BJP – Congress : ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ – ಸಿದ್ದರಾಮಯ್ಯ
ಹುಬ್ಬಳ್ಳಿ : ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಡೋಂಗಿ ರಾಜಕೀಯ ಇರಬಾರದು ಅಂತ ಹೇಳಿದ್ದೇನೆ.
ಹಿಂದೆ RSS ಪ್ರಮುಖರು ತ್ರಿವರ್ಣ ರಾಷ್ಟ್ರಧ್ವಜ ಬೇಡ ಅಂದಿದ್ದರು. ನಮ್ಮ ರಾಷ್ಟ್ರಧ್ವಜ, ಸವಿಂಧಾನವನ್ನು ವಿರೋಧ ಮಾಡಿದ್ದರು. ಆರ್‌ಎಸ್‌ಎಸ್‌ನವರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ.?. ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಇವಾಗ ಎನ್‌ಡಿಎ ತೊರಿದಿದ್ದಾರೆ.
ಅವರೊಬ್ಬ ಸಮಾಜವಾದಿ ಹಿನ್ನಲೆಯಿಂದ ಬಂದಿದ್ದವರು. ಕೋಮುವಾದಿ ಪಕ್ಷದ ಸ್ನೇಹ ಬಿಟ್ಟಿದ್ದು ಒಳ್ಳೆಯದು. ರಾಜ್ಯದಲ್ಲಿ ಮೂರನೇ ಸಿಎಮ್ ಆದ್ರೂ ಬರಲಿ ನಾಲ್ಕನೇಯವರಾದ್ರು ಬರಲಿ ನಮಗೇನು ಸಂಬಂಧವಿಲ್ಲ.
ಬಿಎಸ್‌ವೈ ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು, ಅದಿಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದ್ರೆ ಬೊಮ್ಮಾಯಿವರ ಬಗ್ಗೆ ನಂಗೆ ಮಾಹಿತಿ ಇಲ್ಲ. ಟ್ವೀಟ್ ಮಾಡಿದವರನ್ನ ಕೇಳಿ, ನಾನಂತು ಟ್ವೀಟ್ ಮಾಡಿಲ್ಲ. ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ.
ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ, ಅಲ್ಲೆಲ್ಲಾ ಎಲೆಕ್ಷನ್ ಗೆ ನಿಲ್ಲೊಕ್ಕಾಗುತ್ತಾ.. ಸಧ್ಯ ಬಾದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ಹೇಳ್ತಿನಿ ಎಂದಿದ್ದಾರೆ..








