ಬೆಳಗಾವಿ ಉಪ ಚುನಾವಣೆ ಕಡಿಮೆ ಅಂತರದ ಗೆಲುವು – ವರದಿ ಕೇಳಿದ ವರಿಷ್ಠರು
ಬೆಂಗಳೂರು: ಇತ್ತೀಚಿನ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ.. ಆದ್ರೆ ಈ ಗೆಲುವು ಬಿಒಜೆಪಿ ಹಾಗೂ ವರಿಷ್ಠಿರಿಗೆ ತೃಪ್ತಿ ತಂದಿಲ್ಲ.. ಕಳೆದ ಬಾರಿಯ ಚುನಾವಣೆಯಲ್ಲಿ ,ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ್ ಅಂಗಡಿ ಸುಮಾರು 40 ಲಕ್ಷ ಮತಗಳ ಅಂತರದಲ್ಲಿ ಗೆದ್ದು ಬೀಗಿದ್ದರು. ಆದ್ರೆ ಈ ಬಾರಿ ಅತಿ ಕಡಿಮೆ ಕಡಿಮೆ ವೋಟ್ ಗಳ ಅಂತರದಲ್ಲಿ ಗೆದ್ದಿದ್ದಾರೆ. ಮಂಗಳ ಅಂಗಡಿಗೆ ಸತೀಶ್ ಜಾರಕಿಹೊಳಿ ಟಫ್ ಕಾಂಪಿಟೇಶನ್ ಕೊಟ್ಟಿದ್ದಾರೆ.
ಇತ್ತ ಉಪ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಕಡಿಮೆ ಅಂತರದಿಂದ ಗೆಲುವು ಸಾಧಿಸಿರುವುದಕ್ಕೆ ಬಿಜೆಪಿ ವರಿಷ್ಠರು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಬಿಜೆಪಿ.ಉಸ್ತುವಾರಿ ಅರುಣ್ ಸಿಂಗ್ ಈ ಸಂಬಂಧ ಕಾರಣ ರಾಜ್ಯ ಬಿಜೆಪಿ ನಾಯಕರಿಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.