ಕನಸು ತೋರಿಸುತ್ತಿವೆ.








